ಸಂಪೂರ್ಣ ಹದಗೆಟ್ಟ ಹನೂರು-ಬಂಡಳ್ಳಿ ಮಾರ್ಗದ ರಸ್ತೆ: ಗುಂಡಿಮಯ ರಸ್ತೆಯಲ್ಲಿ ಒಂದಲ್ಲ ಒಂದು ಆಕ್ಸಿಡೆಂಟ್!
ಅದು 30 ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಸಂಪೂರ್ಣ ರಸ್ತೆ ಹದಗೆಟ್ಟು ಹೋಗಿದೆ. ಈ ರಸ್ತೆ ಡಾಂಬರು ಕಂಡು 20 ವರ್ಷಗಳೇ ಕಳೆದಿದೆ. ಇತ್ತಿಚ್ಚಿಗೆ ಈ ರಸ್ತೆಯಲ್ಲಿ ಸಂಚರಿದೋದು ದುಸ್ತರವಾಗಿದೆ.

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಫೆ.14): ಅದು 30 ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಸಂಪೂರ್ಣ ರಸ್ತೆ ಹದಗೆಟ್ಟು ಹೋಗಿದೆ. ಈ ರಸ್ತೆ ಡಾಂಬರು ಕಂಡು 20 ವರ್ಷಗಳೇ ಕಳೆದಿದೆ. ಇತ್ತಿಚ್ಚಿಗೆ ಈ ರಸ್ತೆಯಲ್ಲಿ ಸಂಚರಿಸೋದು ದುಸ್ತರವಾಗಿದೆ. ಸಾಕಷ್ಟು ಅಪಘಾತಗಳು ಕೂಡ ಸಂಭವಿಸಿದೆ. ಈ ಹದಗೆಟ್ಟ ರಸ್ತೆಗೆ ಡಾಂಬರೀಕರಣ ಯಾವಾಗ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ. ನಾವು ಹೇಳ್ತಿರೋದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹನೂರು-ಬಂಡಳ್ಳಿ-ಶಾಗ್ಯಗೆ ಸಂಚಾರ ಕಲ್ಪಿಸಿರುವ ಹೆದ್ದಾರಿಯ ಬಗ್ಗೆ.
ಈ ಭಾಗದಲ್ಲಿ 30 ಕ್ಕೂ ಹಳ್ಳಿಗಳ ಜನರು ಈ ರಸ್ತೆಯನ್ನು ಸಂಚಾರಕ್ಕೆ ಅವಲಂಬಿಸಿದ್ದಾರೆ. ರಸ್ತೆಯಲ್ಲಿ ಸಂಚಾರ ಮಾತ್ರ ವಾಹನ ಸವಾರರಿಗೆ ಮಾತ್ರ ನಿತ್ಯ ನರಕಮಯವಾಗಿದೆ. 20 ವರ್ಷಗಳು ಕಳೆದರೂ ಕೂಡ ಈ ರಸ್ತೆಗೆ ಡಾಂಬರೀಕರಣ ನಡೆದೆ ಇಲ್ಲ. ನಿತ್ಯ ಈ ಭಾಗದ ಒಂದಲ್ಲ ಒಂದು ಕಡೆ ಅಪಘಾತ ಸಂಭವಿಸಿದ ನಿದರ್ಶನ ಸಾಕಷ್ಟಿದೆ. ಇನ್ನೂ ಅನಾರೋಗ್ಯ ಸಂಭವಿಸಿದರೆ, ಗರ್ಭೀಣಿಯರನ್ನು ಆಸ್ಪತ್ರೆಗೆ ಕರೆದೊಯ್ಯುವುದೇ ದೊಡ್ಡ ಸವಾಲಾಗಿದೆ. ಆಸ್ಪತ್ರೆಗೆ ಬರುವ ದಾರಿ ಮಧ್ಯೆಯಲ್ಲಿ ಹೆರಿಗೆಯಾದ ಪ್ರಸಂಗಗಳು ಕೂಡ ನಡೆದಿವೆ.
ಇನ್ನೂ ವಾಹನ ಚಾಲಕರಂತು ಈ ರಸ್ತೆಯಲ್ಲಿ ಸಂಚಾರ ಮಾಡ್ತಿರುವುದರಿಂದ ನಮ್ಮ ವಾಹನಗಳಿಗೆ ಒನ್ ಟು ಡಬಲ್ ಖರ್ಚು ಬರ್ತಿದೆ ಅಂತಾ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಹನೂರು, ಬಂಡಳ್ಳಿ, ಶಾಗ್ಯ ರಸ್ತೆಯ ಬಗ್ಗೆ ಸ್ಥಳೀಯ ಶಾಸಕ ಮಂಜುನಾಥ್ ರನ್ನು ಪ್ರಶ್ನಿಸಿದರೆ ಈ ರಸ್ತೆಗಳು ಹದಗೆಟ್ಟು 20 ವರ್ಷಗಳೇ ಕಳೆದು ಹೋಗಿದೆ. ನಾನು ಗೆದ್ದು ಎರಡು ವರ್ಷಗಳಾಗುತ್ತಿದೆ. ಈಗ ಸಿಎಂ ನಿಧಿಯಿಂದ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ.
ಕಾಡ್ಗಿಚ್ಚು ತಪ್ಪಿಸಲು ಅರಣ್ಯ ಇಲಾಖೆಯಿಂದ ಫೈರ್‌ಲೈನ್: ಮುಂದಿನ 3 ತಿಂಗಳು ಬೆಂಕಿ ತಡೆಯೋದು ದೊಡ್ಡ ಟಾಸ್ಕ್!
ಈ ಭಾಗದ ಚಿಕ್ಕಲ್ಲೂರು, ಬಂಡಳ್ಳಿ ಭಾಗದ ರಸ್ತೆಗಳಿಗೆ ಶೀಘ್ರದಲ್ಲೇ ಗುದ್ದಲಿ ಪೂಜೆ ನಡೆಯಲಿದೆ.ಟೆಂಡರ್ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಈ ಭಾಗದ ಜನರ ಸಾಕಷ್ಟು ವರ್ಷದ ಕನಸು ಈಡೇರಲಿದೆ. ಹನೂರು ಕ್ಷೇತ್ರದ ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ಬಹುತೇಕ ಭಾಗದ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸಿದ್ದೇನೆ ಅಂತಿದ್ದಾರೆ. ಒಟ್ನಲ್ಲಿ ಹಳ್ಳ ಕೊಳ್ಳ ಬಿದ್ದ ಈ ರಸ್ತೆಯಲ್ಲಿ ಸಂಚಾರ ಮಾತ್ರ ದುಸ್ತರವಾಗಿದೆ. ನಿತ್ಯ ವಾಹನ ಸವಾರರಿಗೆ ಸಂಚಾರ ನರಕಮಯವಾಗಿದೆ. ಶೀಘ್ರದಲ್ಲೇ ಈ ರಸ್ತೆ ದುರಸ್ತಿಪಡಿಸಲಿ ಅಂತಾ ಸಾರ್ವಜನಿಕರು ದೇವರಲ್ಲಿ ಮನವಿ ಮಾಡ್ತಿದ್ದಾರೆ.