Ramanagara: ಮಾಗಡಿ ಪುರಸಭೆಯಲ್ಲಿ ಮುಖ್ಯಾಧಿಕಾರಿಯೇ ಇಲ್ಲ!

ಪುರಸಭೆಗೆ ಯಾವಾಗ ಮುಖ್ಯಾಧಿಕಾರಿಗಳು ಬರುತ್ತಾರೆ. ಮುಖ್ಯಾಧಿಕಾರಿಗಳನ್ನು ನೋಡಲು ನಾವು ಎಷ್ಟುದಿನ ಅಂತ ಪುರಸಭೆ ಕಚೇರಿಗೆ ಅಲೆಯಬೇಕಿದೆ ಎಂದು ನಿತ್ಯ ಪುರಸಭೆ ಕಚೇರಿ ಬಾಗಿಲಲ್ಲಿ ಕೇಳಿ ಬರುವ ಮಾತಿದು. ಪುರಸಭೆ ಅಕ್ಷರಸಃ ಯಜಮಾನನಿಲ್ಲದ ಖಾಲಿ ಮನೆಯಂತಿದೆ. 

There is no chief officer in Magadi municipality at Ramanagara gvd

ಎಚ್‌.ಆರ್‌.ಮಾದೇಶ್‌

ಮಾಗಡಿ (ಡಿ.03): ಪುರಸಭೆಗೆ ಯಾವಾಗ ಮುಖ್ಯಾಧಿಕಾರಿಗಳು ಬರುತ್ತಾರೆ. ಮುಖ್ಯಾಧಿಕಾರಿಗಳನ್ನು ನೋಡಲು ನಾವು ಎಷ್ಟುದಿನ ಅಂತ ಪುರಸಭೆ ಕಚೇರಿಗೆ ಅಲೆಯಬೇಕಿದೆ ಎಂದು ನಿತ್ಯ ಪುರಸಭೆ ಕಚೇರಿ ಬಾಗಿಲಲ್ಲಿ ಕೇಳಿ ಬರುವ ಮಾತಿದು. ಪುರಸಭೆ ಅಕ್ಷರಸಃ ಯಜಮಾನನಿಲ್ಲದ ಖಾಲಿ ಮನೆಯಂತಿದೆ. ನಿತ್ಯ ಕಚೇರಿಗೆ ಬರುವವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಸೆಯಿಂದ ವಾಪಸ್ಸಾಗುತ್ತಿದ್ದಾರೆ. ಮಾಗಡಿ ಪುರಸಭೆಯಲ್ಲಿ ಮುಖ್ಯಾಧಿಕಾರಿಗಳಿಲ್ಲದೆ ದಿನದಿಂದ ದಿನಕ್ಕೆ ಪುರ ನಾಗರಿಕರ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಮುಖ್ಯಾಧಿಕಾರಿಗಳು ಯಾವಾಗ ಬರುತ್ತಾರೆ, ಅಧಿಕಾರ ಯಾವಾಗ ಸ್ವೀಕರಿಸುತ್ತಾರೆ ಎಂಬ ಪುರನಾಗರಿಕರ ಪ್ರಶ್ನೆಗೆ ಪುರಸಭೆ ಕಚೇರಿಯಲ್ಲಿ ನಿಖರವಾಗಿ ಉತ್ತರಿಸುವವರೇ ಇಲ್ಲದಂತಾಗಿದೆ. 

ಮಧ್ಯಾಹ್ನ ಆಗುತ್ತಿದ್ದಂತೆ ಪುರಸಭೆ ಕಚೇರಿಯಲ್ಲಿ ಸಿಬ್ಬಂದಿಗಳೇ ಮಾಯವಾಗಿರುತ್ತಾರೆ. ಯಜಮಾನನಿಲ್ಲದ ಮನೆಯಂತಾಗಿದೆ. ಕಾವಲಿಗೆ ಎನ್ನುವಂತೆ ಯಾರೋ ಒಂದಿಬ್ಬರು ಡಿಗುಂಪು ಸಿಬ್ಬಂದಿ ಕುಳಿತಿರುತ್ತಾರೆ. ಅವರಿಂದ ಸಮರ್ಪಕ ಮಾಹಿತಿ ಸಿಗುವುದಿಲ್ಲ. ಮಾಹಿತಿ ನೀಡುವವರೇ ಇಲ್ಲ. ಆಡಳಿತ ಮಂಡಲಿ ಇದ್ದರೂ ಇಲ್ಲದಂತೆ ಪುರನಾಗರಿಕರಲ್ಲಿ ಬೇಸರ ಉಂಟಾಗಿದೆ. ಪಟ್ಟಣದಲ್ಲಿ 23 ವಾರ್ಡ್‌ಗಳಿವೆ, ಸಾಕಷ್ಟು ಕನಸು ಕಟ್ಟಿಕೊಂಡು ಜನಸೇವೆ ಮಾಡಬಹುದು ಎಂಬ ಆಸೆಗಣ್ಣಿನಿಂದ ಗೆದ್ದು ಬಂದವರು ಜನರ ಸೇವೆಯನ್ನು ಮಾಡಲಾಗದ ಪರಿಸ್ಥಿತಿಯಿಂದ ಬಹುತೇಕ ಸದಸ್ಯರು ತಮ್ಮ ವಾರ್ಡ್‌ಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಮಾಗಡಿ ಪುರಸಭೆಯ ಕಚೇರಿಗೆ ನಿತ್ಯ ನೂರಾರು ಮಂದಿ ಪುರನಾಗರಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಬರುತ್ತಾರೆ. 

