Asianet Suvarna News Asianet Suvarna News

ಬಾಟಲ್‌ ಹಿಡಿದು ನೃತ್ಯ ಮಾಡಿದ ಶಿಕ್ಷಕಿಯರು!

ಬಾಟಲ್ ಹಿಡಿದು ನೃತ್ಯ ಮಾಡಿದ ಶಿಕ್ಷಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ. 

Teacher Dance With bottle Notice Issued
Author
Bengaluru, First Published Jan 15, 2020, 8:08 AM IST
  • Facebook
  • Twitter
  • Whatsapp

ಬೆಂಗಳೂರು [ಜ.15]:  ನಗರದ ಸುಂಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು ಬಾಟಲ್‌ಗಳನ್ನು ಹಿಡಿದು ನೃತ್ಯ ಮಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಈ ಬಗ್ಗೆ ಲಿಖಿತ ಸಮಜಾಯಿಸಿ ನೀಡುವಂತೆ ಮುಖ್ಯ ಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಈ ಕುರಿತು ಬೆಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ಶಿಕ್ಷಕ ವೃತ್ತಿಗೆ ತರವಲ್ಲದ ರೀತಿಯಲ್ಲಿ ನೃತ್ಯ ಮಾಡಿರುವ ವಿಡಿಯೋ ಹರಿದಾಡುತ್ತಿದೆ. ವಿಡಿಯೋದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ರಾಜಾಂಜನೇಯ ರಸ್ತೆ ಸುಂಕೇನಹಳ್ಳಿ ಎಂದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಮಕ್ಕಳ ಶೈಕ್ಷಣಿಕ, ಮಾನಸಿಕ ಮತ್ತು ಬೌದ್ಧಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆ.

ಪಕ್ಕೆಲುಬು’ ವಿಡಿಯೋ ಎಫೆಕ್ಟ್: ಶಿಕ್ಷಕರ ಮೊಬೈಲ್‌ ಬಳಕೆಗೆ ನಿಷೇಧ!...

ಸಮಾಜದಲ್ಲಿ ಜವಾಬ್ದಾರಿಯುತ ಮತ್ತು ಗೌರವಾನ್ವಿತ ಹುದ್ದೆಯನ್ನು ಹೊಂದಿರುವ ಶಿಕ್ಷಕರು ಈ ರೀತಿಯಲ್ಲಿ ವರ್ತಿಸಿರುವುದು ನಿಯಮಬಾಹಿರವಾಗಿದೆ. 

‘ಪಕ್ಕೆಲುಬು’ ಶಿಕ್ಷಕ ಕೊನೆಗೂ ಪತ್ತೆ; ಸೇವೆಯಿಂದ ಅಮಾನತು!.

ಅಲ್ಲದೆ, ಇಂತಹ ಕಾರ್ಯಕ್ರಮಗಳಿಗೆ ಮುಖ್ಯಶಿಕ್ಷಕರು ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಮೇಲ್ನೋಟಕ್ಕೆ ಕರ್ತವ್ಯಲೋಪ ಎಂದು ತಿಳಿದು ಬಂದಿದೆ. ತಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸುವ ಕುರಿತು ಮೇಲಧಿಕಾರಿಗಾಳಿಗೆ ಶಿಫಾರಸು ಮಾಡಬೇಕಿದೆ. ಕೂಡಲೇ ಲಿಖಿತ ಸಮಜಾಯಿಸಿ ನೀಡುವಂತೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

Follow Us:
Download App:
  • android
  • ios