Asianet Suvarna News Asianet Suvarna News

Ramanagara: ವಿಧಾ​ನ​ಸಭಾ ಚುನಾ​ವ​ಣೆಗೆ ಜಿಲ್ಲಾ​ಡ​ಳಿತದಿಂದ​ಲೂ ತಯಾರಿ

ಮುಂದಿನ ನಾಲ್ಕೈದು ತಿಂಗ​ಳಲ್ಲಿ ಎದು​ರಾ​ಗ​ಲಿ​ರುವ ವಿಧಾ​ನ​ಸಭಾ ಚುನಾ​ವ​ಣೆಗೆ ​ಒಂದೆಡೆ ರಾಜ​ಕೀಯ ಪಕ್ಷ​ಗಳಲ್ಲಿ ಚಟು​ವ​ಟಿಕೆ ಬಿರು​ಸು​ಗೊಂಡಿ​ದ್ದರೆ, ಮತ್ತೊಂದೆಡೆ ಜಿಲ್ಲಾ​ಡ​ಳಿ​ತವೂ ಚುನಾ​ವ​ಣೆಗೆ ಬೇಕಾದ ಪೂರ್ವ ತಯಾರಿ ಆರಂಭಿ​ಸಿದೆ. 

Ramanagara district administration is also preparing for the assembly elections gvd
Author
First Published Dec 2, 2022, 8:48 PM IST

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಡಿ.02): ಮುಂದಿನ ನಾಲ್ಕೈದು ತಿಂಗ​ಳಲ್ಲಿ ಎದು​ರಾ​ಗ​ಲಿ​ರುವ ವಿಧಾ​ನ​ಸಭಾ ಚುನಾ​ವ​ಣೆಗೆ ​ಒಂದೆಡೆ ರಾಜ​ಕೀಯ ಪಕ್ಷ​ಗಳಲ್ಲಿ ಚಟು​ವ​ಟಿಕೆ ಬಿರು​ಸು​ಗೊಂಡಿ​ದ್ದರೆ, ಮತ್ತೊಂದೆಡೆ ಜಿಲ್ಲಾ​ಡ​ಳಿ​ತವೂ ಚುನಾ​ವ​ಣೆಗೆ ಬೇಕಾದ ಪೂರ್ವ ತಯಾರಿ ಆರಂಭಿ​ಸಿದೆ. ರಾಜ​ಕೀಯ ಪಕ್ಷ​ಗಳ ಆಕಾಂಕ್ಷಿ​ಗಳು ಟಿಕೆಟ್‌ ಕೋರಿ ಅರ್ಜಿ ಸಲ್ಲಿ​ಸು​ವುದು, ವರಿ​ಷ್ಠರ ಮನ​ವೊ​ಲಿಕೆ ಮಾಡು​ತ್ತಿ​ದ್ದಾರೆ. ಜೊತೆಗೆ ಕ್ಷೇತ್ರ​ದಲ್ಲಿ ಪ್ರವಾಸ ಕೈಗೊಂಡು ಮತ​ದಾ​ರರ ಪ್ರೀತಿ ಗಳಿ​ಸಲು ಇನ್ನಿ​ಲ್ಲದ ಕಸ​ರತ್ತು ನಡೆ​ಸು​ತ್ತಿ​ದ್ದಾರೆ. ಈ ನಡುವೆ ಚುನಾ​ವ​ಣೆಗೆ ಅಗ​ತ್ಯ​ವಾದ ಸಿದ್ಧ​ತೆ​ಗ​ಳಲ್ಲಿ ಜಿಲ್ಲಾ​ಡ​ಳಿ​ತ ತೊಡ​ಗಿದೆ.