Ramanagara: ವಿಧಾ​ನ​ಸಭಾ ಚುನಾ​ವ​ಣೆಗೆ ಜಿಲ್ಲಾ​ಡ​ಳಿತದಿಂದ​ಲೂ ತಯಾರಿ

ಕಳೆದ ಒಂದೆರಡು ತಿಂಗಳಿನಿಂದ ಮುಖ್ಯಾಧಿಕಾರಿಗಳಿಲ್ಲದೆ ತಮ್ಮ ದಾಖಲೆಗಳ ತಿದ್ದುಪಡಿ, ಸರಿಪಡಿಸಿಕೊಂಡು ಈ-ಖಾತೆ ಪಡೆಯಲು ಒಂದು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದರೂ ದಾಖಲೆ ಸಿಕ್ಕಿಲ್ಲ. ಮನೆಕಟ್ಟಲು, ಸಾಲಪಡೆಯಲೋ, ಮಕ್ಕಳ ಮದುವೆ ಮಾಡಲೋ, ನಿವೇಶನ ಖರೀದಿಸಲೋ ಅವರಿಗೆ ತುರ್ತು ಹಣದ ಅವಶ್ಯಕತೆ ಇರುತ್ತದೆ. ಆದರೆ ಸರಿಯಾದ ಸಮಯಕ್ಕೆ ತಮ್ಮ ಸ್ವತ್ತಿನ ದಾಖಲೆಗಳು ಮತ್ತು ಲೈಸೆನ್ಸ್‌ ಸಿಗದೆ ಜನರು ಸಾಕಷ್ಟುತೊಂದರೆ ಅನುಭವಿಸುತ್ತಿದ್ದರೂ ಜವಾಬ್ದಾರಿಯುತ ಪುರಸಭೆ ಅಧ್ಯಕ್ಷರಾಗಲಿ, ಶಾಸಕ ಎ.ಮಂಜುನಾಥ್‌ ಆಗಲಿ, ಜಿಲ್ಲಾ ಉಸ್ತವಾರಿ ಸಚಿವರಾಗಲಿ ಇತ್ತ ಗಮನಹರಿಸಿ ಪುರಸಭೆಗೆ ಮುಖ್ಯಾಧಿಕಾರಿಗಳ ನೇಮಕ ಮಾಡುವ ಮೂಲಕ ಪುರನಾಗರೀಕರ ಸಮಸ್ಯೆಗಳ ನಿವಾರಣೆ ಹಾಗೂ ಪಟ್ಟಣದ ಅಭಿವೃದ್ಧಿಗೆ ಮುಂದಾಗದೆ ಇರುವುದು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ವಿದ್ಯುತ್‌ ದೀಪಗಳ ಸಮಸ್ಯೆ: ಪಟ್ಟಣದ ಬಹುತೇಕ ಕಡೆಗಳಲ್ಲಿ ಬೀದಿ ದೀಪಗಳು ಊರಿಯುತ್ತಿಲ್ಲ, ದೀಪಗಳು ಕೆಟ್ಟಿದ್ದರೂ ಬೀದಿ ದೀಪಗಳನ್ನು ಅಳವಡಿಸದೆ ಇರುವುದರಿಂದ ಜನರು ಕತ್ತಲ್ಲಲ್ಲಿ ಓಡಾಡುವಂತಾಗಿದೆ. ಒಳಚರಂಡಿ, ತ್ಯಾಜ್ಯ ವಿಲೇವಾರಿ ಸಮಸ್ಯೆಗಳು ಸಹ ಉಲ್ಬಣಗೊಳ್ಳುತ್ತಿದೆ. ಮತ್ತೊಷ್ಟುಸಮಸ್ಯೆ ಉಲ್ಬಣಗೊಳ್ಳುವ ಮುನ್ನಾವೇ ಆದಷ್ಟುಬೇಗ ಮುಖ್ಯಾಧಿಕಾರಿಗಳ ನೇಮಕವಾಗಬೇಕಿದೆ ಎಂಬುದು ಪುರನಾಗರೀಕರ ಒಕ್ಕರಲಿನ ಆಶಯವಾಗಿದೆ. ಇನ್ನಾದರೂ ಜವಾಬ್ದಾರಿಯುತ ಶಾಸಕರು ಪುರಸಭೆಯತ್ತ ಗಮನಹರಿಸುವ ಮೂಲಕ ಮುಖ್ಯಾಧಿಕಾರಿಗಳನ್ನು ನೇಮಕ ಮಾಡಿಸಿ ಆಡಳಿತವನ್ನು ಚುರುಕುಗೊಳಿಸುತ್ತಾರೆಯೇ, ಪುರನಾಗರೀಕರ ಸಮಸ್ಯೆಗಳನ್ನು ಬಗೆಹರಿಸಲು ಸ್ಪಂದಿಸುತ್ತಾರೆಯೇ ಕಾದು ನೋಡಬೇ​ಕಿ​ದೆ.

