#ಬೆಂಗಳೂರುಫೈಟ್ಸ್‌ಕೊರೋನಾ ಅಭಿಯಾನಕ್ಕೆ ಚಾಲನೆ

* ಬೆಂಗಳೂರುಫೈಟ್ಸ್‌ಕರೋನಾ ಅಭಿಯಾನದ ಮುಂದಿನ ಹಂತಕ್ಕೆ ಚಾಲನೆ
*ಸಂಸತ್‌ ಸದಸ್ಯ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನದ ಸ್ಥಾಪಕ ಟ್ರಸ್ಟಿ ರಾಜೀವ್‌ ಚಂದ್ರಶೇಖರ್‌ ಚಾಲನೆ

Bengaluru fights Corona campaign launched By BJP MP  rajeev chandrasekhar rbj

ಬೆಂಗಳೂರು, (ಮೇ.22): ಕೋವಿಡ್‌ 19 ಎರಡನೇ ಅಲೆಯಿಂದ ಬೆಂಗಳೂರಿನ ನಾಗರಿಕರನ್ನು ರಕ್ಷಿಸುವ ಪ್ರಯತ್ನಗಳ ಭಾಗವಾಗಿ ಸಂಸತ್‌ ಸದಸ್ಯ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನದ ಸ್ಥಾಪಕ ಟ್ರಸ್ಟಿ ರಾಜೀವ್‌ ಚಂದ್ರಶೇಖರ್‌ ಅವರು ಬಿಬಿಎಂಪಿ ಸಹಯೋಗದಲ್ಲಿ ಕೈಗೊಂಡ #ಬೆಂಗಳೂರುಫೈಟ್ಸ್‌ಕೊರೋನಾ ಅಭಿಯಾನದ ಮುಂದಿನ ಹಂತಕ್ಕೆ ಇಂದು (ಶನಿವಾರ) ಚಾಲನೆ ನೀಡಿದರು.

"

ಇದರ ಭಾಗವಾಗಿ ನಮ್ಮ ಬೆಂಗಳೂರು ಪ್ರತಿಷ್ಠಾನ ದೀನಬಂಧುನಗರದಲ್ಲಿರುವ ಬಡ ಮತ್ತು ಸೋಂಕಿಗೆ ಒಳಗಾಗಬಹುದಾದ ದುರ್ಬಲ ವರ್ಗದ ಜನರಿಗೆ ಆರೋಗ್ಯ ಮತ್ತು ರೋಗಪ್ರತಿರೋಧಕ ಶಕ್ತಿ ಹೆಚ್ಚಿಸುವ ಕಿಟ್‌ಗಳನ್ನು ವಿತರಿಸಿತು. ಬಿಬಿಎಂಪಿಯ ಮಾಜಿ ಮೇಯರ್‌ ಗೌತಮ್‌ ಕುಮಾರ್‌ ಮತ್ತು ಇಂದಿರಾನಗರ ಸರ್‌ ಸಿ.ವಿ. ರಾಮನ್‌ ಆಸ್ಪತ್ರೆಯ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ. ರಾಧಾಕೃಷ್ಣ ಅವರು ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

NBF ನಿಂದ ಫ್ರಂಟ್‌ ಲೈನ್ ವರ್ಕರ್ಸ್‌ಗೆ ಮೆಡಿಕಲ್ ಕಿಟ್

 ಕಿಟ್‌ ವಿತರಣೆ ಕಾರ್ಯಕ್ರಮಕ್ಕೆ ನಿವಾಸಿಗಳ ಕಲ್ಯಾಣ ಸಂಘಗಳು ಮತ್ತು ನಾಗರಿಕ ಹೋರಾಟಗಳ ಸಂಘಟನೆಗಳು ಕೈಜೋಡಿಸಿದ್ದವು. ಕಿಟ್‌ಗಳಲ್ಲಿ ಪ್ಯಾರಾಸಿಟಮಲ್‌ ಡೋಲೋ 500 ಎಂಜಿ, ಝಿಂಕ್‌ಯುಕ್ತ ವಿಟವಿನ್‌ ಸಿ IXIS ಝಿಂಕೋವಿಟ್‌, ಓಆರ್‌ಎಸ್‌, ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳಿದ್ದವು. ಪ್ರಸ್ತುತ ಕಾಡುತ್ತಿರುವ ಕೋವಿಡ್‌ ಸಾಂಕ್ರಾಮಿಕದಿಂದ ಜನರನ್ನು ರಕ್ಷಿಸಲು ಮತ್ತು ಅವರಲ್ಲಿರುವ ರೋಗಪ್ರತಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಕಿಟ್‌ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶಗಳನ್ನು ತಲುಪಿ ಒಂದು ಲಕ್ಷಕ್ಕೂ ಹೆಚ್ಚು ಕಿಟ್‌ಗಳನ್ನು ವಿತರಿಸುವ ಗುರಿಯನ್ನು ಪ್ರತಿಷ್ಠಾನ ಹೊಂದಿದೆ.