ಮತ​ದಾರರ ಪಟ್ಟಿಯ ಪರಿ​ಷ್ಕ​ರಣೆ ಕಾರ್ಯ​ದಲ್ಲಿ ತೊಡ​ಗಿ​ರುವ ಜಿಲ್ಲಾ​ಡ​ಳಿತ ಕರಡು ಮತ​ದಾ​ರರ ಪಟ್ಟಿ​ಯನ್ನು ಪ್ರಕ​ಟಿ​ಸಿದ್ದು, ಕಾಂಗ್ರೆಸ್‌ , ಬಿಜೆಪಿ, ಜೆಡಿ​ಎಸ್‌ ಸೇರಿ​ದಂತೆ ಪ್ರಮುಖ ರಾಜ​ಕೀಯ ಪಕ್ಷ​ಗಳ ನಾಯ​ಕ​ರೊಂದಿಗೆ ಸಭೆ ಕೂಡ ನಡೆ​ಸಿದೆ. ಈಗಾ​ಗಲೇ ಚುನಾ​ವ​ಣೆಗೆ ಅಗ​ತ್ಯ​ವಾ​ಗಿ​ರುವ ವಿದ್ಯಾ​ನ್ಮಾನ ಮತ​ಯಂತ್ರ​ (ಇ​ವಿ​ಎಂ)​ಗ​ಳಿ​ಗಾಗಿ ಬೇಡಿಕೆ ಸಲ್ಲಿ​ಸಿದೆ. ಜಿಲ್ಲೆಯ ನಾಲ್ಕು ವಿಧಾ​ನ​ಸಭಾ ಕ್ಷೇತ್ರ​ಗ​ಳಿಂದ ಸುಮಾರು 1139 ಬ್ಯಾಲೆಟ್‌ ಯುನಿಟ್‌ಗಳು ಹಾಗೂ 1139 ಕಂಟ್ರೋಲ್‌ ಯುನಿಟ್‌ ಗಳ ಅಗ​ತ್ಯ​ವಿದ್ದು, ಅವು​ಗಳು ಶೀಘ್ರ​ದ​ಲ್ಲಿಯೇ ಪೂರೈ​ಕೆ​ಯಾ​ಗ​ಲಿವೆ.

Ramanagara: ಶೇ.68ರಷ್ಟು ಇ-ಖಾತೆ ಪೂರ್ಣ: ಶಾಸಕಿ ಅನಿತಾ ಕುಮಾರಸ್ವಾಮಿ

ಲೋ​ಕಾ​ರ್ಪ​ಣೆಗೆ ವಿದ್ಯು​ನ್ಮಾನ ಮತ​ಯಂತ್ರ​ಗಳ ಉಗ್ರಾಣ ಸಜ್ಜು: ವಿದ್ಯು​ನ್ಮಾನ ಮತ ಯಂತ್ರ​ (ಇ​ವಿ​ಎಂ)​ಗ​ಳನ್ನು ವ್ಯವ​ಸ್ಥಿತ ಹಾಗೂ ಸುರ​ಕ್ಷಿ​ತ​ವಾಗಿ ಸಂಗ್ರ​ಹಿ​ಸು​ವು​ದ​ಕ್ಕಾಗಿ ಜಿಲ್ಲಾ ಕಚೇ​ರಿ​ಗಳ ಸಂಕೀ​ರ್ಣದ ಪಕ್ಕ​ದ​ಲ್ಲಿಯೇ ಚುನಾವಣಾ ಆಯೋಗದ ನಿರ್ದೇಶನದನ್ವಯ ನೂತ​ನ​ವಾಗಿ ವಿದ್ಯು​ನ್ಮಾನ ಮತ​ಯಂತ್ರ​ಗಳ ಉ​ಗ್ರಾ​ಣ​ವನ್ನು ನಿರ್ಮಿ​ಸ​ಲಾ​ಗಿದೆ. ಇಲ್ಲಿ ಅಗ​ತ್ಯ​ಕ್ಕಿಂತ ಹೆಚ್ಚಿನ ಇವಿ​ಎಂಗ​ಳನ್ನು ಸಂಗ್ರ​ಹಿ​ಸಿಡಲು ವ್ಯವಸ್ಥೆ ಇದೆ. ಈ ಉಗ್ರಾ​ಣ​ದಲ್ಲಿ ಜಿಲ್ಲೆಯ 4 ವಿಧಾ​ನ​ಸಭಾ ಕ್ಷೇತ್ರ​ಗ​ಳಿಗೆ ಸಂಬಂಧಿ​ಸಿದಂತೆ ಕ್ಷೇತ್ರ​ವಾ​ರು ವಿದ್ಯು​ನ್ಮಾನ ಮತ​ಯಂತ್ರ​ಗ​ಳನ್ನು ​ಇ​ರಿ​ಸಲು ಪ್ರತ್ಯೇ​ಕ​ವಾದ ಕೊಠ​ಡಿ​ಗಳ ವ್ಯವಸ್ಥೆ ಮಾಡ​ಲಾ​ಗಿದೆ. ಪೂರೈ​ಕೆ​ಯಾ​ಗುವ ಇವಿ​ಎಂಗ​ಳನ್ನು ಮೊದಲ ಹಂತ​ದಲ್ಲಿ ತಪಾ​ಸ​ಣೆಗೆ ಒಳ​ಪ​ಡಿ​ಸಲು ಪ್ರತ್ಯೇ​ಕ​ವಾದ ಜಾಗ​ವಿದೆ.

