ವರ್ಷದ ಹಿನ್ನೋಟ: ಉತ್ತರ ಕನ್ನಡಕ್ಕೆ Super Specialty Hospital ಆಸ್ಪತ್ರೆ ಹೊಸ ಭರವಸೆ

ಮೂರು ವರ್ಷಗಳಿಂದ ಕೊರೋನಾ ಕಾಟದಿಂದ ತತ್ತರಿಸಿದ್ದ ಜಿಲ್ಲೆಯ ಜನತೆ 2022 ನಿಟ್ಟುಸಿರುಬಿಟ್ಟವರ್ಷ. ಹರ್ಷದ ಹೊನಲೇನೂ ಹರಿಯದಿದ್ದರೂ ಕೊರೋನಾ ಕರಿನೆರಳಿನಿಂದ ಬಹುಮಟ್ಟಿಗೆ ಚೇತರಿಸಿಕೊಂಡ ನೆಮ್ಮದಿ ಮೂಡಿಸಿದ್ದೇನೂ ಸುಳ್ಳಲ್ಲ.

Year Review Super Specialty Hospital New Hope at uttarakannada rav

ವಸಂತಕುಮಾರ ಕತಗಾಲ

 ಕಾರವಾರ (ಡಿ.31) : ಮೂರು ವರ್ಷಗಳಿಂದ ಕೊರೋನಾ ಕಾಟದಿಂದ ತತ್ತರಿಸಿದ್ದ ಜಿಲ್ಲೆಯ ಜನತೆ 2022 ನಿಟ್ಟುಸಿರುಬಿಟ್ಟವರ್ಷ. ಹರ್ಷದ ಹೊನಲೇನೂ ಹರಿಯದಿದ್ದರೂ ಕೊರೋನಾ ಕರಿನೆರಳಿನಿಂದ ಬಹುಮಟ್ಟಿಗೆ ಚೇತರಿಸಿಕೊಂಡ ನೆಮ್ಮದಿ ಮೂಡಿಸಿದ್ದೇನೂ ಸುಳ್ಳಲ್ಲ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಭರವಸೆ ಬಿಟ್ಟರೆ 2022ರಲ್ಲಿ ಹೊಸ ಯೋಜನೆಗಳು, ಹಳೆಯ ಕನಸುಗಳು ನನಸಾಗಿದ್ದು, ಯುವ ಜನತೆಯ ಕೈಗೆ ಉದ್ಯೋಗ ಸಿಕ್ಕಿದ್ದು ಇಂತಹ ಯಾವುದೇ ವಿದ್ಯಮಾನಗಳು ನಡೆದಿಲ್ಲವಾದರೂ ಕೊರೋನಾ ದಾಳಿಯಿಂದ ಚೇತರಿಸಿಕೊಂಡು ಹೊಸ ಭರವಸೆಯನ್ನು ಹುಟ್ಟಿಸುವಲ್ಲಿ ಸಫಲವಾಗಿದೆ.

ಉತ್ತರ ಕನ್ನಡ(Uttara kannada) ಜಿಲ್ಲೆಯ ಬಹುಕಾಲದ ಬೇಡಿಕೆ, ಕನಸಾದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ(super specialtyhospitals ) ಸರ್ಕಾರ ಸಮ್ಮತಿಸಿದ್ದು ಈ ವರ್ಷದ ಅತಿದೊಡ್ಡ ವಿದ್ಯಮಾನ. ಅದಿನ್ನೂ ಆರಂಭಿಕ ಹಂತದಲ್ಲಿದ್ದರೂ ಆಸ್ಪತ್ರೆ ನಿರ್ಮಾಣಕ್ಕೆ ಆರಂಭಿಕ ಸಿದ್ಧತೆ ಕ್ರಮಗಳು ಗೋಚರಿಸಿದ್ದಂತೂ ಹೌದು. ಇದಕ್ಕಾಗಿ ಜನಪ್ರತಿನಿಧಿಗಳ ಪ್ರಯತ್ನ, ಸಾಮಾಜಿಕ ಜಾಲತಾಣ(Social media)ದಲ್ಲಿ ನಡೆದ ಹೋರಾಟ ಗಮನಾರ್ಹವಾದುದು. ಕುಮಟಾದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಮೂರು ಕಡೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಸದ್ಯದಲ್ಲೇ ಸ್ಥಳವನ್ನು ಅಂತಿಮಗೊಳಿಸುವ ಭರವಸೆಯೂ ದೊರೆತಿದೆ. ಇತಿಹಾಸದಲ್ಲೇ ಮೊಟ್ಟಮೊದಲು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ  ಪರವಾಗಿ ಧ್ವನಿ ಎತ್ತಿದ್ದು ಜಿಲ್ಲೆಯ ದೃಷ್ಟಿಯಿಂದ ಮಹತ್ವದ್ದಾಗಿದೆ.