ನೀರಿನ ಸಮಸ್ಯೆ: ಮಾಗಡಿ ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗದೆ ಪ್ರಮುವಾಗಿ ನೀರಿನ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಮಂಚನಬೆಲೆ ಜಲಾಶಯದಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಜಲಾಶಯದ ಬಳಿ ಇರುವ ಶುದ್ಧೀಕರಣ ಘಟಕದಲ್ಲಿ ನೀರನು ್ನಶುದ್ಧೀಕರಿಸುತ್ತಿಲ್ಲ. ಜತೆಗೆ ಪೈಪ್‌ಗಳು ಹೊಡೆದು ಹೋಗುತ್ತಿದ್ದು, ತಾಂತ್ರಿಕ ಸಮಸ್ಯೆಯಿಂದ ನೀರು ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪವಿದ್ದು, ಹೀಗಾಗಿ ಪಟ್ಟಣದ ಜನರು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಶುದ್ಧ ನೀರು ಪೂರೈಕೆ ಆಗದಿದ್ದರೂ ಸಹ ವರ್ಷದ ನೀರಿನ ತೆರಿಗೆ ವಸೂಲಿ ಮಾತ್ರ ನಿಂತಿಲ್ಲ ಎಂದು ನಾಗರೀಕರ ಆರೋಪವಾಗಿದೆ. ಜತೆಗೆ ಒಂದು ಎಂಜಿನಿಯರ್‌ ಹುದ್ದೆಯೂ ಖಾಲಿ ಇರುವುದರಿಂದ ತಾಂತ್ರಿಕ ಸಮಸ್ಯೆಗಳು ಬಗೆಹರಿಯದಂತಾಗಿದೆ.

ಮಾಗಡಿ ಪುರಸಭೆಗೆ ಮುಖ್ಯಾಧಿಕಾರಿಯಾಗಿ ವರ್ಗಾವಣೆಯಾಗಿದ್ದವರು ಕೆಲ ಕಾರಣಗಳಿದ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ. ಮಾಗಡಿ ಪುರಸಭೆಗೆ ಇನ್ನೊಂದು ವಾರದಲ್ಲಿ ಮುಖ್ಯಾಧಿಕಾರಿಗಳು ಬರಲಿದ್ದಾರೆ.
-ಎ.ಮಂಜುನಾಥ್‌, ಶಾಸಕರು, ಮಾಗಡಿ ಕ್ಷೇತ್ರ

Ticket Fight: ಜೆಡಿಎಸ್‌-ಕೈ ನೆಲದಲ್ಲಿ ಮೊದಲ ಬಾರಿ ತ್ರಿಕೋನ ಕದನ?

ಸದ್ಯಕ್ಕೆ ಮ್ಯಾನೇಜರ್‌ಗೆ ಇನ್ಚಾಜ್‌ರ್‍ ಕೊಡಲಾಗಿದೆ. ಇ-ಖಾತೆ ಲೈಸೆನ್ಸ್‌ಗಳನ್ನು ಕೊಡಲು ಮುಖ್ಯಾಧಿಕಾರಿಗಳೇ ಸಹಿಗೆ ಬೇಕಿರುತ್ತದೆ. ಶಾಸಕರು ಬೇರೆಯವರನ್ನು ಹಾಕಿಸಲು ಪತ್ರ ಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ಮಾಗಡಿಗೆ ಹೊಸ ಮುಖ್ಯಾಧಿಕಾರಿಗಳು ಬರಲಿದ್ದಾರೆ. ಕುಡಿಯುವ ನೀರು, ಒಳಚರಂಡಿ ಹಾಗೂ ಬೀದಿ ದೀಪದ ಸಮಸ್ಯೆಗಳಿದ್ದು, ನಾಳೆಯಿಂದಲೇ ಎಲ್ಲವನ್ನು ಸರಿಪಡಿಸುವ ಕೆಲಸಕ್ಕೆ ಶಾಸಕರು ಚಾಲನೆ ನೀಡಲಿದ್ದಾರೆ.
-ವಿಜಯಾರೂಪೇಶ್‌, ಅಧ್ಯ​ಕ್ಷರು, ಮಾಗಡಿ ಪುರ​ಸಭೆ

Latest Videos
Follow Us:
Download App:
  • android
  • ios