Asianet Suvarna News Asianet Suvarna News

Rain News: ನಿರಂತರ ಮಳೆಗೆ ಕಂಗೆಟ್ಟಶಿರಸಿ ಜನತೆ

ಗಣೇಶ ಹಬ್ಬದ ಖುಷಿಯಲ್ಲಿದ್ದ ಜನತೆಯನ್ನು ಮಳೆ ಆತಂಕಕ್ಕೆ ದೂಡಿದೆ.   ಭಾರಿ ಮಳೆಯಿಂದ  ಜನಜೀವನವನ್ನು ಕಂಗೆಟ್ಟಿದ್ದಾರೆ.. ನೂರಾರು ವರ್ಷಗಳ ಹಿಂದಿನ ಮರವೊಂದು ಬುಡಸಮೇತ ಕಿತ್ತು ಮನೆಯೊಂದರ ಮೇಲೆ ಬಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ. ವಾಸವಿದ್ದ ಇಬ್ಬರಿಗೆ ಸಣ್ಣ ಪುಟ್ಟಗಾಯಗಳಾದ ಘಟನೆ ತಾಲೂಕಿನ ಹಳ್ಳಿ ಕಾನಿನಲ್ಲಿ ನಡೆದಿದೆ.

The people of Shirsi are suffering due to continuous rain
Author
First Published Sep 2, 2022, 9:15 AM IST

ಶಿರಸಿ (ಸೆ.2) : ಗಣೇಶ ಹಬ್ಬದ ಖುಷಿಯಲ್ಲಿದ್ದ ಜನತೆಯನ್ನು ಮಳೆ ಆತಂಕಕ್ಕೆ ದೂಡಿದೆ.   ಭಾರಿ ಮಳೆಯಿಂದ  ಜನಜೀವನವನ್ನು ಕಂಗೆಟ್ಟಿದ್ದಾರೆ.. ನೂರಾರು ವರ್ಷಗಳ ಹಿಂದಿನ ಮರವೊಂದು ಬುಡಸಮೇತ ಕಿತ್ತು ಮನೆಯೊಂದರ ಮೇಲೆ ಬಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ. ವಾಸವಿದ್ದ ಇಬ್ಬರಿಗೆ ಸಣ್ಣ ಪುಟ್ಟಗಾಯಗಳಾದ ಘಟನೆ ತಾಲೂಕಿನ ಹಳ್ಳಿ ಕಾನಿನಲ್ಲಿ ನಡೆದಿದೆ.

 

