ಸೂಕ್ತ ಬೆಲೆ ಸಿಗದೆ ಎಲೆಕೋಸು ಬೆಳೆ ನಾಶ ಮಾಡಿದ ಬಳ್ಳಾರಿ ರೈತ !
ಸೂಕ್ತಬೆಲೆ ಸಿಗದಿದ್ದಕ್ಕೆ ರೈತರೊಬ್ಬರು ಎಲೆಕೋಸು ಬೆಳೆಯನ್ನು ಟ್ರ್ಯಾಕ್ಟರ್‌ನಿಂದ ಹಾಳು ಮಾಡಿದ ಘಟನೆ ತಾಲೂಕಿನ ಹಾರಕನಾಳು ದೊಡ್ಡ ತಾಂಡಾದಲ್ಲಿ ಬುಧವಾರ ನಡೆದಿದೆ.

ಹರಪನಹಳ್ಳಿ (ಏ.20) : ಸೂಕ್ತಬೆಲೆ ಸಿಗದಿದ್ದಕ್ಕೆ ರೈತರೊಬ್ಬರು ಎಲೆಕೋಸು ಬೆಳೆಯನ್ನು ಟ್ರ್ಯಾಕ್ಟರ್‌ನಿಂದ ಹಾಳು ಮಾಡಿದ ಘಟನೆ ತಾಲೂಕಿನ ಹಾರಕನಾಳು ದೊಡ್ಡ ತಾಂಡಾದಲ್ಲಿ ಬುಧವಾರ ನಡೆದಿದೆ.
ಗ್ರಾಮದ ರೈತ ನಾಗ್ಯಾನಾಯ್ಕ(Nagya naik) ಅವರು ತಮ್ಮ ಅಂದಾಜು 3 ಎಕರೆ ಅಡಕೆ ಜಮೀನಿನಲ್ಲಿ 2 ಎಕರೆಯಷ್ಟುಎಲೆಕೋಸನ್ನು ಬೆಳೆದಿದ್ದರು. ಉತ್ತಮ ಫಸಲು ಬಂದಿತ್ತು. ಆದರೆ ಸರಿಯಾದ ಬೆಲೆ ಸಿಗದೆ, ಅದನ್ನು ಕಟಾವು ಮಾಡಿ ಕೂಲಿಕಾರರಿಗೂ ಕೊಡಲು ಸಾಧ್ಯವಾಗದಷ್ಟುಹಾನಿ ಅನುಭವಿಸಿದ್ದಾರೆ. ಇದರಿಂದ ಬೇಸತ್ತ ರೈತ ಟ್ರ್ಯಾಕ್ಟರ್ ಮೂಲಕ ಎಲೆಕೋಸು ಬೆಳೆಯನ್ನು ನಾಶ ಮಾಡಿದ್ದಾರೆ. ಕಳೆದ ವರ್ಷ ಉತ್ತಮ ಬೆಲೆ ಸಿಕ್ಕಿತ್ತು. ಕ್ವಿಂಟಲ್‌ಗೆ .5ರಿಂದ .6 ಸಾವಿರ ಬೆಲೆಗೆ ಮಾರಾಟವಾಗಿತ್ತು.
ಬೀಜ, ಗೊಬ್ಬರ, ಕೀಟನಾಶಕ ಸೇರಿ ಪ್ರತಿ ಎಕರೆಗೆ ಕನಿಷ್ಠ .30 ಸಾವಿರ ಖರ್ಚು ಮಾಡಿದ್ದರು. ಇಳುವರಿ ಉತ್ತಮವಾಗಿದ್ದರೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗಲಿಲ್ಲ, ರೈತರು ಯಾವುದೇ ಬೆಳೆಯನ್ನು ಬೆಳೆದರೂ ಸರ್ಕಾರ ಅವರಿಗೆ ಸೂಕ್ತ ಬೆಂಬಲ ಬೆಲೆ ಕೊಟ್ಟು ಖರೀದಿಸಬೇಕು.
