ವರ್ಷದ ಹಿನ್ನೋಟ: ದೇಶವನ್ನೇ ತಲ್ಲಣಗೊಳಿಸಿದ್ದ ಶಿರೂರು ಟೋಲ್‌ಗೇಟ್ ಅಪಘಾತ
ಅಪಘಾತ, ದರೋಡೆ, ಕೊಲೆ, ಸುಲಿಗೆ ಹೀಗೆ ಅಪರಾಧ ಪ್ರಕರಣಗಳು 2022ರಲ್ಲಿ ಜನತೆಯನ್ನು ತಲ್ಲಣಗೊಳಿಸಿದ್ದೂ ಹೌದು. ಅದರಲ್ಲಿ ಶಿರೂರು ಟೋಲ್‌ಗೇಟ್‌ನಲ್ಲಿ ನಡೆದ ಅಪಘಾತದಲ್ಲಿ ಹೊನ್ನಾವರದ ನಾಲ್ವರು ಅಸುನೀಗಿದ ಘಟನೆ ಹೃದಯ ವಿದ್ರಾವಕವಾಗಿತ್ತು.
ಜಿ.ಡಿ. ಹೆಗಡೆ
ಕಾರವಾರ (ಡಿ.31) : ಅಪಘಾತ, ದರೋಡೆ, ಕೊಲೆ, ಸುಲಿಗೆ ಹೀಗೆ ಅಪರಾಧ ಪ್ರಕರಣಗಳು 2022ರಲ್ಲಿ ಜನತೆಯನ್ನು ತಲ್ಲಣಗೊಳಿಸಿದ್ದೂ ಹೌದು. ಅದರಲ್ಲಿ ಶಿರೂರು ಟೋಲ್‌ಗೇಟ್‌ನಲ್ಲಿ ನಡೆದ ಅಪಘಾತದಲ್ಲಿ ಹೊನ್ನಾವರದ ನಾಲ್ವರು ಅಸುನೀಗಿದ ಘಟನೆ ಹೃದಯ ವಿದ್ರಾವಕವಾಗಿತ್ತು.
ಮಾರ್ಚ್:
20ರಂದು ಕುಮಟಾ ತಾಲೂಕಿನ ದಿವಗಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿ 6 ಜನರು ಗಾಯಗೊಂಡಿದ್ದರು. ಮಂಗಳೂರಿನಿಂದ ಗೋವಾಕ್ಕೆ ತೆರಳುವಾಗ ಘಟನೆ ನಡೆದಿತ್ತು. ಅದೃಷ್ಟವಶಾತ್ ಪ್ರಾಣಾಪಾಯವಾಗಿರಲಿಲ್ಲ.
ವರ್ಷದ ಹಿನ್ನೋಟ: ಉತ್ತರ ಕನ್ನಡಕ್ಕೆ Super Specialty Hospital ಆಸ್ಪತ್ರೆ ಹೊಸ ಭರವಸೆ...
ಏಪ್ರಿಲ್:
11ರಂದು ದಾಂಡೇಲಿಯ ಡೊಮಗೆರಾ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಎರಡು ಜನರು ಮೃತಪಟ್ಟಿದ್ದು, ಮೂರು ಜನರು ಗಾಯಗೊಂಡಿದ್ದರು. ರಾಮನಗರ ಜಿಲ್ಲೆಯ ಮೂಲದ ಪ್ರವಾಸಕ್ಕೆಂದು ಆಗಮಿಸಿದ್ದರು.
22ರಂದು ಮುಂಡಗೋಡ ತಾಲೂಕಿನ ಬಾಳಿಹಳ್ಳಿ ಕ್ರಾಸ್ ಬಳಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಟಾಟಾ ಏಸ್ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, 10 ಜನರು ಗಂಭೀರವಾಗಿ ಗಾಯಗೊಂಡಿದ್ದರು. 10 ಜನರಿಗೆ ಸಣ್ಣಪುಟ್ಟಗಾಯವಾಗಿತ್ತು. ಮುಂಡಗೋಡಿನ ಬಡ್ಡಿಗೇರಿ ಗೌಳಿದಡ್ಡಿಯಿಂದ ಕಾರ್ಮಿಕರನ್ನು ಕಡೆದುಕೊಂಡು ಹೋಗಲಾಗುತ್ತಿತ್ತು.
ಮೇ:
19ರಂದು ಕಾರವಾರದ ಜಿಲ್ಲಾಸ್ಪತ್ರೆಗೆ ಮೊಮ್ಮಗು ನೋಡಲು ಬಂದ ಅತ್ತೆಗೆ ಅಳಿಯನೇ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದರು. ದಾಂಡೇಲಿ ಮೂಲದ ವ್ಯಕ್ತಿಯಿಂದ ಚಾಕು ಇರಿತವಾಗಿತ್ತು.
20ರಂದು ಭಟ್ಕಳದಲ್ಲಿ 400 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ಮಾಡಿ ಒಬ್ಬನನ್ನು ವಶಕ್ಕೆ ಪಡೆದಿದ್ದರು. ಭಟ್ಕಳ ತಾಲೂಕಿನ ಚಂಡೆಕಾನಿನ ನಿವಾಸಿ ಆರೋಪಿಯಾಗಿದ್ದು, .80 ಸಾವಿರ ಮೌಲ್ಯದ ಮಾಂಸ ವಶಕ್ಕೆ ಪಡೆಯಲಾಗಿತ್ತು.
