Chikkamagaluru: ಬೀರೂರು ನಾಡಕಚೇರಿಯಲ್ಲಿ ಮೂಲಸೌಕರ್ಯ ಮರೀಚಿಕೆ!

ಸರ್ಕಾರ ರೈತರು ಮತ್ತು ಸಾರ್ವಜನಿಕರಿಗಾಗಿ ಎಲ್ಲಾ ಸರ್ಕಾರಿ ಸೌಲಭ್ಯಗಳು ಒಂದೇ ಸೂರಿನಡಿ ಸಿಗಲು ನಾಡಕಚೇರಿ ಪ್ರಾರಂಭಿಸಿದೆ. ಆದರೆ ಕೂಡ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಾತ್ಸರ ಮನೋಭಾವದಿಂದ ಇಲ್ಲಿನ ಕಟ್ಟಡ ಬೀಳುವ ಹಂತ ತಲುಪಿದ್ದು, ಮೂಲಭೂತ ಸೌಕರ್ಯ ಮರೀಚಿಕæಯಾಗಿದೆ. ಹಾಗಾಗಿ ಪ್ರತಿನಿತ್ಯ ಜನ ಸಂಕಟ ಅನುಭವಿಸುವಂತಾಗಿದೆ.

There is no basic facility in Birur Nadakacheri at chikkamgaluru rav

ಎನ್‌.ಗಿರೀಶ್‌, ಬೀರೂರು.

ಬೀರೂರು (ಫೆ.1) : ಸರ್ಕಾರ ರೈತರು ಮತ್ತು ಸಾರ್ವಜನಿಕರಿಗಾಗಿ ಎಲ್ಲಾ ಸರ್ಕಾರಿ ಸೌಲಭ್ಯಗಳು ಒಂದೇ ಸೂರಿನಡಿ ಸಿಗಲು ನಾಡಕಚೇರಿ ಪ್ರಾರಂಭಿಸಿದೆ. ಆದರೆ ಕೂಡ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಾತ್ಸರ ಮನೋಭಾವದಿಂದ ಇಲ್ಲಿನ ಕಟ್ಟಡ ಬೀಳುವ ಹಂತ ತಲುಪಿದ್ದು, ಮೂಲಭೂತ ಸೌಕರ್ಯ ಮರೀಚಿಕæಯಾಗಿದೆ. ಹಾಗಾಗಿ ಪ್ರತಿನಿತ್ಯ ಜನ ಸಂಕಟ ಅನುಭವಿಸುವಂತಾಗಿದೆ.

ಇದು ಬೀರೂರಿನ ರಾಷ್ಟ್ರೀಯ ಹೆದ್ದಾರಿಯ ಹೃದಯ ಭಾಗದಲ್ಲಿರುವ ನಾಡಕಚೇರಿ ದುರಂತ ಕಥೆ. ಅಂದಿನ ಬ್ರಿಟಿಷ್‌ ಸರ್ಕಾರ 1899ರಲ್ಲಿ ಮುಸಾಪುರ್‌ ಖಾನ್‌ ಯೋಜನೆಯಡಿ ಸಾರ್ವಜನಿಕರಿಗೆ ವಸತಿ ಕಲ್ಪಿಸುವ ಮಂದಿರವಾಗಿ ಈ ಕಟ್ಟಡ ನಿರ್ಮಾಣವಾಗಿತ್ತು. ನಂತರದ ದಿನಗಳಲ್ಲಿ ಮಹಿಳಾ ಹಾಸ್ಟೆಲ್‌, ಪೊಲೀಸ್‌ ಠಾಣೆ, ಬಿಇಒ ಕಚೇರಿ, ರೈಲ್ವೆ ನಿಲಾ,ಕಂದಾಯ ಇಲಾಖೆ ನಂತರ ಸರ್ಕಾರ ಹೊಸ ಯೋಜನೆ ಆರಂಭಿಸಿದಾಗ ಅಟಲ್‌ ಜಿ ಜನಸ್ನೇಹಿ ಕೇಂದ್ರವೂ ಇಲ್ಲಿ ಆರಂಭ ವಾಯಿತು.

