ಮನೆಯ ಬೀಗ ಒಡೆದು  ಕಳವು ಮಾಡಿದ್ದ ಆರೋಪಿಯನ್ನು ಬಂಧನ ಚಿನ್ನಾಭರಣ ಸಮೇತ ಆರೋಪಿ ಬಂಧಿಸಿದ ಪೊಲೀಸರು ಸೊರಬ ತಾಲೂಕಿನ ಛತ್ರದಹಳ್ಳಿ ಗ್ರಾಮದಲ್ಲಿ ಘಟನೆ

ಶಿವಮೊಗ್ಗ (ಜು.04): ಮನೆಯ ಬೀಗ ಒಡೆದು ಕಳವು ಮಾಡಿದ್ದ ಆರೋಪಿಯನ್ನು ಚಿನ್ನಾಭರಣ ಸಮೇತ ಬಂಧಿಸಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ವಸಹಾಯ ಸಂಘದಲ್ಲಿ ಮಾಡಿದ ಸಾಲ ತೀರಿಸಲು ಮನೆಯ ಬೀಗ ಒಡೆದು ಕಳವು ಮಾಡಿದ್ದ ಸೊರಬ ತಾಲೂಕಿನ ಛತ್ರದಹಳ್ಳಿ ಗ್ರಾಮದ ಚಂದ್ರಪ್ಪ ಗಣೇಶಪ್ಪ ( 30 ) ಎಂಬ ಆರೋಪಿಯನ್ನು ಇಂದು ಸೊರಬ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ತೈಲ ಬೆಲೆ ದುಬಾರಿ ಆಗ್ತಿದ್ದಂತೆ ಬಂಕ್‌ಗೇ ಕನ್ನ: 4.50 ಲಕ್ಷದ ಪೆಟ್ರೋಲ್‌ ಕಳವು..! .

ಜೂನ್ 29 ರಂದು ಗ್ರಾಮದ ರಮೇಶ್ ಕುಟುಂಬ ಸಮೇತ ಆರಿದ್ರಾ ಮಳೆ ಹಬ್ಬಕ್ಕೆಂದು ನೆರೆಯ ಗ್ರಾಮಕ್ಕೆ ತೆರಳಿದ್ದರು.

 ಈ ಬಗ್ಗೆ ಮಾಹಿತಿ ಹೊಂದಿದ್ದ ಚಂದ್ರಪ್ಪ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು , ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದ.

 ಕಳ್ಳತನವಾಗಿರುವ ಕುರಿತು ಮನೆ ಮಾಲೀಕ ರಮೇಶ್ ಸೊರಬ ಪೊಲೀಸರಿಗೆ ದೂರು ಸಲ್ಲಿಸಿದ್ದ. ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿ ಚಂದ್ರಪ್ಪ ಒಮ್ಮೆಗೆ ಸ್ವಸಹಾಯ ಸಂಘದ ಸಾಲ 60 ಸಾವಿರ ರು. ತೀರಿಸಿರುವುದು ಬೆಳಕಿಗೆ ಬಂದಿತ್ತು . 

ಕೆಲಸ ಮಾಡದೆ ಅಡ್ಡಾಡಿಕೊಂಡಿದ್ದ ಈತ ಹೇಗೆ ಸಾಲ ತೀರಿಸಿದ ಎಂಬ ಬಗ್ಗೆ ವಿಚಾರಣೆ ನಡೆಸಿದ್ದು ಈ ವೇಳೆ ಕಳ್ಳತನ ಮಾಡಿರುವುದು ಗೊತ್ತಾಗಿದೆ.

ಬಳಿಕ ಆರೋಪಿಯಿಂದ 10 ಗ್ರಾಂ ತೂಕದ ಚೈನ್ , 8 ಗ್ರಾಂ ಎರಡು ಕೆನ್ನೆ ಸರಪಳಿ , 6 ಗ್ರಾಂ ತೂಕದ ಉಂಗುರ ಹಾಗೂ 2 ಗ್ರಾಂ ತೂಕದ ಒಂದು ಬಟನ್ ಸೇರಿ ಚಿನ್ನಾಭರಣಗಳು ಪತ್ತೆಯಾಗಿವೆ. ಅಂದಾಜು 92 ಸಾವಿರ ರೂ . ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.