ಖ್ಯಾತ ಟ್ಯಾಟೂ ಆರ್ಟಿಸ್ಟ್ ಘೋಸ್ಟ್ ಅರ್ಜುನ್ ಮೇಲೆ ಸಂಪ್ರೀತಾ ಎಂಬ ಮಹಿಳೆ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಲ್ಲದೆ, ಬೇರೊಬ್ಬನೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಈ ಹಲ್ಲೆ ನಡೆದಿದೆ. ಗಾಯಗೊಂಡಿರುವ ಅರ್ಜುನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರು: ಖ್ಯಾತ ಟ್ಯಾಟೂ ಆರ್ಟಿಸ್ಟ್ ಘೋಸ್ಟ್ ಅರ್ಜುನ್ ಮೇಲೆ ಮಹಿಳೆಯೊಬ್ಬರು ರಾಡ್‌ನಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಅರ್ಜುನ್ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಅರ್ಜನ್ ಬೆಂಗಳೂರಿನ ಮುದ್ದಯ್ಯನಪಾಳ್ಯದಲ್ಲಿ ಹಲವು ವರ್ಷಗಳಿಂದ ಟ್ಯಾಟೂ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದು, ಈಗಾಗಲೇ ಮದುವೆಯಾಗಿ ಪತ್ನಿಯಿಂದ ದೂರವಾಗಿದ್ದಾರೆ. ಈ ಸಂದರ್ಭದಲ್ಲಿ ಟ್ಯಾಟೂ ಆಫೀಸ್‌ಗೆ ಬಂದಿದ್ದ ಮಹಿಳೆಯೊಂದಿಗೆ ಅರ್ಜುನ್‌ಗೆ ಪರಿಚಯವಾಗಿದ್ದು, ಇಬ್ಬರು ಮದುವೆಯಾಗಲು ನಿರ್ಧಾರ ಮಾಡಿದ್ದರಂತೆ.

ದೂರಿನಲ್ಲಿ ಏನಿದೆ?

ಅರ್ಜುನ್ ಟ್ಯಾಟೂ ಆರ್ಟಿಸ್ಟ್ ಅಲ್ಲದೇ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈತನಿಗೆ ಸಂಪ್ರೀತಾ ಎಂಬ ಮಹಿಳೆಯ ಪರಿಚಯ ಆಗಿದ್ದು, ಇಬ್ಬರು ಪರಿಚಯ ಸ್ನೇಹದ ಬಳಿಕ ಮದುವೆಯಾಗಲು ನಿರ್ಧಾರ ಮಾಡಿದ್ದರಂತೆ. ಆದರೆ ಮದುವೆಯಾಗುವುದಾಗಿ ಸ್ನೇಹ ಸಂಪಾದನೆ ಮಾಡಿದ್ದ ಆಕೆ ನನ್ನಿಂದ ಹಣ ಪಡೆದುಕೊಂಡು ವಂಚನೆ ಮಾಡಿದ್ದಾರೆ. ಮದುವೆ ಆಗೋಣಾ ಅಂತ ಇಂದು ನಾಳೆ ಮುಂದೂಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಮದುವೆ ಮುಂದೂಡಲಾಗುತ್ತಿದೆ ಎಂದು ಅರ್ಜುನ್ ತಿಳಿಸಿದ್ದಾರೆ.

ನಡೆದಿದ್ದೇನು?

ಸೆಪ್ಟೆಂಬರ್ 02 ರಂದು ಅರ್ಜುನ್ ಮೇಲೆ ಮಹಿಳೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಮಹಿಲೆ ಕಾಲ್ ರಿಸೀವ್ ಮಾಡಿದ ಹಿನ್ನೆಲೆಯಲ್ಲಿ ಅರ್ಜುನ್ ಮನೆಯ ಹೋಗಿದ್ದ ವೇಳೆ ಆಕೆ ಬೇರೆ ವ್ಯಕ್ತಿಯೊಂದಿಗೆ ಫೋನ್ ಅಶ್ಲೀಲವಾಗಿ ಮಾಡುತ್ತಿದ್ದಳಂತೆ. ಇದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಆಕೆ ಅರ್ಜನ್ ಮೇಲೆ ರಾಡ್‌ನಿಂದ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ.

ಇನ್ನು, ಅಲ್ಲಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ ಅರ್ಜುನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಪೊಲೀಸರಿಗೆ ದೂರು ನೀಡಿದ್ದು, ಆಕೆಯ ಕುಟುಂಬದವರಿಂದ ನನ್ನ ಜೀವಕ್ಕೆ ಅಪಾಯವಿದೆ. ಆದ್ದರಿಂದ ಕಾನೂನು ಕ್ರಮಕೈಗೊಳ್ಳಲು ಹಾಗೂ ರಕ್ಷಣೆ ನೀಡಲು ಅರ್ಜುನ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇನ್ನು, ಮಹಿಳೆಗೂ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಗಂಡನಿಂದ ದೂರವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅರ್ಜುನ್ ಅವರಿಗೆ ಮುಖದ ಮೇಲೆ 6 ಹೋಲಿಗೆ ಹಾಗೂ ತಲೆಯ ಮೇಲೆ 6 ಹೋಲಿಕೆ ಬಿದ್ದಿದ್ದು, ಚಿಕಿತ್ಸೆ ಪಡೆದುಕೊಂಡ ಬಳಿಕ ಚೇತರಿಕೆ ಕಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

YouTube video player