ನಾಪೋಕ್ಲು ನಾಡಕಚೇರಿ ಸಂಪರ್ಕ ರಸ್ತೆ ಅವ್ಯವಸ್ಥೆ; ಸಾರ್ವಜನಿಕರಿಗೆ ತೊಂದರೆ

1899ರಲ್ಲಿ ಕಟ್ಟಿದ ಈ ಕಟ್ಟಡ ಸದ್ಯ124ವರ್ಷ ಪೂರೈಸಿ, ಕಟ್ಟಡ ಸೋರುತ್ತದ್ದು,ಬೀಳುವ ಹಂತ ತಲುಪಿದೆ. ಅಧಿಕಾರಿಗಳು ಮತ್ತು ಸರ್ಕಾರ ಮಾತ್ರ ಇತ್ತ ಗಮನ ಕೂಡ ಹರಿಸಿಲ್ಲ. ಈ ನಾಡಕಛೇರಿಯಲ್ಲಿ ಬೀರೂರು ಹೋಬಳಿಯ ಹುಲ್ಲೇಹಳ್ಳಿ, ಬಿ.ಕೋಡಿಹಳ್ಳಿ, ಚಿಕ್ಕಿಂಗಳ, ಜೋಡಿ ತಿಮ್ಮಾಪುರ, ಎಮ್ಮೆದೊಡ್ಡಿಗೆ ಗ್ರಾಮ ಪಂಚಾಯಿತಿಗಳ ಗ್ರಾಮ ಲೆಕ್ಕಿಗ, ಕಂದಾಯ ಅಧಿಕಾರಿ, ವಿಷಯ ನಿರ್ವಾಹಕ ಕೊಠಡಿ, ಗಣಕಯಂತ್ರ ಕೊಠಡಿ ಸೇರಿದಂತೆ ಉಪತಹಸೀಲ್ದಾರ್‌ ಕಚೇರಿಯ ಪುಟ್ಟಕೊಠಡಿಗಳಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಇದೆ. ನಾಡಕಚೇರಿಯಲ್ಲಿ ಸರ್ಕಾರ ಸಾರ್ವಜನಿಕರು ಮತ್ತು ರೈತರಿಗೆ ಬೇಕಾದ 48-50 ಸೇವೆಗಳು ಪಿಂಚಣಿಯಿಂದ ಪಹಣಿವರೆಗೆ ಸೌಲಭ್ಯ ಪಡೆಯಲು ಪ್ರತಿನಿತ್ಯ ಅರ್ಜಿ ಸಲ್ಲಿಸಲು ಬರುತ್ತಾರೆ. ಇಲ್ಲಿಗೆ ಬರುವ ಹಿರಿಯರು, ವೃದ್ಧರು ಅರ್ಜಿ ಸಲ್ಲಿಸುವುದು ತಡವಾದರೆ ಕುಡಿಯಲು ನೀರು ಇಲ್ಲದೆ, ಶೌಚಾಲಯವೂ ಇಲ್ಲದೆ ಜನ ಬಯಲು ಶೌಚವನ್ನೆ ಆಶ್ರಹಿಸಬೇಕಾದ ಸ್ಥಿತಿ ಇದೆ. ಹೆಣ್ಣುಮಕ್ಕಳಿಗಂತು ತೊಂದರೆ ತಪ್ಪಿದ್ದಲ್ಲ. ಕಸವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಸ್ವಚ್ಚ ಭಾರತಕ್ಕೆ ಅವಮಾನವಾಗುವಂತಿದೆ ಇಲ್ಲಿನ ಸ್ಥಿತಿ. ಈ ಕಚೇರಿಯಲ್ಲಿ ಸರಿಯಾದ ಕಪಾಟುಗಳಿಲ್ಲದೆ ಕಡತಗಳು ನೆಲದ ಮೇಲೆಯೆ ಧೂಳು ಹಿಡಿದು ಬಿದ್ದಿವೆ.