ಈ ಮೊದಲು ಮತ​ದಾ​ನಕ್ಕು ಮುನ್ನ ಹಾಗೂ ಮತ ಎಣಿಕೆ ತರು​ವಾಯ ಇವಿ​ಎಂಗ​ಳನ್ನು ಜಿಲ್ಲಾ​ಧಿ​ಕಾರಿ, ಮಿನಿ ವಿಧಾ​ನ​ಸೌಧ ಹಾಗೂ ಖಾಲಿ​ಯಿದ್ದ ಸರ್ಕಾರಿ ಕಟ್ಟ​ಡ​ಗ​ಳ ಕೊಠ​ಡಿ​ಯಲ್ಲಿ ಇಡ​ಲಾ​ಗು​ತ್ತಿತ್ತು. ಚುನಾವಣೆ ಸಂದರ್ಭದಲ್ಲೂ ಹೆಚ್ಚುವರಿ ಯಂತ್ರಗಳ ಆಮದು ಮಾಡಿ​ಕೊ​ಳ್ಳ​ಲು ಸ್ಥಳಾವಕಾಶ ಕೊರತೆ ಎದುರಾಗುತ್ತಿತ್ತು. ಜಿಲ್ಲಾ​ಧಿ​ಕಾ​ರಿ​ಗಳ ಕಚೇರಿ ಅಥವಾ ತಾಲೂಕು ಕಚೇ​ರಿ​ಗಳ ಆವ​ರ​ಣ​ದಲ್ಲಿ ಇವಿ​ಎಂಗಳ ತಪಾ​ಸಣೆ ಕಾರ್ಯ ನಡೆ​ಯು​ತ್ತಿತ್ತು. ಇನ್ನು ಮುಂದೆ ಅವೆ​ಲ್ಲವೂ ಉಗ್ರಾ​ಣ​ದಲ್ಲಿಯೇ ನಡೆ​ಯ​ಲಿ​ದೆ.

ಮತಯಂತ್ರಗಳ ಸಂರಕ್ಷಣೆ ದೃಷ್ಟಿಯ ಜತೆಗೆ ಒಂದೇ ಕಡೆ ದಾಸ್ತಾನು ಮಾಡಲು ಉಗ್ರಾಣ ಸಹಕಾರಿಯಾಗಲಿದೆ. ಮೂರು ಅಂತ​ಸ​ತ್ತಿನ ಈ ಉಗ್ರಾ​​ಣ​ದಲ್ಲಿ ಪ್ರತಿ ವಿಧಾ​ನ​ಸಭಾ ಕ್ಷೇತ್ರ​ವಾರು ವಿದ್ಯು​ನ್ಮಾನ ಮತ​ಯಂತ್ರ​ಗ​ಳನ್ನು ಸಂಗ್ರ​ಹಿ​ಸಿ​ಡಲು ಪ್ರತ್ಯೇಕ ಕೊಠ​ಡಿ​ಗ​ಳಿವೆ. ಅಧಿ​ಕಾ​ರಿ​ಗಳು, ಭದ್ರತಾ ಸಿಬ್ಬಂದಿ ಉಳಿದುಕೊಳ್ಳಲು ಬೇಕಾದ ವ್ಯವ​ಸ್ಥೆ​ಯನ್ನು ಮಾಡ​ಲಾ​ಗಿದೆ.

ಸಾಲು ಸಾಲು ಚುನಾವಣೆ: ಜಿಲ್ಲೆಯಲ್ಲಿ ಗ್ರಾಪಂ ಚುನಾವಣೆ, ನಗ​ರ​ಸಭೆ ಚುನಾವಣೆ ಮುಗಿದಿದ್ದು, ಮುಂದೆ ಸಾಲು ಸಾಲು ಚುನಾವಣೆಗಳು ಎದು​ರಾ​ಗ​ಲಿವೆ. ತಾಪಂ, ಜಿಪಂ, ವಿಧಾನಸಭೆ, ಲೋಕಸಭೆ ಸೇರಿದಂತೆ ಸಾಲು ಸಾಲು ಚುನಾವಣೆಗಳ ಪಟ್ಟಿಯೇ ಇದೆ. ಏನಿಲ್ಲವೆಂದರೂ ಒಂದು ಅಥವಾ ಎರಡು ವರ್ಷದೊಳಗೆ ಯಾವುದಾದರೂ ಒಂದು ಚುನಾವಣೆಯಲ್ಲಿ ಈ ಯಂತ್ರಗಳ ಬಳಕೆ ಆಗುತ್ತಲೇ ಬಂದಿದೆ. ಹೀಗಾಗಿ ಬೇರೆ ಕಡೆ ದಾಸ್ತಾನು ಆಗಿರುವ ಮತಯಂತ್ರಗಳನ್ನು ಒಂದೇ ಕಡೆ ದಾಸ್ತಾನು ಮಾಡಲು ಹಾಗೂ ಸಾಲು ಸಾಲು ಚುನಾವಣೆಗಳು ನಡೆ​ಯ​ಲಿ​ರುವ ಕಾರಣ ಆದಷ್ಟುಬೇಗ ಉಗ್ರಾಣ ಉದ್ಘಾಟನೆಗೊಳ್ಳಲಿದೆ ಎನ್ನು​ತ್ತಾರೆ ಅಧಿ​ಕಾ​ರಿ​ಗ​ಳು.

