ನಿಧಿಗಾಗಿ 25 ಅಡಿ ಆಳದ ಹೊಂಡ ಅಗೆದ ಖತರ್ನಾಕ್ ಕಳ್ಳರು..!

ನಿಧಿ ಇದೆ ಎಂದು ನಂಬಿ, ದೇವಸ್ಥಾನದ ನಿಧಿ ತೆಗೆಯಲು ಪ್ಲಾನ್ ಮಾಡಿದ ಖತರ್ನಾಕ್ ಕಳ್ಳರು ಸುಮಾರು 25 ಅಡಿ ಆಳದ ಹೊಂಡ ಅಗೆದಿದ್ದಾರೆ. ಆಳವಾದ ಹೊಂಡ ಅಗೆದು ಅಲ್ಲಿಂದ ಸುರಂಗ ಕೊರೆದು ನಿಧಿ ಕದಿಯಲು ಪ್ಲಾನ್ ಮಾಡಿದ್ದರು.

thieves dig 25 feet long pit to get temple treasure in tumakuru

ತುಮಕೂರು(ಡಿ.21): ನಿಧಿ ಇದೆ ಎಂದು ನಂಬಿ, ದೇವಸ್ಥಾನದ ನಿಧಿ ತೆಗೆಯಲು ಪ್ಲಾನ್ ಮಾಡಿದ ಖತರ್ನಾಕ್ ಕಳ್ಳರು ಸುಮಾರು 25 ಅಡಿ ಆಳದ ಹೊಂಡ ಅಗೆದಿದ್ದಾರೆ. ಆಳವಾದ ಹೊಂಡ ಅಗೆದು ಅಲ್ಲಿಂದ ಸುರಂಗ ಕೊರೆದು ನಿಧಿ ಕದಿಯಲು ಪ್ಲಾನ್ ಮಾಡಿದ್ದರು.

ದೇವಸ್ಥಾನದಲ್ಲಿ ನಿಧಿಯಿದೆ ಎಂದು ಭಾವಿಸಿ ಸುರಂಗ ತೋಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಬೋಬುಗುಂಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, 25 ಅಡಿ ಆಳದ ಗುಂಡಿ ತೆಗೆದು ಸುರಂಗ ಕೊರೆಯಲು ಪ್ರಯತ್ನಿಸಲಾಗಿದೆ.

ದೇವಾಲಯದ ಆವರಣ ಅಸ್ತವ್ಯಸ್ತ : ನಾಗ ವಿಗ್ರಹದ ಕೆಳಗಿತ್ತಾ ನಿಧಿ?

ರಮೇಶ್, ನರಸಿಂಹ, ರಘು, ಜಮೀನು ಮಾಲೀಕ ಜಯರಾಂ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ಮರಿಯಮ್ಮ ದೇವಾಲಯದಲ್ಲಿ ನಿಧಿ ಶೋಧಕ್ಕೆ ಪ್ರಯತ್ನ ನಡೆಸಿದ್ದು, ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡಿಪಾಯ ತೆಗೆಯುವಾಗ ಸಿಕ್ತು 25 ಲಕ್ಷ ಮೌಲ್ಯ ನಿಧಿ!: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ!

Latest Videos
Follow Us:
Download App:
  • android
  • ios