ಚಿತ್ರದುರ್ಗ [ಡಿ.15]:  ದೇಗುಲದಲ್ಲಿ ಭೂಮಿಯನ್ನು ಅಗೆದು ನಾಗರ ವಿಗ್ರಹವನ್ನು ವಿರೂಪಗೊಳಿಸಿದ ಘಟನೆ ಚಿತ್ರದುರ್ಗದಲ್ಲಾಗಿದೆ. 

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕ್ಯಾತನಮಳೆ ಗ್ರಾಮದ ಮಹಾಲಿಂಗೇಶ್ವರ ದೇಗುಲದಲ್ಲಿ ನಿಧಿಗಾಗಿ ನೆಲವನ್ನು ಅಗೆದಿದ್ದು, ನಾಗ ದೇವರ ವಿಗ್ರಹ ವಿರೂಪಗೊಳಿಸಲಾಗಿದೆ. 

ರಾತ್ರಿ ವೇಳೆ ಸ್ಥಳದಲ್ಲಿ ನಿಧಿಗಳ್ಳರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ದೇಗುಲದ ಆವರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತ ಮಾಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇಗುಲದ ಆವರಣವನ್ನು ಅಗೆದ ಸಂಬಂಧ ಇದೀಗ ಇಲ್ಲಿನ ಅಬ್ಬಿನಹೊಳೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಈ ಹಿಂದೆಯೂ ಅನೇಕ ದೇಗುಲಗಳಲ್ಲಿ ಹುಂಡಿಗಳನ್ನು ಒಡೆದು ಕಳ್ಳತನವನ್ನೂ ಕೂಡ ಮಾಡಲಾಗಿತ್ತು. ಇದೀಗ ನಿಧಿಯ ಆಸೆಗಾಗಿ ದೇವಾಲಯದ ಆವರಣವನ್ನು ಕಿತ್ತು ಹಾಕಲಾಗಿದೆ.