ತೇಗಂಪೂರ್ ಕೆರೆಗೆ ವಿಷಪೂರಿತ ನೀರು: ಖಂಡ್ರೆ ಭೇಟಿ
- ತೇಗಂಪೂರ್ ಕೆರೆಗೆ ವಿಷಪೂರಿತ ನೀರು.
- ಕಳೆದ ಹದಿನೈದು ದಿನಗಳಿಂದ ಕೆರೆಗೆ ಹರಿಯುತಿತರುವ ಕಲುಷಿತ ನೀರು; ಗ್ರಾಮಸ್ಥರಿಗೆ ಚರ್ಮರೋಗ ಭೀತಿ
- ಸ್ಥಳಕ್ಕೆ ಈಶ್ವರ್ ಖಂಡ್ರೆ ಭೇಟಿ
-ಭಾಲ್ಕಿ (ಆ.12) : ತಾಲೂಕಿನ ತೇಗಂಪೂರ್ ಗ್ರಾಮದ ಕೆರೆಗೆ ವಿಷಪೂರಿತ ನೀರು ಹರಿದು ಬರುತ್ತಿರುವ ಹಿನ್ನೆಲೆ ಶಾಸಕ ಈಶ್ವರ ಖಂಡ್ರೆ(Eshwar Khandre ) ಭೇಟಿ ನೀಡಿ ಪರಿಶೀಲಿಸಿದರು ಗ್ರಾಮದ ಮಹಾದೇವ ಮಂದಿರ ಹಿಂಭಾಗ ಇರುವ ಕೆರೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕೆರೆಯ ನೀರು ಮಾಲಿನ್ಯ ಆಗಿರುವುದನ್ನು ವೀಕ್ಷಿಸಿದರು. ಗ್ರಾಮದ ಪ್ರಮುಖರಾದ ಶಿವಕುಮಾರ ಪಾಟೀಲ್, ಮಲ್ಲಿಕಾರ್ಜುನ ಪ್ರಭಾ, ಸಂತೋಷ ಪಾಟೀಲ್ ಸೇರಿದಂತೆ ಇನ್ನಿತರರು ಗ್ರಾಮದ ಜನರಿಗೆ ಬಳಕೆ ಹಾಗೂ ಕುಡಿಯುವ ನೀರಿಗೆ ಆಧಾರವಾಗಿದ್ದ ಕೆರೆಯ ಮಧ್ಯದಲ್ಲಿನ ಏಕೈಕ ತೆರೆದ ಬಾವಿ ಹಾಗೂ ಕೆರೆಗೆ ಕಳೆದ ಹದಿನೈದು ದಿನಗಳಿಂದ ಕಲುಷಿತ ನೀರು ಸೇರುತ್ತಿದೆ. ಈ ನೀರು ಬಳಕೆಯಿಂದ ಗ್ರಾಮದ ಜನರಿಗೆ ಚರ್ಮ ರೋಗದ ಭೀತಿ ಎದುರಾಗಿದೆ. ಕುಡಿವ ನೀರಿಗೂ ಪರದಾಡುವಂತಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.
ಬಳ್ಳಾರಿ: ಕಲುಷಿತ ನೀರು ಕುಡಿದು 10 ವರ್ಷದ ಬಾಲಕಿ ಸಾವು
ಸಮಸ್ಯೆ ಆಲಿಸಿದ ಶಾಸಕರು, ಕಲುಷಿತ ನೀರು ಸೇವನೆಯಿಂದ ಜನರು ವಿವಿಧ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ. ಗ್ರಾಮದ ಜನರಿಗೆ ಶುದ್ಧ ನೀರು ಪೂರೈಕೆಗೆ ತಕ್ಷಣವೇ ಕೊಳವೆ ಬಾವಿ ಕೊರೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಜಿಲ್ಲಾಧಿಕಾರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕರು, ತಾಲೂಕಿನ ತೇಗಂಪೂರ್, ಕೋನಮೇಳಕುಂದಾ, ಸಿದ್ಧೇಶ್ವರ, ಕುರುಬಖೇಳಗಿ, ಚಿಕಲ ಚಂದಾ, ಸೇರಿ ಮುಂತಾದ ಕಡೆಗಳಲ್ಲಿ ಹಳ್ಳಕೊಳ್ಳ, ಚೆಕ್ ಡ್ಯಾಮ್, ಕೆರೆಗಳಿಗೆ ಹಲವು ದಿನಗಳಿಂದ ವಿಷಪೂರಿತ ನೀರು ಹರಿಯುತ್ತಿದೆ. ಇದರಿಂದ ವಿವಿಧೆಡೆ ಸಣ್ಣ ಮಕ್ಕಳು, ಹಿರಿಯರಿಗೆ ಚರ್ಮ ರೋಗ ಸೇರಿ ವಿವಿಧ ರೋಗದ ಭೀತಿ ಎದುರಾಗಿದೆ. ಪ್ರಾಣಿ, ಪಕ್ಷಿಗಳಿಗೂ ಜೀವಹಾನಿ ಆಗುವ ಆತಂಕ ಇದೆ. ಆದರೆ, ಇದುವರೆಗೂ ಯಾವೊಬ್ಬ ಅಧಿಕಾರಿಗಳು ವಿಷಪೂರಿತ ತಡೆಗೆ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಕೂಡಲೇ ತಾವು ಭೇಟಿ ನೀಡಿ ಪರಿಶೀಲಿಸಿ ಸಂಬಂಧಿತರಿಗೆ ಕೆರೆ ನೀರಿಗೆ ವಿಷಪೂರಿತ ಬಿಡದಂತೆ ನೋಟಿಸ್ ನೀಡಿ ಎಚ್ಚರಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಲಬರ್ಗಾ ಗ್ರಾಪಂ ಪಿಡಿಓ ಗೈರಾಗಿದ್ದಕ್ಕೆ ಶಾಸಕರು ತರಾಟೆಗೆ ತೆಗೆದುಕೊಂಡರು.
Raichur; ಕಲುಷಿತ ನೀರು ಸೇವಿಸಿ ಮಹಿಳೆ ಸಾವು, 50ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು
ಈ ಸಂದರ್ಭದಲ್ಲಿ ತಹಸೀಲ್ದಾರ್ ಕೀರ್ತಿ ಚಾಲಕ್, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಾಣಿಕ ರಾವ್, ಪ್ರಮುಖರಾದ ಶಶಿಧರ ಕೋಸಂಬೆ, ಅಶೋಕ ಸೋನಜಿ, ರಮೇಶ ಪ್ರಭಾ, ಧನರಾಜ ಪಾಟೀಲ್, ರವೀಂದ್ರ ಚಿಡಗುಪ್ಪೆ, ಗ್ರಾಪಂ ಅಧ್ಯಕ್ಷ ರಜನಿಕಾ ಪಾಟೀಲ್, ಸದಸ್ಯ ರಮೇಶ ಬೆಲ್ದಾರ್, ರೇವಣ್ಣ ಪಾಟೀಲ್, ಗೋಪಾಲ ರಾವ್ ಬಿರಾದಾರ್, ಕಲಾವತಿ ಮೆಟಾರೆ ಸೇರಿದಂತೆ ಹಲವರು ಇದ್ದರು.