Raichur; ಕಲುಷಿತ ನೀರು ಸೇವಿಸಿ ಮಹಿಳೆ ಸಾವು, 50ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

  • ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಅವಾಂತರಕ್ಕೆ ಕೊನೆಯೇ ಇಲ್ವಾ?
  • ಈ ಹಿಂದೆ ಕಲುಷಿತ ನೀರು ಸೇವಿಸಿ ರಾಯಚೂರು ‌ನಗರದಲ್ಲಿ 7 ಜನ ಸಾವನ್ನಪ್ಪಿದರು
  • ಇನ್ನೂ ಎಚ್ಚೆತ್ತುಕೊಳ್ಳದ ರಾಯಚೂರು ಜಿಲ್ಲಾಡಳಿತ
  • ವಲ್ಕಂದಿನ್ನಿಯ ಸರ್ಕಾರಿ ಶಾಲೆಯ ಹತ್ತಕ್ಕೂ ಹೆಚ್ಚು ಮಕ್ಕಳಿಗೆ ನಿರ್ಜಲೀಕರಣ
  • ತುಂಗಭದ್ರಾ ಡ್ಯಾಂನಿಂದ ಕಾಲುವೆ ಬಿಟ್ಟ ನೀರು ಸೇವಿಸಿ ವಾಂತಿ-ಬೇಧಿ
one dead 50 hospitalized after consuming contaminated water in raichur gow

ವರದಿ: ಜಗನ್ನಾಥ ‌ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಜು.4): ರಾಯಚೂರು ನಗರಸಭೆ ಸರಭರಾಜು ಮಾಡಿದ ನೀರು ಸೇವಿಸಿ 7 ಜನರು ಸಾವನ್ನಪ್ಪಿ ಒಂದು ತಿಂಗಳು ಕಳೆದಿಲ್ಲ. ಅಷ್ಟರಲ್ಲಿಯೇ ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಎರಡು ಗ್ರಾಮದ ಜನರು ಆಸ್ಪತ್ರೆಗಳಿಗೆ ದಾಖಲಾಗಿದ್ರೆ, ಒಬ್ಬ ಮಹಿಳೆಯೇ ಲೋ ಬಿಪಿಯಾಗಿ ಪ್ರಾಣವೇ ಬಿಟ್ಟಿದ್ದಾಳೆ. 50ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿ ನರಳಾಟ ನಡೆಸಿದ್ದಾರೆ.

50ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಿಗೆ ದಾಖಲು!
ರಾಯಚೂರು ನಗರದಲ್ಲಿ ಕಲುಷಿತನೀರು ಸೇವಿಸಿ ಏಳು ಜನರು ಸಾವನ್ನಪಿ, ಮಕ್ಕಳು ಸೇರಿ ಇನ್ನೂರಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗಳಿಗೆ ಮರಳಿದ್ದಾರೆ. ಇದು ರಾಯಚೂರು ನಗರದ ಕಥೆಯಾದ್ರೆ, ರಾಯಚೂರು ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಈಗ ಕಲುಷಿತ ನೀರಿನ ಸಮಸ್ಯೆ ಬುಗಿಲೆದ್ದಿದೆ.

ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ವಲ್ಕಂದಿನ್ನಿ ಹಾಗೂ ಜೂಕೂರು ಗ್ರಾಮದಲ್ಲಿ ನಲ್ಲಿಯಲ್ಲಿ ಸರಭರಾಜು ಆಗಿರುವ ನೀರು ಸೇವಿಸಿ ಒಬ್ಬ ಮಹಿಳೆ ಪ್ರಾಣವೇ ಹಾರಿ ಹೋಗಿದೆ. ಕಲುಷಿತ ನೀರು ಕುಡಿದು ಇವೆರಡೂ ಗ್ರಾಮದ ಸುಮಾರು 50 ಕ್ಕೂ ಜನ ಆಸ್ಪತ್ರೆ ಸೇರಿದ್ದಾರೆ. ಅದರಲ್ಲಿ ಅನೇಕ ಶಾಲಾ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂಕೂರು ಗ್ರಾಮದ 26 ವರ್ಷದ ಲಕ್ಷ್ಮಿ ಎಂಬ ಮಹಿಳೆಗೆ ಬೆಳಗ್ಗೆ 5 ಗಂಟೆಯಿಂದ ವಾಂತಿ-ಬೇಧಿಯಿಂದಾಗಿ ನರಳಾಟ ನಡೆಸಿದ್ದಳು. ಮಧ್ಯಾಹ್ನ 1-40ರ ಸುಮಾರಿಗೆ ಮಹಿಳೆ ಗ್ರಾಮದ ಬಳಿಯ ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾಳೆ. ಸ್ಥಳೀಯ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ತೆರಳಲು ತಿಳಿಸಿದ್ದಾರೆ. ಆಗ ಮಹಿಳೆಯ ಪತಿ ವೀರೇಶ್ ರಿಮ್ಸ್ ಆಸ್ಪತ್ರೆ ತಯಾರಿ ನಡೆಸಿದ ವೇಳೆಯೇ ಪತ್ನಿ ಲಕ್ಷ್ಮಿ ಸಾವನ್ನಪ್ಪಿದ್ದಾಳೆ.