ನಾಗ್ಯನಾಯ್ಕ, ಬೆಳೆಹಾನಿ ಮಾಡಿದ ರೈತ
ಬೆಳೆಗೆ ಸೂಕ್ತ ಬೆಲೆ ಸಿಕ್ಕಾಗ ಅನ್ನದಾತನ ಬದುಕು ಹಸನು: ಶ್ರೀ
ನೀರುಗುಂದ: ಮಳೆಗೆ ಪ್ರಾರ್ಥಿಸಿ ದೇವರ ಮೊರೆ
ಶನಿವಾರಸಂತೆ ದಿನೇ ದಿನೇ ಕೊಡಗಿನಲ್ಲೂ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇದುವರೆಗೆ ಈ ವರ್ಷ ಒಂದು ಹನಿಯೂ ಮಳೆಯಾಗದೆ ಜನ ತತ್ತರಿಸಿದ್ದಾರೆ. ಬಹಳಷ್ಟುಕಡೆಗಳಲ್ಲಿ ಜನರು ಮಳೆಯ ಆಗಮನಕ್ಕಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುತ್ತಿದ್ದಾರೆ.
ಉತ್ತರ ಕೊಡಗಿನ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಜನರು ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಾರೆ. ಕೃಷಿಕರು ಮಳೆಯನ್ನು ನಂಬಿ ಕೃಷಿ ಮಾಡುತ್ತಾರೆ. ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಇದುವರೆಗೂ ಒಂದು ಹನಿಯು ಮಳೆಯಾಗದಿರುವ ಹಿನ್ನೆಲೆಯಲ್ಲಿ ಕೊಡ್ಲಿಪೇಟೆ ಸಮಿಪದ ನೀರುಗುಂದ ಗ್ರಾಮದಲ್ಲಿ ಗ್ರಾಮಸ್ಥರು ಗ್ರಾಮದ ಶ್ರೀ ಕ್ಷೇತ್ರ ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಮಳೆಯ ಆಗಮನಕ್ಕಾಗಿ ಗ್ರಾಮದ ಶ್ರೀ ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನೀರುಗುಂದ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮದಲ್ಲಿ ರೈತರು ಕಾಫಿ, ತೆಂಗು, ಅಡಕೆ, ಕಾಳುಮೆಣಸು ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಇದುವರೆಗೂ ಮಳೆಯಾಗದ ಹಿನ್ನೆಲೆಯಲ್ಲಿ ಕೃಷಿ ಬೆಳೆಗಳು ಸುಟ್ಟು ಹೋಗಿದ್ದು ರೈತರು ಕೆಂಗೆಟ್ಟಿದ್ದಾರೆ.
ಕಳೆದ ಬಾರಿ ಇದೇ ಅವಧಿಯಲ್ಲಿ ಕೊಡ್ಲಿಪೇಟೆ ಹೋಬಳಿಯಲ್ಲಿ 7 ಇಂಚು ಮಳೆಯಾಗಿತ್ತು. ಈ ವರ್ಷ ಒಂದು ಹನಿಯೂ ಮಳೆಯಾಗದಿರುವುದ್ದರಿಂದ ಕೃಷಿ ಬೆಳೆ ಸುಟ್ಟು ಹೋಗಿರುವ ಹಿನ್ನೆಲೆಯಲ್ಲಿ ಮಳೆಗಾಗಿ ಗ್ರಾಮದ ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿದ್ದೇವೆ ಎಂದು ರೈತರು ಹೇಳಿದರು.
ಸೂಕ್ತ ಬೆಲೆ ಇಲ್ಲ ಎಸೆಯಲು ಜಾಗ ಇಲ್ಲ: ಟೊಮೆಟೋ ಬೆಳೆಗಾರರ ಕಣ್ಣೀರಿನ ಕತೆ
ಯುವಕನ ಉಪವಾಸ ವ್ರತ:
ಗ್ರಾಮದ ಅವಿವಾಹಿತ ಮತ್ತು ಶಿವದೀಕ್ಷೆ ಪಡೆದಿರುವ ಯುವಕನೊಬ್ಬ ಬೆಳಗ್ಗಿನಿಂದಲೆ ಉಪವಾಸ ವ್ರತದಲ್ಲಿದ್ದು ಸ್ವಾಮೀಜಿ ನೇತೃತ್ವದಲ್ಲಿ ಪೂಜಾಕೈಂಕರ್ಯದಲ್ಲಿ ಪಾಲ್ಗೊಂಡಿದ್ದ. ವಿಶೇಷ ಪೂಜಾ ಕಾರ್ಯದಲ್ಲಿ ಗ್ರಾಮಸ್ಥರು, ರೈತರು ಪಾಲ್ಗೊಂಡಿದ್ದರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.