ಜೂನ್:
15ರಂದು ಹಳ್ಳಿಯಾಳದ ಮೊಬೈಲ್ ಅಂಗಡಿ ಕಳ್ಳತನಕ್ಕೆ ಸಂಬಂಧಿಸಿ ಹುಬ್ಬಳ್ಳಿ ಮೂಲದ 3 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. .4 ಲಕ್ಷ ಮೌಲ್ಯದ ಸ್ಮಾರ್ಚ್‌ಫೋನ್, ಲ್ಯಾಪ್‌ಟಾಪ್ ಒಳಗೊಂಡು ವಿವಿಧ ವಸ್ತುವನ್ನು ಆರೋಪಿತರಿಂದ ಜಪ್ತು ಮಾಡಲಾಗಿತ್ತು.
ಜುಲೈ:
21ರಂದು ಹೊನ್ನಾವರ-ಕುಂದಾಪುರ ಗಡಿಯಾದ ಶಿರೂರು ಟೋಟ್‌ಗೇಟ್‌ನಲ್ಲಿ ಆ್ಯಂಬುಲೆ®್ಸ… ಪಲ್ಟಿಯಾಗಿ ಹೊನ್ನಾವರ ಮೂಲದ ಒಂದೇ ಕುಟುಂಬದ ನಾಲ್ಕು ಜನರು ಮೃತಪಟ್ಟಿದ್ದರು. ಹೊನ್ನಾವರದಿಂದ ಉಡುಪಿಗೆ ರೋಗಿಯನ್ನು ಸಾಗಿಸುತ್ತಿದ್ದ ವೇಳೆ ಎದುರಿನಿಂದ ಬಂದ ದನ ತಪ್ಪಿಸಲು ಹೋಗಿ ಆ್ಯಂಬುಲೆ®್ಸ… ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು.
ಆಗಸ್ಟ್:
23ರಂದು ಭಟ್ಕಳ ತಾಲೂಕಿನ ಬಾಲಕನನ್ನು ಕಿಡ್ನಾಪ್ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿ ಮೂರು ಆರೋಪಿಗಳನ್ನು ಬಂಧಿಸಿದ್ದು, ರಾತ್ರಿ ಮನೆಯಿಂದ ಹೊರ ಹೋದ ಬಾಲಕ ವಾಪಸ್ ಆಗಮಿಸಿರಲಿಲ್ಲ. ಸಿಸಿಟಿವಿಯಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಆತನನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಆತನ ತಾತನೇ ಹೊರದೇಶದಲ್ಲಿದ್ದುಕೊಂಡು ತನ್ನ ಸಹಚರರಿಂದ ಬಾಲಕನನ್ನು ಕಿಡ್ನಾಪ್ ಮಾಡಿಸಿರುವುದು ತನಿಖೆ ವೇಳೆ ತಿಳಿದು ಬಂದಿತ್ತು.
ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಿಎಂ ಮುಂದೆ ಷರತ್ತುಗಳನ್ನಿಟ್ಟ ಹೋರಾಟಗಾರರು
ಸೆಪ್ಟೆಂಬರ್:
2ರಂದು ಮುಂಡಗೋಡ ತಾಲೂಕಿನ ಮಳಗಿ ಸಹಕಾರಿ ಸಂಘದ ಸೆಕ್ಯುರಿಟಿ ಗಾರ್ಡ್‌ನನ್ನು ಕಟ್ಟಿಹಾಕಿ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ್ದರು. ಆದರೆ ಸಂಘದ ಲಾಕರ್ ತೆಗೆಯಲು ಬಾರದೇ ಕಳ್ಳತನ ವಿಫಲವಾಗಿತ್ತು.
ನವೆಂಬರ್:
19ರಂದು ಕಾರವಾರದ ಕೋಡಿಬಾಗದಲ್ಲಿ ಒಬ್ಬಂಟಿಯಾಗಿ, ಜೋಪಡಿಯಲ್ಲಿ ವಾಸಿಸುತ್ತಿದ್ದ ವೃದ್ಧೆಯನ್ನು ನ್ಯಾಯಾಧೀಶೆ ರೇಣುಕಾ ರಾಯ್ಕರ ರಕ್ಷಣೆ ಮಾಡಿದ್ದರು. ಸ್ವತಃ ಸ್ಥಳಕ್ಕೆ ರೆಳಿದ ರೇಣುಕಾ ಆಕೆಯನ್ನು ಆ ಜೋಪಡಿಯಿಂದ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ಕೊಡಿಸಿದ್ದರು.
ಡಿಸೆಂಬರ್:
8ರಂದು ಕುಮಟಾ ತಾಲೂಕಿನ ಮೇಲಿನಕೂಜಳ್ಳಿಯಲ್ಲಿ ಮಗನೇ ತಾಯಿಯನ್ನು ಕೊಂದಿದ್ದನು. ಮದ್ಯದ ಅಮಲಿನಲ್ಲಿ ತಾಯಿಯ ಮೇಲೆ ಹಲ್ಲೆ ಮಾಡಿದ್ದು, ಆಕೆ ಮೃತಪಟ್ಟಬಳಿಕ ಹೃದಯಾಘಾತವಾಗಿದೆ ಎಂದು ಬಿಂಬಿಸಿ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದನು. ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿ ಮೃತಪಟ್ಟವಳ ಮಗ ಹಾಗೂ ಪತಿಯನ್ನು ಬಂಧಿಸಿದ್ದರು.