ನಾಪೋಕ್ಲು ನಾಡಕಚೇರಿ ಸಂಪರ್ಕ ರಸ್ತೆ ಅವ್ಯವಸ್ಥೆ; ಸಾರ್ವಜನಿಕರಿಗೆ ತೊಂದರೆ

ನಾಪೋಕ್ಲು ನಾಡಕಚೇರಿ ಸಂಪರ್ಕಿಸುವ ರಸ್ತೆ ಇಕ್ಕೆಲಗಳಲ್ಲಿ ಗಿಡಗಮಟೆಗಳಿಂದ ಕುಡಿದ್ದು ಸಾರ್ವಜನಿಕ ಸಂಚಾರಕ್ಕೆ ತೊಂದರೆಗುತ್ತಿದೆ.

Napoklu Nadakacheri  road mess; Public nuisance madikeri rav

ನಾಪೋಕ್ಲು (ಜು.24) : ಇಲ್ಲಿನ ನಾಡಕಚೇರಿಗೆ ತೆರಳುವ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು ರಸ್ತೆಯ ಇಕ್ಕೆಲಗಳಲ್ಲಿ ಕಾಡು ಪೊದೆಗಳು ಬೆಳೆದು ರಸ್ತೆಗೆ ಚಾಚಿವೆ. ರಸ್ತೆಯ ಎರಡೂ ಬದಿ ಚರಂಡಿ ಇಲ್ಲದೆ ಕೆಸರು ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ಸಮಯ ಓಡಾಡುವುದಕ್ಕೂ ಭಯವಾಗುವಷ್ಟು ಗಿಡಗಂಟೆ ಬೆಳೆದಿವೆ. ಹೀಗಿದ್ದು ರಸ್ತೆ ಸುರಕ್ಷತೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1890 ರಲ್ಲಿ ನಿರ್ಮಿಸಲಾದ ನಾಡಕಚೇರಿಯು ಹಲವು ಗ್ರಾಮಸ್ಥರ ದಿನನಿತ್ಯದ ವ್ಯವಹಾರದ ತಾಣವಾಗಿದೆ. ನಾಪೋಕ್ಲು ಹೋಬಳಿ ವ್ಯಾಪ್ತಿಗೆ ಒಳಪಟ್ಟ27 ಗ್ರಾಮಗಳ ಗ್ರಾಮಸ್ಥರು ಕಂದಾಯ ಇಲಾಖೆಯ ವಹಿವಾಟಿಗಾಗಿ ನಾಡಕಚೇರಿಗೆ ಆಗಮಿಸುತ್ತಾರೆ. ಹದಗೆಟ್ಟರಸ್ತೆಯಲ್ಲಿ ನಡೆದಾಡುವುದೇ ಕಷ್ಟಕರವಾಗಿದೆ. ಸಮೀಪದಲ್ಲೇ ವಿದ್ಯುತ್‌ ಇಲಾಖೆಯ ಕಚೇರಿ ಇದ್ದು ಬಿಲ್‌ ಪಾವತಿಸಲು ಬರುವ ಮಂದಿ ಕೆಸರಿನಲ್ಲೇ ನಡೆದುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಈ ರಸ್ತೆಯ ದುರಸ್ತಿ ಕಾರ್ಯಕ್ಕೆ ಕೂಡಲೇ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗುಡುಗಿನ ಅಬ್ಬರಕ್ಕೆ ಕೊಡಗಿನಲ್ಲಿ ಹುಟ್ಟಿದ್ದ ಚಂದದ ಅಣಬೆಗಳು ಹೀಗಿವೆ..!

 

ಈ ರಸ್ತೆಯ ಎರಡು ಬದಿಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ತೀವ್ರ ಸಮಸ್ಯೆಯಾಗಿದೆ. ಇದರಿಂದಾಗಿ ರಸ್ತೆಯಲ್ಲಿ ದಿನನಿತ್ಯ ನಾಡಕಚೇರಿಗೆ ಬರುವ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು

- ಮಣವಟ್ಟಿರ ಎಂ. ಮಾಚಯ್ಯ, ನಾಪೋಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ

 

ಒಣ ಮತ್ತು ಹಸಿ ಕಸಗಳನ್ನು ಪ್ರತ್ಯೇಕವಾಗಿ ಕಸ ವಿಲೇವಾರಿ ವಾಹನಕ್ಕೆ ನೀಡಲು ಸೂಚನೆ

ಗ್ರಾಮ ಪಂಚಾಯಿತಿಗೆ ಒಳಪಟ್ಟಹೋಟೆಲ್‌, ಬೇಕರಿ ಇನ್ನಿತರ ಅಂಗಡಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ಕೊಡುವಂತೆ ಅಂಗಡಿಗಳ ಮಾಲಕರಿಗೆ ಹಾಗೂ ಮನೆಗಳಿಗೆ ನೋಟಿಸ್‌ ನೀಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ನಾಪೋಕ್ಲು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರವಾಸಿಗರೇ ಹುಷಾರ್, ಕಾವೇರಿ ತೀರದಲ್ಲಿ ಕಸ ಎಸೆದ್ರೆ ದಂಡ ಕಟ್ಬೇಕು..!

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಎಚ್‌.ಎಸ್‌. ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಸಭೆ ನಡೆಯಿತು. ಪ್ಲಾಸ್ಟಿಕ್‌, ಘನ ಮತ್ತು ದ್ರವ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಪ್ರತಿದಿನ ಕಸ ವಿಲೇವಾರಿ ವಾಹನಕ್ಕೆ ನೀಡಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸುವ ನಿಟ್ಟಿನಲ್ಲಿ ಬಟ್ಟೆಬ್ಯಾಗ್‌ಗಳನ್ನು ಉಪಯೋಗಿಸುವುದರ ಮೂಲಕ ಪ್ಲಾಸ್ಟಿಕ್‌ ನಿಷೇಧ ಅಭಿಯಾನಕ್ಕೆ ಪಂಚಾಯಿತಿಯೊಂದಿಗೆ ನಾಗರಿಕರು ಕೈಜೋಡಿಸಬೇಕು. ಪ್ಲಾಸ್ಟಿಕ್‌ ಬ್ಯಾಗ್‌ಗಳ ಬಳಕೆ ಕಂಡು ಬಂದರೆ 1000 ರುಪಾಯಿಂದ ರಿಂದ 25000 ರುಪಾಯಿ ವರೆಗೆ ಭಾರಿ ಮೊತ್ತದ ದಂಡ ವಿಧಿಸಲಾಗುವುದು. ಇದು ಅಂತಿಮ ಎಚ್ಚರಿಕೆಯಾಗಿದೆ ಎಂದು ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಎಚ್‌.ಎಸ್‌. ತಿಳಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಮ್ಮದ್‌ ಖುರೇಶಿ, ಪಿಡಿಒ, ಸದಸ್ಯರಾದ ಕುಲ್ಲೇಟಿರ ಅರುಣ್‌ ಬೇಬ, ಮಾಚೆಟ್ಟಿರ ಕುಶು ಕುಶಾಲಪ್ಪ, ಲಲಿತಾ, ಹೇಮಾವತಿ ಅರುಣ್‌, ಕುಮಾರ ಇನ್ನಿತರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios