ಬೆಂಗಳೂರು, (ಮೇ.22): ಕೊರೋನಾ ಎರಡನೆ ಅಲೆಯ ನಿಯಂತ್ರಣದಲ್ಲಿ ಮುಂಚೂಣಿ ಯೋಧರಾಗಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಹಾಗೂ ಮಾಧ್ಯಮದವರಿಗೆ ನಗರದ ತರಳಬಾಳು ಕೇಂದ್ರ ಆಹಾರ ಒದಗಿಸುವ ಸೇವೆ ಮಾಡುತ್ತಿದೆ.

ಜನತೆಗೆ ಆಸರೆಯಾಗುವ ಮಾನವೀಯತೆಯ ಮಹಾಸಂಸ್ಥಾನ ಎಂದೇ ಸುಪ್ರಸಿದ್ಧಿಯಾಗಿರುವ ದಯೆ, ಕೃಪೆ, ಕರುಣೆಯ  ತ್ರಿವೇಣಿ  ಸಂಗಮದ ಧರ್ಮ ದಾಸೋಹಿ ಸರ್ವತ್ರ  ಪೂಜನೀಯ  ಸಿರಿಗೆರೆಯ  ಶ್ರೀ  ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೊರೂನಾ ನಿರ್ಮೂಲನಾ ಕಾರ್ಯದಲ್ಲಿ ತೊಡಗಿದ್ದಾರೆ. 

#ಬೆಂಗಳೂರುಫೈಟ್ಸ್‌ಕೊರೋನಾ ಅಭಿಯಾನಕ್ಕೆ ಚಾಲನೆ

ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆಯ  ಅಂಗಸಂಸ್ಥೆಯಾದ ಬೆಂಗಳೂರಿನ ತರಳಬಾಳುಕೇಂದ್ರದ  ಕಾರ್ಯಕಾರಿ ಸಮಿತಿಯ ವತಿಯಿಂದ ಶ್ರೀ ಜಗದ್ಗುರುಗಳವರ ಆಶೀರ್ವಾದ  ಮಾರ್ಗದರ್ಶನದಂತೆ ಬೆಂಗಳೂರು ನಗರದ. ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋರೋನಾ ವಾರಿಯರ್ಸ್ ಗಳು, ಪರಿಚಾರಕರು ಹಾಗು ಕೋವಿಡ್ ಸೋಂಕಿತರ ಸಂಬಂಧಿಗಳಿಗೆ ಅವಶ್ಯಕವಾಗಿರುವ ಆಹಾರದ ಪೂರೈಕೆಯನ್ನು ಉಚಿತವಾಗಿ ಸಮರ್ಪಣೆ ಮಾಡಲಾಗುತ್ತಿದೆ ಎಂದು ತರಳಬಾಳು ಕೇಂದ್ರದ ಕಾರ್ಯದರ್ಶಿ ಬಾತಿ ವಿಶ್ವನಾಥ್ ಹೇಳಿದರು.

ಮುಂಚೂಣಿ ಯೋಧರಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲಿಸರು ಹಾಗೂ ಪತ್ರಕರ್ತರಿಗೂ ಕೇಂದ್ರದ ವತಿಯಿಂದ ಶನಿವಾರ ಉಚಿತ ಆಹಾರ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಇತರೆ ಸರ್ಕಾರಿ ಆಸ್ಪತ್ರೆಗಳಿಗೆ ವಿಸ್ತರಿಸಲು ಯೋಚಿಸಲಾಗುತ್ತಿದೆ ಎಂದು ಎಂದರು.