ಶಿವಮೊಗ್ಗ ಗಲಭೆ ಹಿಂದೆ ಭಯೋತ್ಪಾದನಾ ಸಂಘಟನೆ ಪಾತ್ರ: ನಳಿನ್ ಕುಮಾರ್ ಕಟೀಲ್
ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂದೂಗಳ ಮನೆ ಮೇಲೆ ನಡೆದಿರುವ ದಾಳಿ ಪೂರ್ವ ನಿಯೋಜಿತ ಕೃತ್ಯ. ಘಟನೆಯ ಪ್ರತ್ಯಕ್ಷದರ್ಶಿಗಳ ಮಾಹಿತಿ ಪಡೆದಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದ ಐದಾರು ಕಡೆಗಳಲ್ಲಿ ಘಟನೆ ನಡೆದಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಶಿವಮೊಗ್ಗ(ಅ.06): ರಾಗಿಗುಡ್ಡ ಪ್ರಕರಣದ ಹಿಂದೆಯೂ ಭಯೋತ್ಪಾದನಾ ಸಂಘಟನೆಗಳ ಪಾತ್ರವಿದೆ. ಭಯೋತ್ಪಾದನೆ ಚಟುವಟಿಕೆಗಳು ನಡೆಸುವ ಯುವಕರೇ ಈ ಮೆರವಣಿಗೆಯಲ್ಲಿ ಪಾಲ್ಗೊಂಡು ಕೃತ್ಯ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ಶಿವಮೊಗ್ಗದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂದೂಗಳ ಮನೆ ಮೇಲೆ ನಡೆದಿರುವ ದಾಳಿ ಪೂರ್ವ ನಿಯೋಜಿತ ಕೃತ್ಯ. ಘಟನೆಯ ಪ್ರತ್ಯಕ್ಷದರ್ಶಿಗಳ ಮಾಹಿತಿ ಪಡೆದಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದ ಐದಾರು ಕಡೆಗಳಲ್ಲಿ ಘಟನೆ ನಡೆದಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಕಲ್ಲು ಹೊಡೆದ್ರು..ಆವಾಜ್ ಹಾಕಿದ್ರು..ಪೊಲೀಸರಿಗೇ ಹೆದರಿಸಿದ್ರು: ರಾಗಿಗುಡ್ಡದ 8ನೇ ಕ್ರಾಸ್‌ನಲ್ಲಿ ನಿಜಕ್ಕೂ
ಪೊಲೀಸರು ವಿಫಲ:
ಈದ್ ಮೆರವಣೆಗೆ ಮೊದಲು ಗಣೇಶ ಚತುರ್ಥಿ ನಡೆದಿತ್ತು. ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ಶಾಂತಿ ರೀತಿಯಲ್ಲಿ ನಡೆದಿದೆ. ರಾಗಿಗುಡ್ಡದಲ್ಲಿ ಗಣೇಶೋತ್ಸವ ನಡೆದ ಮೇಲೆ ಈದ್ ಮೆರವಣಿಗೆ ಮಾಡಲಾಗಿದೆ. ಈದ್ ಮೆರವಣಿಗೆಯ ವೇಳೆ ಹಿಂದುಗಳನ್ನು ಕೆರಳಿಸುವ ವೇಳೆ ಟಿಪ್ಪು, ಔರಂಗ ಜೇಬ್, ಅಖಂಡ ಭಾರತದ ಕಟೌಟ್ ನಿರ್ಮಿಸಿ ಸಾಬರ ಸಾಮಾಜ್ಯ ಎಂದು ಹಾಕಿದ್ದಾರೆ. ಇದನ್ನ ತೆರವುಗೊಳಿಲಿಸುವಲ್ಲಿ ಪೊಲೀಸ್ ಇಲಾಖೆ ವೈಫಲ್ಯವಾಗಿದೆ ಎಂದು ಗುಡುಗಿದರು.
ಗಲಭೆ ನಡೆದ ವೇಳೆ ಇಲ್ಲಿನ ಎಸ್‌ಪಿ ಅವರ ಮೇಲೂ ಕಲ್ಲು ತೂರಲಾಗಿದೆ. ಪೊಲೀಸರಿಗೆ ಇಲ್ಲಿ ರಕ್ಷಣೆ ಇಲ್ಲವಾಗಿದೆ. ಗಲಭೆ ಸುತ್ತ ಪೊಲೀಸ್ ವೈಫಲ್ಯ ಎದ್ದು ಕಾಣುತ್ತದೆ. ಹಿಂದುಗಳನ್ನೇ ಟಾರ್ಗೆಟ್ ಮಾಡಿ ಗಲಭೆ ನಡೆದಿದೆ. ಗಣೇಶೋತ್ಸವದಲ್ಲಿ ಭಾಗಿಯಾದವರ ಹುಡುಗರ ಮೇಲೆ ಹಲ್ಲೆಯಾಗಿದೆ. ರಕ್ಷಿಸಲು ಬಂದವರ ಮೇಲೂ ಮಾರಾಣಾಂತಿಕ ಹಲ್ಲೆಯಾಗಿದೆ. ಹಿಂದುಗಳ ಮನೆ ಕಲ್ಲು ತೂರಿದ್ದಾರೆ. ಮುಸ್ಲಿಮರ ಒಂದೇ ಒಂದು ಮನೆಗೆ ಕಲ್ಲು ಬಿದ್ದಿಲ್ಲ. ಈ ಘಟನೆ ಏಕಾಏಕಿ ನಡೆದಿಲ್ಲ. ಇದು ಪೂರ್ವ ನಿಯೋಜಿತ ಕೃತ್ಯ ಎಂದು ಹರಿಹಾಯ್ದರು.
