ಮೈಸೂರು(ಡಿ.17): ಶಾಸಕ ತನ್ವೀರ್ ಸೇಠ್‌ ಕೊಲೆ ಪ್ರಯತ್ನದಲ್ಲಿ ಆರೋಪಿ ಸ್ಥಳದಲ್ಲಿಯೇ ಸಿಕ್ಕರೂ ಪ್ರಕರಣ ಮಾತ್ರ ಇನ್ನೂ ಅಂತ್ಯ ಕಂಡಿಲ್ಲ. ಕರಣ ಮುಗಿಸಲು ಇನ್ನೂ ಒಂದು ತಿಂಗಳು ಬೇಕಾಗಲಿದೆ ಎಂದು ಪೊಲೀಸ್ ಕಮಿಷನರ ಕೆಟಿ.ಬಾಲಕೃಷ್ಣ ಹೇಳಿದ್ದಾರೆ.

ಶಾಸಕ ತನ್ವೀರ್‌ಸೇಠ್ ಕೊಲೆಯತ್ನ ಪ್ರಕರಣ ನಡೆದು ಒಂದು ತಿಂಗಳಾದರೂ, ಆರೋಪಿ ಸ್ಥಳದಲ್ಲಿಯೇ ಸಿಕ್ಕಿದರೂ ಪ್ರಕರಣ ಮಾತ್ರ ಅಂತ್ಯ ಕಂಡಿಲ್ಲ. ಪ್ರಕರಣ ಮುಗಿಸಲು ಇನ್ನೂ ಒಂದು ತಿಂಗಳು ಬೇಕಾಗಲಿದೆ ಎಂದು ಪೊಲೀಸ್ ಕಮಿಷನರ ಕೆಟಿ.ಬಾಲಕೃಷ್ಣ ಹೇಳಿದ್ದಾರೆ.

ತನ್ವೀರ್‌ ಹತ್ಯೆ ಯತ್ನಕ್ಕೂ ಮುನ್ನ ನಾಯಿ ರುಂಡ ಕತ್ತರಿಸಿ ರಿಹರ್ಸಲ್‌!

ನಾವು ಯಾವುದೇ ಅಥವಾ ಯಾರದ್ದೇ ಒತ್ತಡಕ್ಕೂ ಮಣಿದಿಲ್ಲ. ಇಲ್ಲಿವರೆಗೆ ಪ್ರಕರಣದಲ್ಲಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ಪ್ರಕರಣದ ಹಿಂದೆ ಸಂಘಟನೆಯೊಂದರ ಕೈವಾಡ ಇದೆ ಎನ್ನುವ ಬಗ್ಗೆಯೂ ಈಗಲೇ ಹೇಳಲಾಗುವುದಿಲ್ಲ. ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಈ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ನಾವು ಕಾಲಕಾಲಕ್ಕೆ ಕೋರ್ಟ್‌ಗೆ ವರದಿ ಸಲ್ಲಿಸುತ್ತಿದ್ದೇವೆ. ಚಾರ್ಜ್‌ಶೀಟ್ ಸಲ್ಲಿಸಲು 90 ದಿನಗಳ ಅವಕಾಶ ಇದೆ. ಅಷ್ಟರಲ್ಲಿ ಸಮಗ್ರ ತನಿಖೆ ಮಾಡಿ ವರದಿ ಸಲ್ಲಿಸುತ್ತೇವೆ ಎಂದು ಫರ್ಹಾನ್ ಪಾಷಾ ತಿಳಿಸಿದ್ದಾರೆ.

ಶೀಘ್ರದಲ್ಲೇ ತನ್ವೀರ್‌ ಸೇಠ್‌ ಡಿಸ್ಚಾರ್ಜ್‌ ಸಾಧ್ಯತೆ