ರೈತರಿಗೆ ಪಶು ಭಾಗ್ಯ ಯೋಜನೆ ಜಾರಿಗೆ ಚಿಂತನೆ: ಸಚಿವ ವೆಂಕಟೇಶ್

ರೈತರಿಗೆ ಪಶು ಭಾಗ್ಯ ಯೋಜನೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ರೇಷ್ಮೆ ಮತ್ತು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಹೇಳಿದರು.

Thinking of implementing Pashu Bhagya Yojana for farmers says Minister K Venkatesh gvd

ಪಿರಿಯಾಪಟ್ಟಣ (ಜೂ.27): ರೈತರಿಗೆ ಪಶು ಭಾಗ್ಯ ಯೋಜನೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ರೇಷ್ಮೆ ಮತ್ತು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಹೇಳಿದರು. ತಾಲೂಕಿನ ಹಸುವಿನ ಕಾವಲು ವೀರ ಮದಕರಿ ನಾಯಕ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪಶು ಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ, ಇದರಿಂದ ಬಡ ರೈತರಿಗೆ ಹಸುಗಳನ್ನು ಸಾಕಲು ಸಹಾಯವಾಗುತ್ತದೆ ಹಾಗೂ ಅವರು ಆರ್ಥಿಕವಾಗಿ ಮುಂದೆ ಬರಬಹುದಾಗಿದೆ ಎಂದರು.

ತಾಲೂಕು ನಾಯಕರ ಸಮುದಾಯ ಭವನ ಸರ್ಕಾರದ ವಶದಲ್ಲಿರುತ್ತದೆ, ಅದರ ಉಸ್ತುವಾರಿ ಸರ್ಕಾರದ್ದೆ ಇದರಲ್ಲಿ ಯಾವುದೇ ಗೊಂದಲ ಬೇಡ ಎಂದ ಅವರು, ಕಳೆದ ಐದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದೆ ಸಮುದಾಯ ಭವನವನ್ನು ನಿರ್ಲಕ್ಷಿಸಿದೆ, ನಾನು ಅಭಿವೃದ್ಧಿಪಡಿಸಿದ ಹಾಗೆಯೇ ಇದೇ ಆದರೂ ಅದಕ್ಕೆ ದಿನಗಳಲ್ಲಿ ಕಾಯಕಲ್ಪ ಒದಗಿಸಲಾಗುವುದು, ಅಲ್ಲದೆ ಸಮುದಾಯ ಭವನ ಉದ್ಘಾಟನೆಗೆ ಕ್ರಮ ತೆಗೆದುಕೊಳ್ಳುವುದಾಗಿ, ಅಗತ್ಯ ಬಿದ್ದರೆ ಸೂಕ್ತ ಹಣ ಬಿಡುಗಡೆ ಮಾಡಿಸುವುದು ನಮ್ಮ ಜವಾಬ್ದಾರಿಯಾಗಿದೆ. 

ತಾಲೂಕಿನಲ್ಲಿ ನಾಯಕ ಸಮುದಾಯದವರು ಒಗ್ಗಟ್ಟಿನಿಂದ ಸಾಗುವುದು ನಿಮ್ಮ ಜವಾಬ್ದಾರಿಯಾಗಿದೆ ಸಂಘಟಿತರಾಗಿದ್ದರೆ ನಿಮ್ಮ ಬೆಂಬಲಕ್ಕೆ ನಾವು ಜೊತೆಗಿರುತ್ತೇವೆ ನಮ್ಮ ಸಹಕಾರ ಎಂದಿಗೂ ನಿಮಗೆ ಇರುತ್ತದೆ ಎಂದು ತಿಳಿಸಿದರು. ಈ ಹಿಂದೆ ಸಾಮಾಜಿಕ ಅರಣ್ಯ ಇಲಾಖೆಗೆ ನೂರಾರು ಎಕರೆ ಜಮೀನನ್ನು ಸರ್ಕಾರದಿಂದ ಗಿಡ ನೆಡಲು ನೀಡಿದ್ದು,. ಆ ಜಾಗಗಳನ್ನು ಮರು ವಶಪಡಿಸಿಕೊಳ್ಳುವುದಕ್ಕೆ ಚಿಂತೆ ನಡೆಸಿದ್ದೇವೆ, ಸುಮಾರು 600 ಎಕರೆ ಜಾಗದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರೈತರಿಗೆ 24 ಗಂಟೆ ತ್ರೀ ಫೇಸ್ ಕರೆಂಟ್ ತಾಲೂಕಿನಲ್ಲಿ ಮುಕ್ತ ವಿಶ್ವವಿದ್ಯಾನಿಲಯ ವಲಯ ಕಚೇರಿ ತೆರೆಯಲು ಕ್ರಮ ಕೈಗೊಳ್ಳಲಾಗಿದೆ.

ಬಿಜೆಪಿಯವರು ಕೇಂದ್ರದವರಿಗೆ ನೀಡಿರುವ ಕಪ್ಪು ಕಾಣಿಕೆ ಸ್ಪಷ್ಟಡಿಸಲಿ: ಸಚಿವ ಚಲುವರಾಯಸ್ವಾಮಿ

ಬೆಟ್ಟದಪುರ ಹಾಗೂ ಪಿರಿಯಾಪಟ್ಟಣದಲ್ಲಿ ಐಟಿಐ ಕಾಲೇಜ್ ಹಾಗೂ ಪದವಿ ಕಾಲೇಜ್ ತೆರೆದಿದ್ದು, ಇದರಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ, ಚರ್ಮರೋಗ ಗಂಟು ರೋಗ ಕರುಳು ಬೇನೆ ಈ ಕಾಯಿಲೆಗೆ ರಾಜ್ಯದಲ್ಲಿ ಐದನೇ ಸುತ್ತು ನಾವು ಲಸಿಕೆ ನೀಡುತ್ತಿದ್ದು, ಇದರ ಸಂಪೂರ್ಣ ಪ್ರಯೋಜನವನ್ನು ರೈತರ ಪಡೆದುಕೊಳ್ಳಬೇಕು ಎಂದರು. ಪಿಡಿಒ ಮಂಜುನಾಥ್, ನಾಗೇಂದ್ರ ಕುಮಾರ್. ಸಂಘದ ಅಧ್ಯಕ್ಷ ಮಹೇಶ್. ರೇವಣ್ಣ, ಲಕ್ಷ್ಮಣನಾಯಕ, ಹರೀಶ್, ಕೃಷ್ಣನಾಯಕ, ಅಶೋಕ್ ಕುಮಾರ್ ಇದ್ದರು.

Latest Videos
Follow Us:
Download App:
  • android
  • ios