Asianet Suvarna News Asianet Suvarna News

ಸತ್ಯ ಒಪ್ಪಿಕೊಂಡ ಚೀನಾ: ಗಲ್ವಾನ್‌ ಘರ್ಷಣೆಯಲ್ಲಿ ಚೀನಾ ಕಮಾಂಡರ್‌ ಸಾವು

ಗಲ್ವಾನ್ ಘರ್ಷಣೆಯಲ್ಲಿ ತಮ್ಮ ದೇಶದ ಸೈನಿಕರು ಪ್ರಾಣತೆತ್ತಿದ್ದಾರೆ ಎನ್ನುವುದನ್ನು ಚೀನಾ ಕೊನೆಗೂ ಒಪ್ಪಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

China Admits Casualties Commanding Officer was Killed in Galwan Clash
Author
New Delhi, First Published Jun 23, 2020, 7:53 AM IST

ನವದೆಹಲಿ(ಜೂ.23): ಪೂರ್ವ ಲಡಾಖ್‌ನ ಗಡಿಭಾಗವದಾದ ಗಲ್ವಾನ್‌ನಲ್ಲಿ ಜೂನ್ 15ರಂದು ಭಾರತ-ಚೀನಿ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಈ ಘಟನೆಯಲ್ಲಿ ಭಾರತದ 20 ಯೋಧರು ವೀರಮರಣವನ್ನು ಅಪ್ಪಿದ್ದರು. ಆದರೆ ಕುತಂತ್ರಿ ಚೀನಾ ತನ್ನ ದೇಶದ ಸೈನಿಕರ ಸಾವು-ನೋವಿನ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಆದರೆ ಇದೀಗ ಸತ್ಯ ಒಪ್ಪಿಕೊಂಡಿದೆ. 

ಹೌದು, ಜೂ.15ರಂದು ಗಲ್ವಾನ್‌ ವ್ಯಾಲಿಯಲ್ಲಿ ನಡೆದ ಸಂಘರ್ಷದ ವೇಳೆ ತನ್ನ ಎಷ್ಟು ಸೈನಿಕರು ಮೃತಪಟ್ಟಿದ್ದಾರೆ ಎಂದು ಚೀನಾ ಇದುವರೆಗೂ ಖಚಿತಪಡಿಸಲ್ಲ. ಆದರೆ, ಕಳೆದ ವಾರ ನಡೆದಿದ್ದ ಸೇನಾ ಮಟ್ಟದ ಮಾತುಕತೆಯ ವೇಳೆ ಚೀನಾದ ಕಮಾಂಡಿಂಗ್‌ ಅಧಿಕಾರಿಯೊಬ್ಬರು ಮೃತಪಟ್ಟಿದ್ದನ್ನು ಚೀನಾ ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಮೂಲಕ ಸಂಘರ್ಷದಲ್ಲಿ ತನ್ನ ಕಡೆಯೂ ಸಾವು ಸಂಭವಿಸಿದೆ ಎಂಬುದನ್ನು ಚೀನಾ ಒಪ್ಪಿಕೊಂಡಂತಾಗಿದೆ. ಇದೇ ವೇಳೆ ಸೇನಾ ಮೂಲಗಳ ಪ್ರಕಾರ, ಚೀನಾದ 45 ಸೈನಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಚೀನಾಕ್ಕೆ ಮತ್ತೆ ಭಾರತ ಭಾರತ ಸಡ್ಡು

ಚೀನಾದಿಂದ ಭಾರತ ಮೇಲೆ ಸೈಬರ್‌ ದಾಳಿ ಸಾಧ್ಯತೆ

ನವದೆಹಲಿ: ಗಡಿಯಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ಚೀನಾ ಇದೀಗ ಭಾರತದ ಮೇಲೆ ಸೈಬರ್‌ ದಾಳಿ ನಡೆಸಬಹುದು ಎಂದು ಕಂಪ್ಯೂಟರ್‌ ತುರ್ತು ಪ್ರತಿಕ್ರಿಯೆ ತಂಡ- ಭಾರತ (ಸಿಇಆರ್‌ಟಿ-ಇನ್‌) ಎಚ್ಚರಿಕೆ ನೀಡಿದೆ. ಭಾರತೀಯ ಕಂಪನಿಗಳು, ಸರ್ಕಾರಿ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಹಾಗೂ ಉದ್ಯಮ ವಲಯಗಳು ಸೈಬರ್‌ ದಾಳಿ ಎದುರಿಸುವ ಸಾಧ್ಯತೆ ಇದೆ ಎಂದು ಸೈಬರ್‌ ಗುಪ್ತಚರ ಸಂಸ್ಥೆ ಸೈಫರ್ಮಾ ಸಂಸ್ಥೆ ಡಾರ್ಕ್ವೆಬ್‌ನಲ್ಲಿ ಎಚ್ಚರಿಕೆ ನೀಡಿದೆ.

Follow Us:
Download App:
  • android
  • ios