Asianet Suvarna News Asianet Suvarna News

ಬಳ್ಳಾರಿ : ಮಾನಸಿಕ ಅಸ್ವಸ್ಥನ ಅಂತ್ಯಕ್ರಿಯೆಗೆ ಸಾವಿರಾರು ಜನ!

  • ಜನಪ್ರಿಯ ವ್ಯಕ್ತಿಗಳು ಮೃತಪಟ್ಟಾಗ ಸಾವಿರಾರು ಜನ ಸೇರಿ ಅಂತಿಮದರ್ಶನ ಪಡೆಯುವುದು ಸಾಮಾನ್ಯ ಸಂಗತಿ.
  • ಹಡಗಲಿಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಮೃತಪಟ್ಟಾಗ ಸಾವಿರಾರು ಜನ ಅಂತಿಮ ನಮನ ಸಲ್ಲಿಸಿದ ಕುತೂಹಲಕಾರಿ ಘಟನೆ ನಡೆದಿದೆ.
Thousands of people gathered for insane Last Rites at Huvinahadali snr
Author
Bengaluru, First Published Nov 16, 2021, 9:16 AM IST

 ಹಡಗಲಿ (ನ.16):  ಜನಪ್ರಿಯ ವ್ಯಕ್ತಿಗಳು ಮೃತಪಟ್ಟಾಗ ಸಾವಿರಾರು ಜನ ಸೇರಿ ಅಂತಿಮ ದರ್ಶನ ಪಡೆಯುವುದು ಸಾಮಾನ್ಯ ಸಂಗತಿ. ಆದರೆ ಹಡಗಲಿಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ (insane) ಮೃತಪಟ್ಟಾಗ ಸಾವಿರಾರು ಜನ ಅಂತಿಮ ನಮನ ಸಲ್ಲಿಸಿದ ಕುತೂಹಲ ಕಾರಿ ಘಟನೆ ನಡೆದಿದೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಪಟ್ಟಣದ ಬಸವ ಅಲಿಯಾಸ್‌ ಹುಚ್ಚ ಬಸ್ಯಾ(45) ಎಂಬಾತನೇ ಸಾವಿರಾರು ಜನರ ಪ್ರೀತಿ (Love) ಗಳಿಸಿದ ವ್ಯಕ್ತಿ.

ಹುಚ್ಚಾ ಬಸ್ಯಾ ಹಡಗಲಿ (Hadagali) ಪಟ್ಟಣದ ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತದಲ್ಲಿ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ. ಬಳಿಕ ಈತನನ್ನು ಆಸ್ಪತ್ರೆಗೆ (Hospital) ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಭಾನುವಾರ ಪಟ್ಟಣದಲ್ಲಿ ಸಾವಿರಾರು ಮಂದಿ ಬಸ್ಯಾನ ಅಂತ್ಯ ಕ್ರಿಯೆಯಲ್ಲಿ (Last right) ಭಾಗವಹಿಸಿದ್ದರು. ಬಸ್ಯಾನ ಮೃತದೇಹವನ್ನು ವಿವಿಧ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಪಟ್ಟಣದ ಮುಖ್ಯ ವೃತ್ತಗಳಲ್ಲಿ ಬಸ್ಯಾನ ಫ್ಲೆಕ್ಸ್‌ (Flex), ಬ್ಯಾನರ್‌ ಅಳವಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದು ಬಸ್ಯಾನ ಜನಪ್ರಿಯತೆಯ ದ್ಯೋತಕದಂತಿತ್ತು. ಅನೇಕರು ಬಸ್ಯಾನ ಮುಗ್ಧತೆ ಹಾಗೂ ಒಡನಾಟವನ್ನು ಸಾಮಾಜಿಕ ಜಾಲತಾಣದಲ್ಲೂ (Social Media) ಹಂಚಿಕೊಂಡಿದ್ದಾರೆ.

