ಜನರಿಗೆ ಕಂಟಕವಾದ ಬ್ಯಾರೇಜ್ ಹಿನ್ನೀರು : ಊರನ್ನೇ ಶಿಫ್ಟ್ ಮಾಡಲು ಗ್ರಾಮಸ್ಥರ ಪಟ್ಟು!

ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ ಪ್ರವಾಹ ಪರಿಸ್ಥಿತಿಯುಂಟಾಗಿ ಅಪಾರ ಪ್ರಮಾಣದ ನೀರು ಜಲಾಶಯಗಳಿಗೆ ಹರಿದು ಬರುತ್ತಿದೆ. ಇದರಿಂದ ಅಪಾರ ಪ್ರಮಾಣದ ನೀರು ಹೊರಬಿಡುತ್ತಿರುವುದರಿಂದ ಆತಂಕ ಇನ್ನಷ್ಟು ಹೆಚ್ಚಿಸಿದೆ

 thorny backwater for people villagers ready to shift village rav

ವರದಿ : ಗಿರೀಶ್ ಕಮ್ಮಾರ, ಏಷ್ಯ ನೆಟ್ ಸುವರ್ಣ ನ್ಯೂಸ್ ಗದಗ 

ಗದಗ (ಜು.17): ಕಳೆದ ಕೆಲ ದಿನಗಳಿಂದ ರಾಜ್ಯದಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಕಟ್ಟೆಗಳು ತುಂಬಿವೆ‌.. ಅಪಾರ ಪ್ರಮಾಣದ ನೀರು ಜಲಾಶಯಗಳಿಗೆ ಹರಿದು ಬರ್ತಿದೆ.. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ಕೂಡ ಭರ್ತಿಯಾಗುವ ಹಂತದಲ್ಲಿದೆ‌. ಒಳ ಹರಿವು ಹೆಚ್ಚಾಗ್ತಿದ್ದಂತೆ, ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರನ್ನ ಹರಿದು ಬಿಡಲಾಗ್ತಿದೆ.. 

ಬರೋಬ್ಬರಿ 3 ಟಿಎಮ್ ಸಿ(TMC) ಸಾಮರ್ಥ್ಯದ ಬ್ಯಾರೇಜ್(Barrage) ನಲ್ಲಿ ಸುಮಾರು 2 ಟಿಎಮ್ ಸಿ ನೀರು ಸಂಗ್ರಹವಾಗಿದೆ.. ಆದ್ರೆ, ಇದೇ ನೀರಿನಿಂದಾಗಿ ಹಮ್ಮಿಗಿ ಗ್ರಾಮದಲ್ಲಿ ಆತಂಕ ಶುರುವಾಗಿದೆ‌.. ಬ್ಯಾರೇಜ್ ನಲ್ಲಿ ನೀರು ನಿಲ್ತಿದ್ದಂತೆ, ಗ್ರಾಮದಲ್ಲಿ ಅಂತರ್ಜಲ ಹೆಚ್ಚಾಗಿ ಮನೆಗಳ ಗೋಡೆ ಶಿಥಿಲಾವಸ್ಥೆ ತಲುಪುತ್ತಿವೆ.  2012 ರಿಂದ ಬ್ಯಾರೇಜ್ ನಲ್ಲಿ ನೀರು ನಿಲ್ಲಿಸಲಾಗ್ತಿದೆ.. ಆಗ್ಲಿಂದ ಈ ವರೆಗೆ ಗ್ರಾಮದಲ್ಲಿ ನಿರಂತರವಾಗಿ ತಂಪು ಹಿಡೀತಿದೆ.. 2012 ರಿಂದ ಈ ವರೆಗೆ ನೂರುರಾರು ಮನೆಗಳ ಗೋಡೆ ಕುಸಿದಿವೆ. ಇದನ್ನೂ ಓದಿ:ನರಗುಂದ: ಕುಂಟುತ್ತ ಎಂಟನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ..!

