Asianet Suvarna News Asianet Suvarna News

ತೆಳ್ಳಾರು ಮೋಡೆ ಸಾವು; ಅಂತ್ಯಕ್ರಿಯೆಗೆ ಹರಿದುಬಂತು ಜನಸಾಗರ!

ಕಂಬಳ(Kambala) ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಉಡುಪಿ (Udupi)ಕಾರ್ಕಳದ ತೆಳ್ಳಾರು(Tellaru) ನೇರೋಳ್ಳ ಪಲ್ಕೆ ಬರ್ಕೆ ಮನೆಯ "ತೆಳ್ಳಾರು ಮೋಡೆ"(Tellaru mode) ಕೋಣವು ಸಾವನಪ್ಪಿದೆ.

Tennaru mode kona death  People flocked to the funera udupi rav
Author
First Published Sep 18, 2022, 3:19 PM IST

ಉಡುಪಿ (ಸೆ.18) : ಕರಾವಳಿಗರಿಗೆ ಕಂಬಳವೆಂದರೆ ಹುಚ್ಚು ಪ್ರೇಮ. ಕಂಬಳ ಅಂದರೆ ಕೋಣ; ಕೋಣ ಅಂದರೆ ಕೇವಲ ಪ್ರಾಣಿಯಲ್ಲ.. ಮನೆಯ ಸದಸ್ಯ ಎಂಬ ಭಾವನೆಯಲ್ಲಿ ಕಂಬಳದಲ್ಲಿ ಓಡುವ ಕೋಣಗಳನ್ನು ಸಾಕಲಾಗುತ್ತದೆ. ಗುಣಮಟ್ಟದ ಆಹಾರ, ವಾಸದ ಸ್ಥಳಕ್ಕೆ ಹವಾನಿಯಂತ್ರಿತ ವ್ಯವಸ್ಥೆ ಮಾಡುವುದಲ್ಲದೆ ಅವುಗಳ ಸುಖ-ದುಃಖಗಳಲ್ಲೂ ಮಾಲೀಕರು ಭಾಗಿಯಾಗುತ್ತಾರೆ.  ಇನ್ನು ಪ್ರೀತಿಯ ಕೋಣ ಸತ್ತರೆ ಕೇಳಬೇಕೆ? ಬಂಧುವೊಬ್ಬ ಸತ್ತಾಗ ಮಾಡುವ ಎಲ್ಲಾ ಕಾರ್ಯಗಳನ್ನು ಪಾಲಿಸಿ ಗೌರವಾನ್ವಿತ ರೀತಿಯಲ್ಲಿ ಬಿಳ್ಕೊಡಲಾಗುತ್ತದೆ.

ಜನಪದ ಕ್ರೀಡೆ ಕಂಬಳವೀಗ ಒಡೆದ ಮನೆ!, ಸಾಂಪ್ರದಾಯಿಕ ಆಯೋಜಕರಿಲ್ಲವೇ ಮಾನ್ಯತೆ?

ತೆಳ್ಳಾರು ಮೋಡೆ ಸಾವು ಕಂಬನಿ: ಕಂಬಳ(Kambala) ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಉಡುಪಿ (Udupi)ಕಾರ್ಕಳದ ತೆಳ್ಳಾರು(Tellaru) ನೇರೋಳ್ಳ ಪಲ್ಕೆ ಬರ್ಕೆ ಮನೆಯ "ತೆಳ್ಳಾರು ಮೋಡೆ"(Tellaru mode) ಕೋಣವು ಸಾವನಪ್ಪಿದೆ. ಕಂಬಳ ಕ್ಷೇತ್ರದಲ್ಲಿ ತೆಳ್ಳಾರು ಮೋಡೆ ಅಂತಾನೆ ಖ್ಯಾತಿ ಪಡೆದ ಈ ಕೋಣ, ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ಪಡೆಯುತ್ತಿದ್ದರೂ, ಔಷಧಿಗೆ ಸ್ವಂದಿಸದೇ ಇದೀಗ ಸಾವನ್ನಪ್ಪಿದೆ.

ಅಪ್ರತಿಮ ಸಾಧಕ ತೆಳ್ಳಾರು ಮೋಡೆ: ಕಂಬಳ ಕ್ರೀಡೆಯ ಹಗ್ಗ ಹಿರಿಯ, ಕಿರಿಯ, ನೇಗಿಲು ಹಿರಿಯ, ಕಿರಿಯ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿರುವ ತೆಳ್ಳಾರು ಮೋಡೆ, ಅಡ್ಡ ಹಲಗೆಯಲ್ಲಿ ಪ್ರತಿ ಬಾರಿಯೂ ಸರಣಿ ಪ್ರಶಸ್ತಿ ತನ್ನದಾಗಿರಿಸುವ ಮೂಲಕ ಕಂಬಳ ಕ್ಷೇತ್ರದಲ್ಲಿ ಜನಪ್ರಿಯವಾಗಿತ್ತು. ಕಾರ್ಕಳ ತೆಳ್ಳಾರು ನೇರೋಳ್ಳ ಪಲ್ಕೆ ಬರ್ಕೆ ಮನೆಯ ಕೋಣ ಇದಾಗಿದ್ದು, ಈ ಮೂಲಕ ದುರ್ಗ-ತೆಳ್ಳಾರು ಎಂಬ ಊರಿಗ ಹೆಸರು ಕಂಬಳ ಕ್ಷೇತ್ರದಲ್ಲಿ ಜನರ ಮನ ಗೆಲ್ಲಲು‌ ಕಾರಣವಾಗಿತ್ತು.