 

ಕೆಲವರಲ್ಲಿ ಮಾತ್ರ ಭಿಕ್ಷೆ (Begging) ಕೇಳುತ್ತಿದ್ದ: ಯಾರೇ ಕಂಡರೂ ‘ಅಪ್ಪಾಜಿ’ ಎಂದೇ ಮಾತನಾಡಿಸುತ್ತಿದ್ದ ಬಸ್ಯಾ ಒಂದು ರುಪಾಯಿ (Rs 1 ) ಮಾತ್ರ ಕೇಳುತ್ತಿದ್ದ. ಹೆಚ್ಚು ಹಣ ಕೊಟ್ಟರೂ ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಬಸ್ಯಾ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌ (MP prakash), ಹಾಲಿ ಶಾಸಕ ಪರಮೇಶ್ವರ ನಾಯ್ಕ (Parameshwar Naik) ಸೇರಿದಂತೆ ಎಲ್ಲ ರಾಜಕೀಯ (Politics) ನಾಯಕರನ್ನು ನಿರರ್ಗಳವಾಗಿ ಕರೆಯುತ್ತಿದ್ದ ಆತ ಪಟ್ಟಣದ ಅದೃಷ್ಟ ವ್ಯಕ್ತಿ ಎಂದೇ ಬಿಂಬಿತನಾಗಿದ್ದ. ಕೆಲವರಲ್ಲಿ ಮಾತ್ರ ಈತ ಭಿಕ್ಷೆ ಬೇಡುತ್ತಿದ್ದ. ಈತ ಭಿಕ್ಷೆ ಬೇಡಿದವರಿಗೆ ಅದೃಷ್ಟ (Luck) ಖುಲಾಯಿಸುತ್ತದೆ ಎಂಬ ನಂಬಿಕೆ ಜನರಲ್ಲಿತ್ತು. ಕೆಲ ದಿನಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ ಬಸ್ಯಾ ಗುಡಿ ಗುಂಡಾರದಲ್ಲಿ ವಾಸವಾಗಿರುತ್ತಿದ್ದ. ಈತನ ಮುಗ್ಧತೆಯನ್ನು ಕಂಡು ಸಾರ್ವಜನಿಕರು ಊಟ, ಉಪಾಹಾರ ನೀಡುತ್ತಿದ್ದರು. ಗಮನಾರ್ಹ ಸಂಗತಿ ಎಂದರೆ ಬಸ್ಯಾ ಮಾನಸಿಕ ಅಸ್ವಸ್ಥನಾಗಿದ್ದರೂ ಯಾರಿಗೂ ತೊಂದರೆ ಕೊಟ್ಟಿರಲಿಲ್ಲ.

ಮಾನಸಿಕ ಅಸ್ವಸ್ಥನಿಗೆ ಸಹಾಯ :   ಕೊಳಕು ಬಟ್ಟೆ, ನಡುಗುವ ಮೈ, ಮುಖದಲ್ಲಿ ಗಾಯ, ಕಪ್ಪು-ಬಿಳುಪಿನ ದಾಡಿ, ಮುಷ್ಠಿಯಲ್ಲಿ ಅನ್ನ ಹಿಡಿದು ನೀರಿಗಾಗಿ ರಸ್ತೆಯಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಮಡಿವಾಳ ಸಂಚಾರ ಠಾಣೆ ಪೊಲೀಸರು(Traffic Police) ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ.

ಪತ್ನಿಯ ಅಗಲಿಕೆಯ ನೋವಿನಲ್ಲಿ ಮಾನಸಿಕ ಖಿನ್ನತೆಗೆ(Mental Depression) ಒಳಗಾಗಿ ಊರು-ಮನೆ ತೊರೆದು ಭಿಕ್ಷುಕನಂತೆ(Beggar) ಅಲೆಯುತ್ತಿದ್ದ ವ್ಯಕ್ತಿಗೆ ಪುನರ್‌ ಜೀವನ ಕಲ್ಪಿಸಿರುವ ಮಡಿವಾಳ ಸಂಚಾರ ಠಾಣೆ ಪೊಲೀಸರ ಈ ಮಾದರಿ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಎರಡು ದಿನದ ಹಿಂದೆ ಬೆಳಗ್ಗೆ 11.30ರ ಸುಮಾರಿಗೆ ಮಡಿವಾಳ ಸಂಚಾರ ಪೊಲೀಸ್‌ ಠಾಣೆ ಎದುರಿನ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನಂತೆ ಕಾಣುವ ವ್ಯಕ್ತಿಯೊಬ್ಬ ಕೈಯಲ್ಲಿ ಅನ್ನ ಹಿಡಿದುಕೊಂಡು ದಾರಿಹೋಕರನ್ನು ನೀರು ಕೇಳುತ್ತಿದ್ದ. ಈ ವೇಳೆ ಸಮೀಪದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೊಲೀಸರು ಆ ವ್ಯಕ್ತಿಯನ್ನು ಕಂಡು ಸಮೀಪಕ್ಕೆ ಕರೆದು ಕುಡಿಯಲು ನೀರು ಕೊಟ್ಟಿದ್ದಾರೆ. ಬಳಿಕ ಆತನ ಪೂರ್ವಾಪರ ವಿಚಾರಣೆ ವೇಳೆ ಮನಕಲಕುವ ಕಥೆಯೊಂದು ಹೊರಬಿದ್ದಿದೆ.

