ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಕಲಬುರಗಿಯಲ್ಲಿ ಉದ್ವಿಗ್ನ ಪರಿಸ್ಥಿತಿ
ಪುತ್ಥಳಿಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಅಭಿಮಾನಿಗಳು, ದಲಿತ ಸಂಘಟನೆಗಳ ಧರಣಿ ನಡೆಸುತ್ತಿವೆ. ರಾಮ ಮಂದಿರ ವೃತ್ತಕ್ಕೆ ನುಗ್ಗಿದ ಅಂಬೇಡ್ಕರ್ ಅಭಿಮಾನಿಗಳು, ಮಾನವ ಸರಪಳಿ ರಚಿಸಿ ರಸ್ತಾ ರೋಕೋ ಮಾಡಿದ್ದಾರೆ. ಇದರಿಂದಾಗಿ ಸಾವಿರಾರು ವಾಹನಗಳು ಕಲಬುರಗಿ ರಿಂಗ್ ರಸ್ತೆಯಲ್ಲೇ ನಿಲ್ಲುವ ದುರವಸ್ಥೆ ನಿರ್ಮಾಣವಾಗಿದೆ.
ಕಲಬುರಗಿ(ಜ.23): ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಹಿನ್ನಲೆಯಲ್ಲಿ ಕಲಬುರಗಿ ನಗರದ ರಾಮ ಮಂದಿರ ಸರ್ಕಲ್, ಕೋಟನೂರ್ ಹಾಗೂ ಜಿಡಗಾ ಮಠ ಪ್ರದೇಶ ಉದ್ವಿಗ್ನಗೊಂಡಿದೆ. ಕಲಬುರಗಿ ನಗರದ ಹೊರವಲಯದ ಜೇವರ್ಗಿ ರಸ್ತೆಯ ಕೋಟನೂರ್ ಬಳಿ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮಗೆ ಮಧ್ಯರಾತ್ರಿ ಕಿಡಿಗೇಡಿಗಳು ಅಪಮಾನ ಮಾಡಿದ್ದಾರೆ.
ಪುತ್ಥಳಿಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಅಭಿಮಾನಿಗಳು, ದಲಿತ ಸಂಘಟನೆಗಳ ಧರಣಿ ನಡೆಸುತ್ತಿವೆ. ರಾಮ ಮಂದಿರ ವೃತ್ತಕ್ಕೆ ನುಗ್ಗಿದ ಅಂಬೇಡ್ಕರ್ ಅಭಿಮಾನಿಗಳು, ಮಾನವ ಸರಪಳಿ ರಚಿಸಿ ರಸ್ತಾ ರೋಕೋ ಮಾಡಿದ್ದಾರೆ. ಇದರಿಂದಾಗಿ ಸಾವಿರಾರು ವಾಹನಗಳು ಕಲಬುರಗಿ ರಿಂಗ್ ರಸ್ತೆಯಲ್ಲೇ ನಿಲ್ಲುವ ದುರವಸ್ಥೆ ನಿರ್ಮಾಣವಾಗಿದೆ.
ಇನ್ನೊಂದು ವಸತಿ ಶಾಲೆಯ ವಿದ್ಯಾರ್ಥಿನಿಗೆ ಮಗು ಜನನ: ಪ್ರಾಂಶುಪಾಲ, ವಾರ್ಡನ್ ಅಮಾನತು!
ರಾಮ ಮಂದಿರ ವೃತ್ತದಿಂದಲೇ ಕಲಬುರಗಿಗೆ ಬಂದು ಹೋಗುವ ವಾಹನಗಳ ಪ್ರವೇಶವಾಗುತ್ತದೆ. ಇದೀಗ ಅದೇ ವೃತ್ತದಲ್ಲ ರಸ್ತೆ ತಡೆ ಸಾಗಿದೆ. ಕಳೆದ 1 ಗಂಟೆಯಿಂದ ಯುವಕರು ರಸ್ತೆ ತಡೆ ನಡೆಸುತ್ತಿದ್ದಾರೆ. 1 ಗಂಟೆಯಿಂದಲೂ ಭಾರೀ ವಾಹನಗಳು, ಕಾರ್, ಬಸ್‌ಗಳು ಸಾಲು ಸಾಲು ನಿಂತಿದ್ದರಿಂದ ಜನರು ಪರದಾಟ ಹೇಳತೀರತಾಗಿದೆ.