Uttara Kannada Rainfall; ಮಲಗಿದ್ದವರ ಮೇಲೆ ಮನೆ ಕುಸಿದು 4 ಮಂದಿ ದುರ್ಮರಣ

ಎಲ್ಲರೂ ಹಬ್ಬದ ವಾತಾವರಣದಲ್ಲಿ ಮಲಗಿದ್ದ ಸಂದರ್ಭದಲ್ಲಿ ಹತ್ತಾರು ವರ್ಷಗಳಿಂದ ಮನೆಯ ಹಿಂಬದಿಯಲ್ಲಿ ಒಣಗಿ ನಿಂತಿದ್ದ ಮರ ಬುಡಸಮೇತ ಮನೆಯ ಮೇಲೆ ಬಿದ್ದಿದೆ. ಭಯಾನಕ ಶಬ್ದ ಕೇಳಿ ಗ್ರಾಮಸ್ಥರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಲಕ್ಷಾಂತರ ರು. ನಷ್ಟಆಗಿದೆ ಎಂದು ಅಂದಾಜಿಸಲಾಗಿದೆ. ತಕ್ಷಣ ಗ್ರಾಮಸ್ಥರು ಗಾಯಾಳುಗಳನ್ನು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಕುಳವೆ ಗ್ರಾಪಂ ಅಧ್ಯಕ್ಷ ವಿನಯ ಭಟ್‌, ಸದಸ್ಯ ಸಂದೇಶ ಭಟ್‌ ಬೆಳಖಂಡ, ಗ್ರಾಮ ಲೆಕ್ಕಾಧಿಕಾರಿ ಸೌಮ್ಯ ಶೇಚ್‌, ಗ್ರಾಮ ಸಹಾಯಕ ನಾರಾಯಣ ನಾಯ್ಕ, ಗ್ರಾಪಂ ಸಿಬ್ಬಂದಿ ರವಿ ಪಟಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆಯಿಂದಾಗಿ ತಾಲೂಕಿನ ಜೈನಮಠದ ದೇವಸ್ಥಾನ ಕಂಪೌಂಡ್‌ ಕುಸಿದು ಬಿದ್ದಿದೆ. ಬನವಾಸಿ ಹೋಬಳಿಯ ಅಂಡಗಿ ಗ್ರಾಪಂ ವ್ಯಾಪ್ತಿಯ ಹೆಬ್ಬತಿ ಗ್ರಾಮದ ಹರಿಜನ ಕೇರಿಯಲ್ಲಿ ನೀರು ನುಗ್ಗಿ ಸ್ಥಳೀಯರನ್ನು ಹತ್ತಿರದ ಶಾಲೆಗೆ ಸ್ಥಳಾಂತರಿಸಿ ಊಟದ ವ್ಯವಸ್ಥೆ ಕೈಗೊಳ್ಳಲಾಯಿತು. ಹೆಬ್ಬತ್ತಿ ಗ್ರಾಮಕ್ಕೆ ಗುರುವಾರ ಸಹಾಯಕ ಆಯುಕ್ತ ಆರ್‌. ದೇವರಾಜ ಹಾಗೂ ತಹಸೀಲ್ದಾರ ಶ್ರೀಧರ ಭೇಟಿ ನೀಡಿದ್ದಾರೆ. ಇಲ್ಲಿಯ 46 ಕುಟುಂಬಗಳ 211 ಕುಟುಂಬದ ಸದಸ್ಯರು ಅತಂತ್ರರಾಗಿದ್ದಾರೆ. ಅಧಿಕಾರಿಗಳು ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ. ಶಿವಳ್ಳಿ ಗ್ರಾಪಂನ ಉಲ್ಲಾಳ ಹಾಗೂ ಆನಗೋಡಕೊಪ್ಪ ಬಿದ್ದ ಮಳೆಯಿಂದ ಭತ್ತದ ಬೆಳೆ ಹಾನಿಯಾಗಿದೆ. ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಅಕಾಲಿಕ ಮಳೆಗೆ ಕೊಚ್ಚಿ ಹೋದ ಕಾಫಿ

ಸಿಶುಕ್ರವಾರ ಸಂಜೆ ದೀಢಿರಾಗಿ ಸುರಿದ ಅಕಾಲಿಕ ಮಳೆಗೆ ಸಿದ್ದಾಪುರದ ಮಡಿಕೇರಿ ರಸ್ತೆಯ ಸಮೀಪದಲ್ಲಿರುವ ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಕೊಚ್ಚಿ ಹೋಗಿದ್ದು ಅಪಾರ ನಷ್ಟಸಂಭವಿಸಿದೆ. ಕೊಡಗಿನಲ್ಲಿ ಕಾಫಿ ಕೊಯ್ಲು ಆರಂಭವಾಗಿದ್ದು, ಎಲ್ಲೆಡೆ ಕೊಯ್ದ ಕಾಫಿಯನ್ನು ಕಣದಲ್ಲಿ ಒಣಗಲು ಹಾಕುವುದು ವಾಡಿಕೆ. ಶುಕ್ರವಾರ ಸಂಜೆ ದಿಢೀರನೆ ಸುಮಾರು ಒಂದೂವರೆ ಇಂಚಿಗೂ ಅಧಿಕ ಮಳೆ ಸುರಿದ ಹಿನ್ನೆಲೆಯಲ್ಲಿ ಸ್ಥಳೀಯ ಬೆಳೆಗಾರ ಪ್ರತೀಶ್‌ ಗೌಡ ಎಂಬುವರು ಕಣದಲ್ಲಿ ಒಣಗಲು ಹಾಕಿದ್ದ ಸುಮಾರು 20 ಚೀಲಕ್ಕಿಂತಲೂ ಅಧಿಕ ಕಾಫಿ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಇದರಿಂದ ಅಪಾರ ನಷ್ಟವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ: ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ

Follow Us:
Download App:
  • android
  • ios