ಬೆಂಗಳೂರು: ಪಾಲಿಕೆ ಆಸ್ಪತ್ರೆಗಳಲ್ಲಿ ಔಷಧಿಗಳೇ ಇಲ್ಲ!

ಒಟ್ಟಾರೆ ಏನಾದರೂ ಆಗಲಿ ಪ್ರತಿನಿತ್ಯ ಅತ್ಯವಶ್ಯಕ ದಾಖಲೆ ಮತ್ತು ಸರ್ಕಾರಿ ಕಡತ ಹಾಗೂ ಅರ್ಜಿ ಸಲ್ಲಿಕೆ ಮಾಡುವವ ಕಚೇರಿಗಳಿಗೆ ಉತ್ತಮ ಸುಸಜ್ಜಿತ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡಿದಾಗ ಮಾತ್ರ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎನ್ನುತ್ತಾರೆ ನಾಗರೀಕರು. ಜಿಲ್ಲಾಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗ್ಗೆ ಬಗೆಹರಿಸುವಿರಾ ಎನ್ನುವುದನ್ನು ಕಾದು ನೋಡಬೇಕಿದೆ.

ನಾಡಕಚೇರಿಗೆ ಏನಾದರೂ ಅರ್ಜಿ ಸಲ್ಲಿಸಲು ಬಂದಾಗ ಬಾಯಾರಿಕೆ ಏನಾದರೂ ಆದರೂ ಕುಡಿಯಲು, ನೀರಿಲ್ಲ. ಸರ್ಕಾರ ಬರೀ ಪತ್ರಿಕೆ ಮತ್ತು ಟಿವಿಗಳಲ್ಲಿ ಜಾಹಿರಾತು ತೋರಿಸುತ್ತದೆ.ಇಂತಹ ಸನ್ನಿವೇಶದಲ್ಲಿನ ಅದು ಕೂಡ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಕಚೇರಿ ಅವರಿಗೆ ಕಾಣುತ್ತಿಲ್ಲವೆ ಎನ್ನುತ್ತಾರೆ.

-ದೊಡ್ಡಘಟ್ಟಲಕ್ಷ್ಮ ಮ್ಮ.

ಹತ್ತು ಹಲವು ಯೋಜನೆ ಸದುಪಯೋಗಕ್ಕೆ ಇಲ್ಲಿಗೆ ಬರುವವರಿಗೆ ಸರ್ಕಾರ ಮೂಲಭೂತ ಸೌಕರ್ಯವನ್ನು ನೀಡಿದಾಗ ಮಾತ್ರ ಜನರಿಗೆ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಇದು ಕೂಡ ನಿರ್ಲಕ್ಷಕ್ಕೆ ಒಳಗಾಗುತ್ತದೆ. ಅಧಿಕಾರಿಗಳು ಸರ್ಕಾರವೇ ಕೊಡದಿದ್ದಕ್ಕೆ ನಾವೇನು ಮಾಡಲಿ ಎಂದು ಕೈಕಟ್ಟಿಕೂರುತ್ತಾರೆ ಎನ್ನುತ್ತಾರೆ.

- ಕಾಂಗ್ರೆಸ್‌ ಯುವ ಮುಖಂಡ ವಿನಾಯಕ್‌.ಕೆ.ಎನ್‌.

ಕಟ್ಟಡ ಸ್ಥಳಾಂತರಕ್ಕೆ ಮತ್ತು ಇದರ ಅಭಿವೃದ್ಧಿಗಾಗಿ ಹಲವು ಬಾರಿ ತಾಲೂಕು ಕಚೇರಿಗೆ ಅರ್ಜಿ ಜೊತೆ ಮಾಹಿತಿ ನೀಡಲಾಗಿದೆ.ಅದನ್ನು ಅವರು ಸಹ ಸಮಸ್ಯೆ ಬಗ್ಗೆ ಪತ್ರ ಬರೆದು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದಾರೆ.

- ಬಿ.ವಿ.ರವಿಕುಮಾರ್‌.ಉಪತಹಶೀಲ್ದಾರ್‌.

Latest Videos
Follow Us:
Download App:
  • android
  • ios