ಮೈಸೂರು (ಆ. 23): ಆದಾಯ ತೆರಿಗೆ ಇಲಾಖೆಯಲ್ಲಿ ತೆರಿಗೆದಾರರೊಂದಿಗೆ ಪಾವತಿ ಬಾಕಿ ಬಗೆಗಿನ ವಿಚಾರಣೆ ಮತ್ತು ಮಾಹಿತಿ ವಿನಿಮಯವನ್ನು ವಿಜಯದಶಮಿಯಿಂದ ಡಿಜಿಟಲೀಕರಣಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಮೈಸೂರಿನಲ್ಲಿ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೇಲೆ ಉಂಟಾಗುತ್ತಿದ್ದ ಒತ್ತಡ ಮತ್ತು ತೆರಿಗೆದಾರರಿಗೆ ಉಂಟಾಗುತ್ತಿದ್ದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ರೀತಿಯ ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ.  ಎಸ್‌ಎಂಎಸ್‌, ವಾಟ್ಸ್‌ಆಪ್‌, ಇ ಮೇಲ್‌ ಅಥವಾ ಬೇರಾವುದೇ ತಂತ್ರಾಂಶವನ್ನು ಬಳಸಿಕೊಳ್ಳಬೇಕು. ತೆರಿಗೆದಾರರು ಮುಖಾಮುಖಿ ಆಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಮೈಸೂರು: ನೆರೆ ಸಂತ್ರಸ್ತರಿಗೆ ನೆರವಾದ ಶಾಸಕ

ದೇಶದಲ್ಲಿ ಗುಜರಾತ್‌ನ ಅಹಮದಾಬಾದ್‌, ಉತ್ತರ ಪ್ರದೇಶದ ವಾರಣಾಸಿ ಮತ್ತು ಕರ್ನಾಟಕದಲ್ಲಿ ಮೈಸೂರಿನಲ್ಲಿ ನಿರಂತರವಾಗಿ ಮೂರು ಸಭೆ ನಡೆಸಿದ್ದೇನೆ. ಈ ಸರಣಿ ಸಭೆಯ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ತೆರಿಗೆ ಪಾವತಿ, ಜಿಎಸ್‌ಟಿ ಮುಂತಾದ ವಿಷಯಗಳಲ್ಲಿ ನಾವು ಯಾರನ್ನೂ ಗುರಿಯಾಗಿಸಿಕೊಂಡು, ನಿರ್ಧಿಷ್ಟವ್ಯಕ್ತಿಗಳ ಬಗ್ಗೆ ವಿಚಾರಣೆ ನಡೆಸುವುದಿಲ್ಲ. ಬದಲಿಗೆ ರಾರ‍ಯಂಡಮ್‌ ಆಗಿ ವಿಚಾರಣೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಒಂದೂ ಕಾಲು ರು. ಹರಕೆ ಹೊತ್ತ ಯದುವೀರ್ ಒಡೆಯರ್

ಉದ್ಯಮಿ ಸಿದ್ದಾರ್ಥ ಸಾವಿನ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಧೆ ಅಧಿಕಾರಿಗಳ ಒತ್ತಡ ಇತ್ತು ಎಂಬ ಆರೋಪದ ಕುರಿತು ಸಂಸತ್ತಿನಲ್ಲಿಯೇ ಸ್ಪಷ್ಟನೆ ನೀಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಎಸ್‌ಟಿ ಆಯುಕ್ತರು ಮತ್ತಿತರ ಅಧಿಕಾರಿಗಳು ಇದ್ದರು.