ಬಗೆಹರಿಯದ ರಾಯಚೂರು ಕಲುಷಿತ ನೀರು ಸಮಸ್ಯೆ, ಮಹಿಳೆ ಸಾವು, 40 ಜನರು ಅಸ್ವಸ್ಥ

ಬೆಳಗ್ಗೆಯಿಂದ ವಾಂತಿ ಭೇದಿ ‌ಮಧ್ಯಾಹ್ನವೇ ಮಹಿಳೆ ಸಾವು
ಮಾನವಿ ತಾಲೂಕಿನ ವಲ್ಕಂದಿನ್ನಿ ಮತ್ತು ಜೂಕೂರು ಗ್ರಾಮದಲ್ಲಿ ಜೂನ್ 30ರಿಂದ ಕಲುಷಿತ ನೀರು ಸರಭರಾಜು ಆಗುತ್ತಿತ್ತು. ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ಕೇರ್ ಮಾಡಿಲ್ಲ. ಹೀಗಾಗಿ ಕಲುಷಿತ ‌ನೀರು ಸೇವನೆ ಮಾಡಿದ ಜೂಕೂರು ಗ್ರಾಮದ ‌ಲಕ್ಷ್ಮಿ ( 26) ಎಂಬ ಮಹಿಳೆಗೆ ಬೆಳಗ್ಗೆ ವಾಂತಿ ಭೇದಿ ಶುರುವಾಗಿದೆ. ಗಂಡ ವಿರೇಸ್ ಮಧ್ಯಾಹ್ನ ಹೆಂಡತಿ ಲಕ್ಷ್ಮಿ ಸ್ಥಳೀಯ ಮಟಾಮಾರಿ ಆಸ್ಪತ್ರೆಗೆ ‌ಮಧ್ಯಾಹ್ನ 1-40ರ ಸುಮಾರಿಗೆ ‌ಆಸ್ಪತ್ರೆಗೆ ದಾಖಲು ‌ಮಾಡಿದ್ದಾನೆ. ಸ್ಥಳೀಯ ವೈದ್ಯರು ‌ಚಿಕಿತ್ಸೆ‌ ನೀಡಿ..ಹೆಚ್ಚಿನ ‌ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ‌ಆಸ್ಪತ್ರೆ ಮಧ್ಯಾಹ್ನ ‌2-10ರ‌ ಸುಮಾರಿಗೆ ರೆಪರ್ ಮಾಡಿದ್ದಾರೆ. ಆಗ ರಿಮ್ಸ್ ಆಸ್ಪತ್ರೆಗೆ ‌ಸಾಗಿಸಲು ತಯಾರಿ ನಡೆಸಿದ ವೇಳೆಯೇ ಮಹಿಳೆ ಲಕ್ಷ್ಮಿ ‌ಪ್ರಾಣಬಿಟ್ಟಿದ್ದಾಳೆ ಎಂದು ಮೃತ‌ ಮಹಿಳೆಯ ಪತಿ ವಿರೇಶ್ ತಿಳಿಸಿದರು. 

ಪಿಡಿಒ ‌ಮತ್ತು ತಾ.ಪಂ.ಇಒ ವಿರುದ್ಧ ಗ್ರಾಮಸ್ಥರ ಆಕ್ರೋಶ
ಮಾನವಿ ತಾಲೂಕಿನ ‌ವೆಲ್ಕಂದಿನ್ನಿ ಹಾಗೂ ಜೂಕೂರು ಗ್ರಾಮಕ್ಕೆ ನಿತ್ಯ ತುಂಗಭದ್ರಾ ನದಿಯ ‌ನೀರು‌ ಸರಭರಾಜು ‌ಆಗುತ್ತೆ. ಜನರು ಸಹ ತುಂಗಭದ್ರಾ ನದಿನೀರೆ ಕುಡಿಯೋದು.ತುಂಗಭದ್ರಾ ನದಿ ನೀರು ಕಾಲುವೆಗೆ ಹರಿಬಿಡಲಾಗಿದೆ.ಕಾಲುವೆ ಮೂಲಕ ಈ ಗ್ರಾಮದ ಮನೆ-ಮನೆಗೆ ನೀರು ಸರಬರಾಜು ಮಾಡಿದ್ದಾರೆ..ಆದ್ರೆ ಕಾಲುವೆ ಸ್ಥಿತಿ ಅತೀ ಕೆಟ್ಟದಾಗಿದ್ದು, ಆ ಕಲುಷಿತ ನೀರಿನಿಂದಲ್ಲೇ ಗ್ರಾಮಗಳಲ್ಲಿ ವಾಂತಿ-ಬೇಧಿ ಶುರುವಾಗಿದೆ.ಈ ಬಗ್ಗೆ ಅಧಿಕಾರಿಗಳ‌ ಗಮನಕ್ಕೆ ತಂದರೂ ಗ್ರಾಮ ಪಂಚಾಯತ್ ಪಿಡಿಒ ಮತ್ತು ಮಾನವಿ ತಾಲೂಕಾ ಪಂಚಾಯತ್ ಇಒಗಳ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು.