ಈ ಜನಪ್ರಿಯ ಕೋಣವನ್ನು ಅತ್ಯಂತ ಗೌರವಾನ್ವಿತ ರೀತಿಯಲ್ಲಿ ಬಿಳ್ಕೊಡಲಾಯಿತು ಈ ಮೂಕ ಪ್ರಾಣಿಗೆ ಸಾವಿರಾರು ಅಭಿಮಾನಿಗಳಿದ್ದು, ಅಂತಿಮ ದರ್ಶನ ಕೈಗೊಳ್ಳಲು ಜನಸಾಗರವೇ ಹರಿದುಬಂತು. ತೆಳ್ಳಾರು ಮೋಡೆಯನ್ನು ಕೊನೆಯದಾಗಿ ನೋಡಲು ನೂರಾರು ಕಂಬಳ ಅಭಿಮಾನಿಗಳು ತೆಳ್ಳಾರು ನೇರೋಳ್ಳ ಪಲ್ಕೆ ಬರ್ಕೆ ಮನೆಗೆ ಆಗಮಿಸಿದ್ದರು.

ಕೋಣ ಮತ್ತು ಮಾಲಕನದ್ದು ಊಹಿಸಲಾಗದ ಸಂಬಂಧ: ಕಂಬಳದ ವೇಳೆ ಕೋಣಗಳನ್ನು ಹಿಂಸಿಸಲಾಗುತ್ತದೆ ಎಂಬ ಕಾರಣಕ್ಕೆ ವಿವಾದ ಉಂಟಾಗಿದ್ದನ್ನು ನಾವು ನೋಡಿದ್ದೇವೆ. ಅನೇಕ ಸಂದರ್ಭಗಳಲ್ಲಿ ಓಡುವ ಕೋಣಗಳಿಗೆ ಏಟು ಬಿಗಿಯುವುದು ಸತ್ಯವೇ ಆಗಿದೆ. ಆದರೆ ಕಂಬಳದ ಕಣದಲ್ಲಿ ಕಾಣುವ ಈ ಹಿಂಸಾತ್ಮಕ ಚಟುವಟಿಕೆಗೆ ಸದ್ಯ ಬಹುತೇಕ ಕಡಿವಾಣ ಬಿದ್ದಿದೆ. ಕೋಣಗಳು ಮತ್ತು ಮಾಲೀಕರ ನಡುವಿನ ಪ್ರೀತಿಯ ನಾನಾ ಮುಖಗಳು ಈ ವಿವಾದದ ನಂತರ ಬೆಳಕಿಗೆ ಬಂದಿದೆ.

ಕಂಬಳ ವಿವಾದ: ಸಿನಿಮಾದಲ್ಲಿ ನಟಿಸಲು ಒಪ್ಪದ ಕಾರಣಕ್ಕೆ ಸುಳ್ಳು ಆರೋಪ: ಶ್ರೀನಿವಾಸ ಗೌಡ ಸ್ಪಷ್ಟನೆ

ಲಕ್ಷ ಲಕ್ಷ ಕೊಟ್ಟು ಪ್ರತಿಷ್ಠೆಯಾಗಿ ಕೋಣಗಳನ್ನು ಸಾಕಲಾಗುತ್ತದೆ. ಪೌಷ್ಟಿಕ ಆಹಾರ, ಈಜಾಡಲು ಸ್ವಿಮ್ಮಿಂಗ್ ಪೂಲ್, ಲಾಲನೆ ಪಾಲನೆ ಮಾಡಲು ನಾಲ್ಕಾರು ಸಿಬ್ಬಂದಿ ಹೀಗೆ ಕಂಬಳದ ಕೋಣಗಳನ್ನು ಐಷಾರಾಮಿ ವ್ಯವಸ್ಥೆಯಲ್ಲಿ ಬೆಳೆಸಲಾಗುತ್ತದೆ. ಮಾಲೀಕನ ಪ್ರೀತಿಯಲ್ಲಿ ಬೆಳೆದ ಕೋಣಗಳಿಗೆ ಆತನ ಜೊತೆ ಅವಿನಾಭಾವ ಸಂಬಂಧವು ಇರುತ್ತದೆ. ಕಂಬಳ ನಡೆದಾಗ ಮಾಲಕನ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಕೋಣಗಳು ಓಡುತ್ತವೆ.‌ ಚಿನ್ನ ಗೆದ್ದು ಬೀಗುತ್ತವೆ. ಕಂಬಳದ ಕೋಣಗಳೆಂದರೆ ಕೇವಲ ಪ್ರಾಣಿಯಲ್ಲ ಅವು ಮಾಲಕನ  ಕಣ್ಮಣಿಗಳಾಗಿರುತ್ತವೆ.

Follow Us:
Download App:
  • android
  • ios