ಕೇರಳ ರಾಜ್ಯದಲ್ಲಿ ಕೋವಿಡ್‌ ಕೇಸುಗಳ ಸಂಖ್ಯೆ ಹೆಚ್ಚಳ ರಾಜ್ಯದ ಗಡಿ ಭಾಗದ ಚೆಕ್ಪೋಸ್ಟ್‌ಗಳಲ್ಲಿ ಪರೀಕ್ಷೆ  ಥರ್ಮಲ್‌ ಸ್ಕ್ಯಾನ್‌, ಆಕ್ಸಿಮೀಟರ್‌ನಿಂದ ತಪಾಸಣೆ 

ಎಚ್‌.ಡಿ. ಕೋಟೆ (ಜು.01): ಕೇರಳ ರಾಜ್ಯದಲ್ಲಿ ಕೋವಿಡ್‌ ಕೇಸುಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ರಾಜ್ಯದ ಗಡಿ ಭಾಗವಾದ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಪ್ರತಿದಿನ ಬರುವ ಕೃಷಿ ಚಟುವಟಿಕೆ ವಾಹನಗಳ ಚಾಲಕರನ್ನು ಥರ್ಮಲ್‌ ಸ್ಕ್ಯಾನ್‌, ಆಕ್ಸಿಮೀಟರ್‌ನಿಂದ ತಪಾಸಣೆ ಮಾಡಲಾಗುತ್ತಿದೆ. 

ವಾಹನಗಳು ಎಲ್ಲಿಂದ-ಎಲ್ಲಿಗೆ ಹೋಗಲಿದೆ ಎಂಬುವುದನ್ನು ನೋಂದಣಿ ಮಾಡಿಕೊಳ್ಳುವುದುರ ಜೊತೆಗೆ ಪ್ರತಿಯೊಬ್ಬರಿಗೂ ಥರ್ಮಲ್‌ ಸ್ಕಾ್ಯನ್‌, ಆಕ್ಸಿಮೀಟರ್‌ಗಳಿಂದ ತಪಾಸಣೆ ನಡೆಸಲಾಗುತ್ತದೆ, ನಂತರ ಕೃಷಿ ಚಟುವಟಿಕೆ ವಾಹನಗಳನ್ನು ಮಾತ್ರ ಒಳಗಡೆಗೆ ಬಿಡಲಾಗುತ್ತಿದೆ.

ರಾಜ್ಯದಾದ್ಯಂತ ಕೋವಿಡ್‌ ಲಸಿಕೆ ಕೊರತೆ, ಜನರ ಪರದಾಟ ...

ತಾಲೂಕಿನ ಉದ್ಬೂರು ಚೆಕ್‌ಪೋಸ್ಟ್‌ನಲ್ಲಿ ಆರ್‌ಟಿಪಿಸಿಆರ್‌ ಚೆಕ್‌ ಮಾಡುವುದರ ಜೊತೆಗೆ ಮಾನಂದವಾಡಿ ಭಾಗದಲ್ಲಿ ಜಿಲ್ಲಾಧಿಕಾರಿಗಳ ಲೆಟರ್‌ ಇದ್ದರೆ ಮಾತ್ರ ವಾಹನಗಳನ್ನು ಬಿಡಲಾಗುತ್ತಿದೆ.

ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್, ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ!

 ಇದಲ್ಲದೆ ವಾಹನ ಚಾಲಕ ಕಡ್ಡಾಯವಾಗಿ ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡು ಬಂದಿರಬೇಕೆಂದು, ಇಲ್ಲವಾದ ವಾಹನಗಳನ್ನು ವಾಪಸ್‌ ಕಳುಹಿಸಿ ಕೊಡಲಾಗುತ್ತಿದೆ. ಪ್ರಯಾಣಿಕರ ವಾಹನಗಳನ್ನು ಕಡ್ಡಾಯವಾಗಿ ವಾಪಸ್‌ ಕಳುಹಿಸುತ್ತಿರುವುದಾಗಿ ತಾಲೂಕು ಆರೋಗ್ಯಾಧಿಕಾರಿ ಟಿ. ರವಿಕುಮಾರ್‌ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona