ತೀರ್ಥಹಳ್ಳಿ(ಜೂ.23): ವಿಶ್ವಕ್ಕೆ ಕೊರೋನಾ ಹಬ್ಬಿಸಿ ಲಕ್ಷಗಟ್ಟಲೆ ಜನರ ಜೀವ ಬಲಿ ತೆಗೆದುಕೊಂಡ ಚೀನಾ ದೇಶದ ಗಡಿಯಲ್ಲಿ ತಕರಾರು ಮಾಡುತ್ತಿದೆ. ಚೀನಾದಿಂದ ಆಮದಾದ ಎಲ್ಲ ವಸ್ತುಗಳನ್ನು ಬಹಿಷ್ಕರಿಸಿ ಎಂದು ಶಾಸಕ ಆರಗ ಜ್ಞಾನೇಂದ್ರ ಕರೆ ನೀಡಿದರು. 

ಚೀನಾ ದುರಾಕ್ರಮಣಕ್ಕೆ ಬಲಿಯಾದ ನಮ್ಮ ಯೋದರಿಗೆ ಶೃದ್ಧಾಂಜಲಿ ಅರ್ಪಿಸಲು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತೀಯರಾದ ನಾವು ಸೈನ್ಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು ಮತ್ತು ಚೀನಾದಿಂದ ಆಮದಾಗುವ ಎಲ್ಲಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದರು.

ಭಾರತ- ಚೀನಾದ ಗಡಿಭಾಗದಲ್ಲಿ ಭಾರತದ ಭೂಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯನಡೆಸಲು ಪ್ರಾರಂಭಿಸಿದ್ದರಿಂದ ಚೀನಾದವರು ಸಹಿಸಲಾಗದೇ ಭಾರತೀಯ ಸೈನ್ಯದ ಮೇಲೆ ಎರಗಿ 20 ಸೈನಿಕರನ್ನು ಅಮಾನುಷವಾಗಿ ಬಲಿತೆಗೆದುಕೊಂಡಿದೆ ಮತ್ತು ಎರಡು ದೇಶಗಳ ನಡುವಿನ ಶಾಂತಿ ಒಪ್ಪಂದದ ಉಲ್ಲಂಘಿಸಿದೆ. ಅದರಿಂದ ಚೀನಾಕ್ಕೆ ತಕ್ಕಪಾಠ ಕಲಿಸಿ ಚೀನಾದಿಂದ ಆಮದಾಗುವ ವಸ್ತುಗಳನ್ನು ಬಹಿಷ್ಕರಿಸಿ ಎಂದು ತಿಳಿಸಿದರು.

ಸತ್ಯ ಒಪ್ಪಿಕೊಂಡ ಚೀನಾ: ಗಲ್ವಾನ್‌ ಘರ್ಷಣೆಯಲ್ಲಿ ಚೀನಾ ಕಮಾಂಡರ್‌ ಸಾವು

ತಾ. ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ತಾಪಂ ಸದಸ್ಯರಾದ ಸಾಲೇಕೊಪ್ಪ ರಾಮಚಂದ್ರ, ಕುಕ್ಕೆ ಪ್ರಶಾಂತ್‌, ಮಂಜುನಾಥ್‌, ಚಂದವಳ್ಳಿ ಸೋಮಶೇಖರ್‌ , ಕವಿರಾಜ್‌, ಬಿಜೆಪಿ ಮುಂಖಡರಾದ ನಾಗರಾಜ್‌ ಶೆಟ್ಟಿ, ಕೋಣದೂರು ಮೋಹನ್‌, ಅಶೋಕ್‌ ಮೂರ್ತಿ,ಡಾಕಮ್ಮ ಇದ್ದರು.