 

ಉತ್ತರ ಕನ್ನಡಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ: ಸಿಎಂ ಮುಂದೆ ಷರತ್ತುಗಳನ್ನಿಟ್ಟ ಹೋರಾಟಗಾರರು

ಕೊರೋನಾ(Coronovirus) ಹಿನ್ನೆಲೆಯಲ್ಲಿ ಬಂದ್‌ ಆಗಿದ್ದ ಪ್ರವಾಸಿ ತಾಣಗಳು ಸಾರ್ವಜನಿಕರಿಗೆ ಮುಕ್ತವಾದವು. ಗೋಕರ್ಣ, ಮುರ್ಡೇಶ್ವರ, ಸಾತೊಡ್ಡಿ, ಮಾಗೋಡ, ಉಂಚಳ್ಳಿ, ವಿಭೂತಿ ಮತ್ತಿತರ ಜಲಪಾತಗಳು, ಯಾಣ, ಸಿಂಥೇರಿಯಾP್ಸ…, ಜೇನುಕಲ್ಲು ಗುಡ್ಡ ಮತ್ತಿತರ ಪ್ರವಾಸಿ ತಾಣಗಳಲ್ಲಿ ಚಟುವಟಿಕೆಗಳು ಶುರುವಾಯಿತು. ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಿಗೆ 2022ರಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ರಾಜ್ಯದ 76488 ಪ್ರವಾಸಿಗರು ಭೇಟಿ ನೀಡಿದ್ದರೆ, 4666ರಷ್ಟುವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು.

ಔದ್ಯೋಗಿಕವಾಗಿ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಅವಕಾಶ ದೊರೆಯಲಿಲ್ಲ. ಉದ್ಯಮಗಳು ತಲೆ ಎತ್ತಲಿಲ್ಲ. ಹೊಸ ಉನ್ನತ ಶೈಕ್ಷಣಿಕ ಸಂಸ್ಥೆಗಳೂ ಆರಂಭಗೊಂಡಿಲ್ಲ. ಯುವ ಜನತೆ ಉದ್ಯೋಗದ ಕನವರಿಕೆಯಲ್ಲೇ 2022ನ್ನು ಕಳೆಯುವಂತಾಯಿತು.

2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ತಾಲೀಮು ಈ ವರ್ಷವೇ ಆರಂಭಗೊಂಡಿರುವುದಂತೂ ಹೌದು. ಟಿಕೆಟ್‌ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯಾದ್ಯಂತ ಬಿಜೆಪಿ ಬಲವಾದ ಹಿಡಿತ ಹೊಂದಿದ್ದು, ಬರಲಿರುವ ಚುನಾವಣೆಯಲ್ಲಿ ಪ್ರಾಬಲ್ಯ ಸ್ಥಾಪಿಸಲು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಹೋರಾಟಕ್ಕೆ ವೇದಿಕೆ ಸಜ್ಜಾಗುತ್ತಿದೆ.

ನೌಕಾನೆಲೆಯವರು ನಿರ್ಮಿಸಲಿರುವ ನಾಗರಿಕ ಬಳಕೆ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದೆ. ಪರಿಹಾರದ ಮೊತ್ತವನ್ನು ನಿಗದಿ ಪಡಿಸಲಾಗಿದೆ. ಭಟ್ಕಳದಿಂದ ಗೋವಾ ಗಡಿ ತನಕದ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯ 2022ರಲ್ಲೂ ಮುಕ್ತಾಯವಾಗದೇ ಇರುವುದು ಜನತೆಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

Uttara Kannada: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಇನ್ನೂ ಸಲ್ಲಿಕೆಯಾಗಿಲ್ಲ ಪ್ರಸ್ತಾವನೆ!

ಜಿಲ್ಲೆಯ ಇಬ್ಭಾಗ ಮುನ್ನೆಲೆಗೆ

ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಿ ಎರಡು ಜಿಲ್ಲೆಯನ್ನಾಗಿಸುವ ಬೇಡಿಕೆ ಬಹು ಸಮಯದಿಂದ ಇದೆ. ಆದರೆ ಈಚೆಗೆ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿರುವುದು ಈ ಬೇಡಿಕೆಗೆ ರೆಕ್ಕೆಪುಕ್ಕ ಒದಗಿದಂತಾಗಿದೆ. ಇದರಿಂದ ಪ್ರತ್ಯೇಕ ಜಿಲ್ಲೆಯ ಬೇಡಿಕೆಯ ಕೂಗು ಬಲವಾಗಿದೆ. ಈ ನಡುವೆ ಪ್ರತ್ಯೇಕ ಜಿಲ್ಲೆಗೆ ಶಿರಸಿ ಕೇಂದ್ರವಾಗಬೇಕು ಎನ್ನುವ ಬೇಡಿಕೆಯ ಜೊತೆಗೆ ಯಲ್ಲಾಪುರ ಜಿಲ್ಲಾ ಕೇಂದ್ರವಾಗಲಿ ಎನ್ನುವ ಬೇಡಿಕೆಯೂ ಕೇಳಿಬಂದಿದೆ.

Latest Videos
Follow Us:
Download App:
  • android
  • ios