ಘಟನೆ ವೇಳೆ ಮಹಿಳೆಯರನ್ನು ರಕ್ಷಿಸಲು ಬಂದವರ ಮೇಲೆ ಕೇಸ್ ಹಾಕಲಾಗಿದೆ. ಕ್ರಿಮಿನಲ್ ಹಿನ್ನೆಲೆ ಇಲ್ಲದವರನ್ನ ಜೈಲಿಗೆ ಹಾಕಲಾಗಿದೆ. ಕ್ರಿಶ್ಚಿಯನ್ ರನ್ನ ಜೈಲಿಗೆ ಕಳುಹಿಸಲಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ, ಮಂಗಳೂರು, ಭಟ್ಕಳದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಲಾಗಿತ್ತು. ಆದರೂ ಯಾವ ಕ್ರಮವೂ ತೆಗೆದುಕೊಳ್ಳಲಿಲ್ಲ ಎಂದು ಕಿಡಿ ಕಾರಿದರು.
ಅವರು ಪ್ರದರ್ಶನ ಮಾಡಿದ್ದು 'ಮರದ ಕತ್ತಿ' ಅನ್ನುವ ಪರಮೇಶ್ವರ ಒಬ್ಬ ಅಸಮರ್ಥ ಗೃಹ ಸಚಿವ: ಸಿಟಿ ರವಿ ವಾಗ್ದಾಳಿ
ಸರ್ಕಾರ ವಿರುದ್ಧ ಆಕ್ರೋಶ:
ನಮ್ಮ ಸರ್ಕಾರ ಪ್ರವೀಣ್ ನೆಟ್ಟಾರು, ಹರ್ಷನ ಹತ್ಯೆಯಾದಾಗ ಕಠಿಣ ಕ್ರಮ ತೆಗೆದುಕೊಂಡಿತು. ಶಾರೀಕ್ ಕುಕ್ಕರ್ ಬಾಂಬ್ ಬ್ಲಾಸ್ಟ್ ನಡೆದಾಗ ಎನ್ಐಗೆ ವಹಿಸಲಾಗಿತ್ತು. ಡಿಜೆ ಹಳ್ಳಿ ಕೆಜಿ ಹಳ್ಳಿ, ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರ ಪ್ರಕರಣ ಹಿಂಪಡೆಯಲು ಮುಂದಾಗಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಕೆ.ಎಫ್.ಡಿ. ಹಾಗೂ ಎಸ್.ಡಿ.ಪಿ.ಐ.ಗೆ ಕಾಂಗ್ರೆಸ್ ಬೆಂಬಲ ಇದೆ. ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ಯಾರ ಪಾತ್ರವಿತ್ತು? ಜಮೀರ್ ಸಿದ್ಧರಾಮಯ್ಯ ಶಿಷ್ಯ, ಡಿ.ಕೆ.ಶಿವಕುಮಾರ್ ಯಾರ ಶಿಷ್ಯ ಎಂಬುದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲಿಗೆ ಟಿಪ್ಪು, ಎರಡನೇ ಅಧ್ಯಾಯನ ಔರಂಗಜೇಬ್. ಇದರ ಹಿಂದೆ ಆತಂಕವಾದಿಗಳಿರುವ ಶಂಕೆ ಇದೆ. ಇವರಿಗೆ ಸಿದ್ದರಾಮಯ್ಯರ ಸರ್ಕಾರ ಬೆಂಬಲವಿದೆ. ರಾಗಿಗುಡ್ಡದ ಪ್ರಕರಣದಲ್ಲಿ ಆರೋಪಿತರು ಯಾರಿದ್ದಾರೆ ಎಲ್ಲರನ್ನೂ ಬಂಧಿಸಬೇಕು. ಪುರುಷರಿಗಿಂತ ಮಹಿಳೆಯರ ಮೇಲೆ ಹಲ್ಲೆಯಾಗಿದೆ. ಸರ್ಕಾರ ಹಿಂದೂ ವಿರೋಧಿ ಮಾತ್ರವಲ್ಲ ಮಹಿಳೆಯ ವಿರೋಧಿ ಸರ್ಕಾರವಾಗಿದೆ. ಪ್ರಕರಣ ಮುಚ್ಚುಹಾಕಲು ಕಾಂಗ್ರೆಸ್ ಯತ್ನಿಸಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಅಶ್ವತ್ಥ್‌ನಾರಾಯಣ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ಇದ್ದರು.