ಮಂಗಳೂರಿನ ಉಳ್ಳಾಲ ಕೋಡಿಯಲ್ಲಿ ಮೀನುಗಾರಿಕಾ ದೋಣಿ ದುರಂತ ದಡಕ್ಕೆ ಬಂದು ಅಪ್ಪಳಿಸಿದ ಮೀನುಗಾರಿಕಾ ಬೋಟ್  ಸ್ಥಳೀಯರಿಂದ ಬೋಟ್‌ನಲ್ಲಿದ್ದ 10 ಮಂದಿ ರಕ್ಷಣೆ

ಮಂಗಳೂರು (ಮೇ.23): ಉಳ್ಳಾಲ ಕೋಡಿಯಲ್ಲಿ ಮೀನುಗಾರಿಕಾ ಬೋಟ್ ಅವಘಢ ಸಂಭವಿಸಿದ್ದು ಬೋಟಿನಲ್ಲಿದ್ದ 10 ಮಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ. 

ಮಂಗಳೂರು ಹೊರವಲಯದ ಉಳ್ಳಾಲ ಕೋಡಿ ಎಂಬಲ್ಲಿ ಶನಿವಾರ ರಾತ್ರಿ 1.30ರ ಸುಮಾರಿಗೆ ಅಝಾನ್ ಎಂಬ ಬೋಟ್ ಬಂದು ದಡಕ್ಕೆ ಅಪ್ಪಳಿಸಿದೆ. ಅದೃಷ್ಟವಶಾತ್ ಬೋಟಿನಲ್ಲಿದ್ದವರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಚಂಡಮಾರುತದ ವೇಳೆ ಟಗ್‌ನಿಂದ ಪಾರಾದ 5 ಮಂದಿಗೆ ಕೊರೋನಾ ಸೋಂಕು .

ಮಂಗಳೂರು ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆಂದು ಅಶ್ವಫ್ ಎಂಬುವವರಿಗೆ ಸೇರಿದ್ದ ಅಝಾನ್ ಬೋಟ್ ತೆರಳಿದ್ದು ಈ ವೇಳೆ ಚಾಲಕನ ಮೈಮರೆವಿನಿಂದ ಈ ಘಟನೆ ಸಂಭವಿಸಿದೆ. 

ಬೋಟ್‌ನಲ್ಲಿದ್ದ ಐವರು ಕುಡಿದಿದ್ದು,ಚಾಲಕ ಬೋಟನ್ನು ಇನ್ನೋರ್ವನ ಸುಪರ್ದಿಗೆ ಕೊಟ್ಟಿದ್ದಾರೆ. ಈ ವೇಳೆ ಆತನಿಗೆ ಬೋಟ್ ನಿಯಂತ್ರಿಸಲಾಗದೆ ದಡಕ್ಕೆ ಬಂದು ಅಪ್ಪಳಿಸಿದೆ. 

ಈ ವೇಳೆ ಸ್ಥಳೀಯರು ಗಮನಿಸಿ ಬೊಟಿನಲ್ಲಿದ್ದ 10 ಮಂದಿಯನ್ನು ರಕ್ಷಿಸಿದ್ದಾರೆ.