ಆ ವ್ಯಕ್ತಿಯ ಹೆಸರು ಶಂಕರ್‌. ಸುಮಾರು 42 ವರ್ಷದ ಆತ ಪಾವಗಡ ಮೂಲದವರು. ವೃತ್ತಿಯಲ್ಲಿ ಟೈಲರ್‌ ಆಗಿದ್ದ ಶಂಕರ್‌ ಮಡದಿ ಮಕ್ಕಳೊಂದಿಗೆ ಸಂತೋಷದಿಂದ ಜೀವನ ದೂಡುತ್ತಿದ್ದರು. ಕಳೆದ ಎರಡೂವರೆ ವರ್ಷದ ಹಿಂದೆ ಕಡಿಮೆ ರಕ್ತದೊತ್ತಡದಿಂದ ಪತ್ನಿ(Wife) ಮೃತಪಟ್ಟಿದ್ದರು(Death). ಇದರಿಂದ ತೀವ್ರ ನೊಂದಿದ್ದ ಶಂಕರ್‌, ಬಳಿಕ ಊರು-ಮನೆ ತೊರೆದು ಬೆಂಗಳೂರಿಗೆ(Bengaluru) ಬಂದಿದ್ದರು. ನಗರದಲ್ಲಿ ಮೃತ ಪತ್ನಿಯ ನೆನಪಿನಲ್ಲಿ ಅಲೆಮಾರಿಯ ಹಾಗೆ ಅಲೆದಾಡುತ್ತಾ ಭಿಕ್ಷೆ(Begging) ಬೇಡಿಕೊಂಡು ದಿನ ದೂಡುತ್ತಿದ್ದರು.

ತಾಯಿ ಶವದೊಂದಿಗೆ 5 ದಿನ ಕಳೆದ ಮಾನಸಿಕ ಅಸ್ವಸ್ಥ ಪುತ್ರಿ!

ಬಳಿಕ ಶಂಕರ್‌ ಅವರನ್ನು ಸಲೂನ್‌ಗೆ ಕರೆದೊಯ್ದು ಕಟಿಂಗ್‌, ಶೇವಿಂಗ್‌ ಮಾಡಿಸಿ ಸ್ನಾನ ಮಾಡಿಸಲಾಯಿತು. ನಂತರ ಆಸ್ಪತ್ರೆಗೆ ಕರೆದೊಯ್ದು ಗಾಯಕ್ಕೆ ಚಿಕಿತ್ಸೆ(Treatment) ಕೊಡಿಸಲಾಯಿತು. ಹಳೆಯದನ್ನೆಲ್ಲ ಮರೆತು ಹೊಸ ಬದುಕು ಕಟ್ಟಿಕೊಳ್ಳುವಂತೆ ಶಂಕರ್‌ಗೆ ಧೈರ್ಯ ತುಂಬಲಾಗಿದೆ. ಶಂಕರ್‌ಗೆ ಟೈಲರ್‌ ಕೆಲಸದ ಅನುಭವ ಇರುವುದರಿಂದ ಕೆಲಸಕ್ಕೆ ಗಾರ್ಮೆಂಟ್‌ ಕಾರ್ಖಾನೆಯ ಅಧಿಕಾರಿಗಳ ಜತೆಗೆ ಮಾತನಾಡಿ ಒಪ್ಪಿಸಲಾಗಿದೆ. ಸದ್ಯ ಶಂಕರ್‌ ಲವಲವಿಕೆಯಿಂದ ಇದ್ದು, ಎರಡು ದಿನಗಳಲ್ಲಿ ಕೆಲಸಕ್ಕೆ ಸೇರಲಿದ್ದಾರೆ ಎಂದು ಪೊಲೀಸರು(Police) ಮಾಹಿತಿ ನೀಡಿದರು.

Follow Us:
Download App:
  • android
  • ios