ಮಂಗಳೂರು (ಅ.21):  ನವರಾತ್ರಿ ಧಾರ್ಮಿಕ ಕಾರ್ಯದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೋಯಿದ್ದಿನ್ ಬಾವಾ ಭಾಗಿಯಾಗಿದ್ದು,  ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

ಸುಂಕದಕಟ್ಟೆ ಶ್ರೀ ಅಂಬಿಕಾ  ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಗೆ ಬಾವಾ ಭಾಗಿಯಾಗಿದ್ದ ಬಗ್ಗೆ ಮನವಿ ಮಾಡಿದ್ದಾರೆ. 
 ಇಲ್ಲಿ ನಡೆದ ಕೊಪ್ಪರಿಗೆ ಮುಹೂರ್ತದಲ್ಲಿ ಅನ್ಯಧರ್ಮದ ವ್ಯಕ್ತಿ ಭಾಗಿಯಾಗಿದ್ದು ಇದರಿಂದ ಹಿಂದೂ ಸಮಾಜಕ್ಕೆ ನೋವಾಗಿದೆ ಎಂದು ಹೇಳಿದ್ದಾರೆ.  

ಲಾಕ್‌ಡೌನ್: ಬಡ ಜನರಿಗೆ ಆಹಾರ ಕಿಟ್ ವಿತರಿಸಿದ ಕಾಂಗ್ರೆಸ್ ಮಾಜಿ ಶಾಸಕ ...

ಕ್ಷೇತ್ರದಲ್ಲಿ ಇಂತಹ ಯಾವುದೇ ಘಟನೆಗಳು ಪುನರಾವರ್ತನೆಯಾಗದಂತೆ ಮುತುವರ್ಜಿ ವಹಿಸಲು ಮನವಿ ಮಾಡಿದ್ದಾರೆ. ಬಳಿಕ ಕ್ಷೇತ್ರದಲ್ಲಿ ಆದ ಪ್ರಮಾದಕ್ಕೆ ಕ್ಷಮೆ ನೀಡುವಂತೆ  ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದ್ದು ಇದರಲ್ಲಿ ವಿಎಚ್‌ಪಿ ಮುಖಂಡ ಗೋಪಾಲ್ ಕುತ್ತಾರ್, ಶರಣ್ ಪಂಪ್ವೆಲ್ ಭಾಗಿಯಾಗಿದ್ದಾರೆ. 


 
ಬೆದರಿಕೆ : ಇನ್ನು ಹಿಂದೂ ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದಕ್ಕೆ ಮೋಯಿದ್ದೀನ್ ಬಾವಾಗೆ ಬೆದರಿಕೆ ಒಡ್ಡಲಾಗಿದೆ.  ನವರಾತ್ರಿ ಹಿನ್ನೆಲೆ ಕ್ಷೇತ್ರದ ಆಡಳಿತ ಮಂಡಳಿ ಮನವಿ ಮೇರೆಗೆ ದೇವಾಲಯಕ್ಕೆ ಹೋಗಿದ್ದ ಬಾವಾಗೆ 'ಕೊಪ್ಪರಿಗೆ ಇಡುವುದು' ಎಂಬ ಧಾರ್ಮಿಕ ಕಾರ್ಯದಲ್ಲಿ  ಭಾಗಿಯಾಗಿದ್ದಕ್ಕೆ ಆಕ್ಷೇಪಿಸಲಾಗಿದೆ. 

ಆಹಾರ ಕಿಟ್‌ನಲ್ಲಿ ದೊಡ್ಡ ಫೋಟೋ, ಮಾಜಿ ಕೈ ಶಾಸಕನ ವಿರುದ್ಧ ಟೀಕೆ..! ...

ಮುಬೈನಿಂದ ಕರೆ ಮಾಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಬೆದರಿಕೆ ಹಾಕಲಾಗಿದ್ದು, ಹಿಂದೂ ದೇವಸ್ಥಾನದಲ್ಲಿ ನೀವು ಯಾಕೆ ಕೊಪ್ಪರಿಗೆ ಇಟ್ಟಿದ್ದು?  ಇದು ನೆಹರೂ ದೇಶವಲ್ಲ, ಮೋದಿಯ ದೇಶ ನಿನಗೆ ಎಚ್ಚರಿಕೆ. ದನ ತಿಂದು ಹೀಗೆಲ್ಲಾ ದೇವಸ್ಥಾನಕ್ಕೆ ಹೋದ್ರೆ ಹುಷಾರ್ ಎಂದು ಕರೆ ಮಾಡಿ ತುಳುವಿನಲ್ಲಿ ಎಚ್ಚರಿಕೆ ನೀಡಲಾಗಿದೆ. 