Raichuru; ಗ್ರಾಮ ಪಂಚಾಯತ್‌ಗೆ ಬರದ ಪಿಡಿಒ ವಿರುದ್ಧ ಸದಸ್ಯರ ಪ್ರತಿಭಟನೆ

ಗ್ರಾಮದ ಸಮುದಾಯ ‌ಭವನದಲ್ಲಿಯೇ ಜನರಿಗೆ  ಚಿಕಿತ್ಸೆಗೆ ವ್ಯವಸ್ಥೆ
ಕಲುಷಿತ ‌ನೀರು ಸೇವಿಸಿ ವೆಲ್ಕಂದಿನ್ನಿ ಮತ್ತು  ಜೂಕೂರು ‌ಗ್ರಾಮದ ಜನರು ಅಸ್ವಸ್ಥಗೊಂಡು ರಾಯಚೂರು ‌ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ನರಳಾಟ ‌ನಡೆಸಿದ್ರು. ಪ್ರಕರಣವನ್ನು ಗಂಭೀರವಾಗಿ ‌ಪರಿಗಣಿಸಿದ ಅರೋಗ್ಯ ‌ಇಲಾಖೆ ಗ್ರಾಮದ ಮನೆ- ಮನೆಗಳಿಗೆ ಭೇಟಿ ‌ನೀಡಿ ನಲ್ಲಿಯಲ್ಲಿ ಸರಭರಾಜು ಆಗುವ ನೀರನ್ನು ಸೋಸಿ ಮತ್ತು ಕಾಯಿಸಿ ಕುಡಿಯುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ವಲ್ಕಂದಿನ್ನಿ ‌ಗ್ರಾಮದ ಸಮುದಾಯ ಭವನದಲ್ಲಿ ವೈದ್ಯರು ತಂಡವು ಜನರಿಗೆ ಚಿಕಿತ್ಸೆ ‌ನೀಡಲು ಮುಂದಾಗಿದೆ.

ಎರಡು ಗ್ರಾಮಗಳಿಗೆ ರಾಯಚೂರು ಡಿಎಚ್ ಒ ಮತ್ತು ಅಧಿಕಾರಿಗಳು ಭೇಟಿ
ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವಿನಿಂದ ಎಚ್ಚತ್ತುಕೊಂಡ ಅಧಿಕಾರಿಗಳು ‌ಹಾಗೂ ರಾಯಚೂರು ಡಿಎಚ್ ಒ ಡಾ.ಸುರೇಂದ್ರ ಬಾಬು ವಲ್ಕಂದಿನ್ನಿ ಮತ್ತು ಜೂಕೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ರು. ಜೊತೆಗೆ ಗ್ರಾಮದಲ್ಲಿ ಮೊಬೈಲ್ ಆಸ್ಪತ್ರೆ ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆಯೂ ಸಹ ಮಾಡಿದ್ದು ಕಲುಷಿತ ನೀರಿನಿಂದಲ್ಲೇ ವಾಂತಿ ಬೇಂಧಿ ಆಗಿರಬಹುದು. ಮಹಿಳೆ ಸಾವಿನ ಬಗ್ಗೆಯೂ ತನಿಖೆ   ಏಷ್ಯಾನೆಟ್ ಸುವರ್ಣನ್ಯೂಸ್ ಗೆ ತಿಳಿಸಿದರು. ಇನ್ನೂ ಇದೇ ವೇಳೆ ಮಾನವಿ ತಾಲೂಕಾ ಪಂಚಾಯತ್ ಇಒ ಅಣರಾವ್ ನಾಯಕ, ಡಾ.ಗಣೇಶ ಸೇರಿದಂತೆ ಹತ್ತಾರು ಅಧಿಕಾರಿಗಳು ‌ಇದ್ರು.

ಒಟ್ಟಿನಲ್ಲಿ ಗ್ರಾಮ ಪಂಚಾಯತ್ ಸರಭರಾಜು ಮಾಡಿದ ಕಲಷಿತ ನೀರು ಸೇವಿಸಿದ ಎರಡು ಗ್ರಾಮಗಳ ಜನರು ಈಗ ವಾಂತಿ-ಬೇಂಧಿಯಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇಷ್ಟು ಆಗಿದ್ರೂ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜನಪ್ರತಿನಿಧಿಗಳು ಯಾರು ಜುಕೂರು ಹಾಗೂ ವಲ್ಕಂದಿನ್ನಿ ಗ್ರಾಮಕ್ಕೆ ಭೇಟಿ ನೀಡೋ ಸೌಜನ್ಯ ತೋರಿಸಿಲ್ಲ.ಹೀಗಾಗಿ ಜನ ಅಧಿಕಾರಿಗಳು ಹಾಗೂ ಶಾಸಕರ ನಡೆ ವಿರುದ್ಧ  ಆಕ್ರೋಶ ವ್ಯಕ್ತಪಡಿಸುತ್ತಾರೆ.

Latest Videos
Follow Us:
Download App:
  • android
  • ios