ವಿಧಾನಸಭಾ ಕ್ಷೇತ್ರವಾರು ವ್ಯವಸ್ಥೆ: ಉಗ್ರಾಣದಲ್ಲಿ ವಿಧಾನಸಭಾ ಕ್ಷೇತ್ರವಾರು ವಿದ್ಯು​ನ್ಮಾನ ಮತ​ಯಂತ್ರ​ಗ​ಳನ್ನು ಒಂದೇ ಕಡೆ ದಾಸ್ತಾನು ಮಾಡಲು ಪ್ರತ್ಯೇಕ ಕೊಠಡಿಗಳಿವೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರವಾರು 4 ಕೊಠಡಿಗಳ ಜತೆಗೆ ಹೆಚ್ಚುವರಿ ಕೊಠಡಿಗಳು ಲಭ್ಯವಿವೆ. ಇದರಿಂದ ಕ್ಷೇತ್ರವಾರು ಯಂತ್ರಗಳ ಗುರುತಿಸುವಿಕೆ, ರವಾನಿಸಲು ಸಹಕಾರಿ ಆಗಲಿದೆ. ಇನ್ನು ಯಂತ್ರಗಳನ್ನು ಪರಿಶೀಲಿಸಲು ಭದ್ರತಾ ಕೊಠಡಿ, ಸುತ್ತಮುತ್ತ ಸಿಸಿ ಕ್ಯಾಮರಾ ಹಾಗೂ ಒಳ್ಳೆಯ ಲಾಕಿಂಗ್‌ ವ್ಯವಸ್ಥೆ ಅಳವಡಿಸಲಾಗಿದೆ. ಇದಲ್ಲದೇ ಉಗ್ರಾಣದ ಎದುರಿಗೆ ಸುಸಜ್ಜಿತ ಆವರಣ ಹಾಗೂ ಸುತ್ತಲೂ ತಂತಿ ಬೇಲಿ ಸೇರಿದಂತೆ ಭದ್ರತೆಗೆ ಆದ್ಯತೆ ಕೊಡಲಾಗಿದೆ.

ಅಳಿವಿನಂಚಿನಲ್ಲಿ ಬೊಂಬೆಯಾಟ: ಇತಿ​ಹಾ​ಸದ ಪುಟ ಸೇರುವ ಆತಂಕ

ಲೋಕಾ​ರ್ಪ​ಣೆಗೆ ಸಜ್ಜಾದ ಉಗ್ರಾ​ಣ: ಮತಪತ್ರ ಮತ್ತು ಅದರಲ್ಲಿ ಠಸ್ಸೆ ಹೊಡೆದು ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವ ವಿಧಾನ ತೆರೆಗೆ ಸರಿದು ದಶಕಗಳೇ ಕಳೆದು ಹೋಗಿದೆ. ವಿಧಾನ ಪರಿಷತ್‌ ಚುನಾವಣೆ ಹೊರತುಪಡಿಸಿ ಗ್ರಾಪಂನಿಂದ ಹಿಡಿದು ತಾಪಂ, ಜಿಪಂ, ವಿಧಾನಸಭೆ, ಸಂಸತ್‌ ಚುನಾವಣೆಗಳಲ್ಲಿ ಈಗಂತೂ ವಿದ್ಯುನ್ಮಾನ ಮತಯಂತ್ರಗಳೇ ಖಾಯಂ ಆಗಿಬಿಟ್ಟಿವೆ. ಹೀಗಾಗಿ ಈ ವಿದ್ಯುನ್ಮಾನ ಮತಯಂತ್ರಗಳ ಪಾರದರ್ಶಕತೆ ಹಾಗೂ ಸುರಕ್ಷತೆಗಾಗಿ ಸುಸಜ್ಜಿತ ಉಗ್ರಾಣವೊಂದು ನಗರದಲ್ಲಿ (ಇವಿಎಂ ವೇರ್‌ಹೌಸ್‌) ನಿರ್ಮಾಣಗೊಂಡು ಲೋಕಾ​ರ್ಪ​ಣೆಗೆ ಸಜ್ಜಾಗಿದೆ.

Follow Us:
Download App:
  • android
  • ios