ಗ್ರಾಮದ ಬ್ಯಾಂಕ್, ಪಂಚಾಯ್ತಿ ಕಟ್ಟಡದಲ್ಲಿ ನಿಂತ ನೀರು: ಎತ್ತರ ಪ್ರದೇಶದಲ್ಲಿನ ಬ್ಯಾರೇಜ್ ನಿಂದ ಭೂ ಗರ್ಭದಲ್ಲಿ ನಿಗೂಢವಾಗಿ ಹರೆದು ಬರೋ ನೀರು ಗ್ರಾಮಸ್ಥರ ನಿದ್ದೆ ಕೆಡೆಸಿದೆ.. ಗ್ರಾಮದ ಅಂಗನವಾಗಿ, ಬ್ಯಾಂಕ್, ಪಂಚಾಯ್ತಿ ಕಟ್ಟಡದ ಗೋಡೆಗಳು ತೇವವಾಗಿವೆ.. ಅಲ್ದೆ, ಗೋಡೆಯಿಂದ ನೀರು ಜಿನುಗುತ್ತಿದ್ದು ಕಟ್ಟಡ ಆವರಣದಲ್ಲಿ ನೀರು ಸಂಗ್ರಹವಾಗ್ತಿದೆ.. 

ಸುರಕ್ಷಿತ ಪ್ರದೇಶಕ್ಕೆ ಶಿಫ್ಟ್ ಮಾಡಲು ಗ್ರಾಮಸ್ಥರ ಮನವಿ: ಬ್ಯಾರೇಜ್ ವ್ಯಾಪ್ತಿಗೆ ಬರುವ ಗುಮ್ಮಗೋಳ, ಬಿದರಳ್ಳಿ ಗ್ರಾಮಗಳನ್ನ ಈಗಾಗ್ಲೆ ಶಿಫ್ಟ್ ಮಾಡಲಾಗಿದೆ.. ಇದೇ ಮಾದರಿಯಲ್ಲಿ ಹಮ್ಮಿಗಿ ಗ್ರಾಮವನ್ನ ಶಿಫ್ಟ್ ಮಾಡ್ಬೇಕು ಅಂತ ಗ್ರಾಮಸ್ಥರು ಆಗ್ರಹಿಸ್ತಿದ್ದಾರೆ.. ಗ್ರಾಮದ ಸಮಸ್ಯೆ ಬಗ್ಗೆ ಈ ಹಿಂದಿನಿಂದ್ಲೂ ಶಾಸಕ ರಾಮಪ್ಪ ಲಮಾಣಿ ಅವರಿಗೆ ಮನವಿ ಸಲ್ಲಿಸ್ತಾನೆ ಬಂದಿದಿವಿ, ಆದ್ರೆ ಈ ವರೆಗೂ ಪ್ರಯೋಜನೆಯಾಗಿಲ್ಲ ಅಂತಾ ಗ್ರಾಮದ ಯುವಕ ಮಾಹಾಂತೇಶ್ ಏಷ್ಯ ನೆಟ್ ಸುವರ್ಣ ನ್ಯೂಸ್ ಎದ್ರು ಹೇಳಿಕೊಂಡಿದಾರೆ. ಇದನ್ನೂ ಓದಿ:ಗದಗ: ತುಂಗಭದ್ರಾ ಅಬ್ಬರಕ್ಕೆ ಸಾವಿರಾರು ಹೆಕ್ಟೇರ್‌ ಬೆಳೆ ಜಲಾವೃತ

ಗ್ರಾಮದಲ್ಲಿ ಸುಮಾರು 3 ಸಾವಿರ ಮನೆಗಳಿವೆ. ಅಂದಾಜು ಏಳು ಸಾವಿರ ಜನಸಂಖ್ಯೆ ಹೊಂದಿರೋ ಗ್ರಾಮವನ್ನ ಶಿಫ್ಟ್ ಮಾಡ್ಬೇಕು ಅಂತಾ ಗ್ರಾಮಸ್ಥರು ಆಗ್ರಹಿಸ್ತಿದ್ದಾರೆ.. ಬ್ಯಾರೇಜ್ ಹಿನ್ನೀರಿನಿಂದಾಗಿ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಿಗೆಯಾಗಿದೆ.. ಇದ್ರಿಂದ ಅನಾರೋಗ್ಯದ ಸಮಸ್ಯೆ ಎದುರಾಗ್ತಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಬೇಕು ಅಂತಾ ಗ್ರಾಮಸ್ಥರು ಆಗ್ರಹಿಸ್ತಿದ್ದಾರೆ..

Latest Videos
Follow Us:
Download App:
  • android
  • ios