ಲಸಿಕೆಯ ಮಹತ್ವದ ಅರಿವು ಮೂಡಿಸಿ, ಲಸಿಕೆ ಪಡೆಯಲು ನೋಂದಣಿಯನ್ನು ಖಾತ್ರಿಪಡಿಸುವುದು, ಆಕ್ಸಿಮೀಟರ್‌ ಮತ್ತು ಆಕ್ಸಿಜನ್‌ ಕಾನ್ಸಟ್ರೇಟರ್‌ಗಳಂಥ ಆರೋಗ್ಯ ಉಪಕರಣಗಳನ್ನು ವಿತರಿಸುವುದು, ಲಸಿಕೆ ಶಿಬಿರಗಳನ್ನು ನಡೆಸುವುದು, ಈಗಿರುವ ಶಿಬಿರಗಳನ್ನು ಮುಂದುವರೆಸಿಕೊಂಡು ಹೋಗುವುದು ಇನ್ನಿತರ ಕಾರ್ಯಕ್ರಮಗಳು ಮುಂದುವರೆಯಲಿದೆ.

ಕೋವಿಡ್‌ ಬಿಕ್ಕಟ್ಟಿನ ಈ ಸಮಯದಲ್ಲಿ ಕೋವಿಡ್‌ ಸೋಂಕಿತರಿಗೆ ಆಕ್ಸಿಜನ್‌ ಕಾನ್ಸಟ್ರೇಟರ್‌ಗಳು ಅತ್ಯವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ 20ಕ್ಕೂ ಹೆಚ್ಚು ಆಕ್ಸಿಜನ್‌ ಕಾನ್ಸಟ್ರೇಟರ್‌ಗಳನ್ನು ದೇಣಿಗೆ ನೀಡಿದೆ. ಬೆಂಗಳೂರು ನಾಗರಿಕರ ರಕ್ಷಣೆಯನ್ನು ಖಾತ್ರಿಪಡಿಸುವ ಪ್ರಯತ್ನಗಳನ್ನು ಮುಂದುವರೆಸಿದೆ.

ನಮ್ಮ ಬೆಂಗಳೂರು ಪ್ರತಿಷ್ಠಾನದ ಕುರಿತು:
ನಮ್ಮ ಬೆಂಗಳೂರು ಪ್ರತಿಷ್ಠಾನ ಒಂದು ಸರ್ಕಾರೇತರ ಸೇವಾ ಸಂಸ್ಥೆಯಾಗಿದ್ದು ಬೆಂಗಳೂರು ಮತ್ತು ನಗರದ ನಾಗರಿಕರ ಹಾಗೂ ನೆರೆಹೊರೆಯ ಹಕ್ಕುಗಳನ್ನು ರಕ್ಷಿಸುವ ಗುರಿ ಹೊಂದಿದೆ. ಉತ್ತಮ ಬೆಂಗಳೂರಿನ ನಿರ್ಮಾಣಕ್ಕಾಗಿ ಸಮಾನಮನಸ್ಕರೊಂದಿಗೆ ಕೈಜೋಡಿಸುವ ಮತ್ತು ಹೋರಾಟ ಸಂಘಟಿಸುತ್ತಿದೆ. ನಗರದ ಉತ್ತಮ ಯೋಜನೆ ಮತ್ತು ಆಡಳಿತಕ್ಕಾಗಿ, ಭ್ರಷ್ಠಾಚಾರದ ವಿರುದ್ಧ ಹೋರಾಟಕ್ಕಾಗಿ ನಾಗರಿಕರಿಗೆ ಒಂದು ವೇದಿಕೆಯಾಗಿ ಪ್ರತಿಷ್ಠಾನ ಕೆಲಸ ಮಾಡುತ್ತಿದೆ. ಈ ಮೂಲಕ ಸಾರ್ವಜನಿಕರ ಹಣದ ಮತ್ತು ಸರ್ಕಾಗಿ ಸಂಪತ್ತಿಗೆ ಬದ್ಧತೆಯನ್ನು ಖಾತ್ರಿಪಡಿಸುತ್ತಿದೆ.
ಇನ್ನಷ್ಟು ಮಾಹಿತಿಗೆ:
ವಿನೋದ್‌ ಜೇಕಬ್‌
Email: vinod.jacob@namma-bengaluru.org
Mobile: +91 73497 37737

Latest Videos
Follow Us:
Download App:
  • android
  • ios