ಮಂಡ್ಯ [ಆ.17]: ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹ ಪರಿಸ್ಥಿತಿ ಜನಜೀವನವನ್ನು ತತ್ತರಿಸುವಂತೆ ಮಾಡಿದೆ. 

ಸಂತ್ರಸ್ತರ ಜೀವನ ಸುಧಾರಿಸಲು ಎಂದು ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಒಂದೂ ಕಾಲು ರು. ಹರಕೆ ಹೊತ್ತಿದ್ದಾರೆ. 

ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಹೊರವಲಯದಲ್ಲಿರುವ ಪ್ರಸಿದ್ಧ ಹೊಳೆ ಆಂಜನೇಯ ದೇಗುಲದಲ್ಲಿ, ರಾಜ್ಯದಲ್ಲಿ ನೆರೆಯಿಂದ ಉಂಟಾದ ಸ್ಥಿತಿ ಸುಧಾರಿಸಿ ಜನರಲ್ಲಿ ನೆಮ್ಮದಿ ಮೂಡಲಿ ಎಂದು ಹರಕೆ ಹೊತ್ತಿದ್ದಾರೆ.  

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಂದೂ ಕಾಲು ರು. ಹರಕೆಗೆ ಪ್ರಸಿದ್ಧವಾದ ಹೊಳೆ ಆಂಜನೇಯನಲ್ಲಿ ರಾಜವಂಶಸ್ಥ ಒಡೆಯರ್ ಪ್ರಾರ್ಥನೆ ಮಾಡಿದ್ದಾರೆ. 

ಇನ್ನು ಈ ಬಾರಿ KRS ಅಣೆಕಟ್ಟೆ ಬೇಗ ತುಂಬಿದೆ. ಅಣೆಕಟ್ಟೆ ಭರ್ತಿಯಾಗಿರುವುದು ಸಂತಸ ತಂದಿದೆ. ಇದರಿಂದ ಮೈಸೂರು ಹಾಗೂ ಮಂಡ್ಯ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಇನ್ನು ಇದೇ ವೇಳೆ ಕಾವೇರಿ ನದಿಗೆ ಪೂಜೆ ಸಲ್ಲಿಸಿದ್ದಾಗಿ ಹೇಳಿದರು.