ಕರೆ ಮಾಹಿತಿ

ಮುಂಬೈ ವ್ಯಕ್ತಿ: ಮೊಯಿದ್ದೀನ್ ಬಾವಾ ಅಲ್ವಾ?

ಬಾವಾ: ಹೌದು, ಮಾತಾಡಿ

ಮುಂಬೈ ವ್ಯಕ್ತಿ: ನೀವು ದೇವಸ್ಥಾನದಲ್ಲಿ ಕೊಪ್ಪರಿಗೆ ಇಡಲು ಹೋದ್ರಲ್ವಾ? ತಪ್ಪು ಕಾಣಿಸಿಲ್ವಾ ನಿಮಗೆ?

ಬಾವಾ: ಹೌದು ಹೋಗಿದ್ದೆ..

ಮುಂಬೈ ವ್ಯಕ್ತಿ: ನಾನು ಮುಂಬೈನಿಂದ ಮಾತನಾಡ್ತಿರೋದು..ಹಿಂದೂ ದೇವಸ್ಥಾನಕ್ಕೆ ಹೋಗಿ ನೀವು ಕೊಪ್ಪರಿಗೆ ಇಡೋದಂದ್ರೆ ಏನು? ಅವರು ಮರ್ಯಾದಿ ಕೊಟ್ಟು ಕರೆದ್ರು ನಿಜ, ಆದ್ರೆ ನೀವ್ಯಾಕೆ ಹೋದ್ರಿ? ಬರಲ್ಲ ಅನ್ನಬೇಕಿತ್ತು..

ಬಾವಾ: ಹಲೋ ನೀವು ಅಲ್ಲಿನ ಸ್ವಾಮಿಗಳತ್ರ ಕೇಳಿ

ಮುಂಬೈ ವ್ಯಕ್ತಿ: ಸ್ವಾಮಿಗಳತ್ರ ಮಾತನಾಡಿಯೇ ನಿಮ್ಮತ್ರ ಮಾತನಾಡೋದು, ಇದು ನಿಮ್ಮ ನೆಹರೂ ದೇಶವಲ್ಲ, ಇದು ಮೋದಿ ದೇಶ ಗೊತ್ತಾಯ್ತಾ?

ಬಾವಾ: ಮೋದಿ ದೇಶ ಆಗಿರಬಹುದು, ಆದ್ರೆ ಅವರು ಇದನ್ನ ಹಣ ಕೊಟ್ಟು ತೆಗೊಂಡಿಲ್ಲ

ಮುಂಬೈ ವ್ಯಕ್ತಿ: ಕ್ರಯಕ್ಕೆ ತೆಗೆದುಕೊಂಡದ್ದಲ್ಲ, ಇದು ನಮ್ಮದೇ ದೇಶ..

ಬಾವಾ: ಏ..ಪೋನ್ ಇಡೋ

ಮುಂಬೈ ವ್ಯಕ್ತಿ: ಫೋನ್ ಇಡು ಅಂತ ಹೇಳೋಕೆ ನೀನ್ಯಾರೋ? ಇನ್ನು ನೀನು ಹಾಗೆ ಹೋಗಿ ನೋಡು, ದನ ತಿಂದು ದೇವಸ್ಥಾನಕ್ಕೆ ಹೋಗ್ತೀಯಾ?

ಪೊಲೀಸರಿಗೆ ದೂರು ನೀಡಲು ನಿರ್ಧಾರ: ದೇವಾಲಯಕ್ಕೆ ಹೋಗಿದ್ದಕ್ಕೆ ಬೆದರಿಕೆ ಒಡ್ಡಲಾಗಿದ್ದು, ಈ ಸಂಬಂಧ ಪೊಲೀಸ್ ದೂರು‌ ನೀಡಲು ಮಾಜಿ ಶಾಸಕ ಮೋಯಿದ್ದಿನ್ ಬಾವಾ ಚಿಂತನೆ ನಡೆಸಿದ್ದಾರೆ.