ಚಾಮರಾಜನಗರ(ಡಿ.06): ಕಳೆದ ವಾರ ತೆರಕಣಾಂಬಿ ಸಂತೆಯಲ್ಲಿ ಬಿತ್ತನೆ ಈರುಳ್ಳಿಗೆ ದರ ಏರಿಕೆ ಖಂಡಿಸಿ ರೈತರ ಪ್ರತಿಭಟನೆ ಹಾಗೂ ತಹಸೀಲ್ದಾರ್‌ ಅಧಿಕಾರ ಮೀರಿ ವಾಹನಗಳ ಸೀಜ್‌ ಮಾಡಿದ್ದಕ್ಕೆ ಆಕ್ರೋಶಗೊಂಡ ತಮಿಳುನಾಡಿನ ಬಿತ್ತನೆ ಈರುಳ್ಳಿ ಮಾರಾಟಗಾರರು ಸಂತೆಗೆ ಬರಲೇ ಇಲ್ಲ.

ಗುಂಡ್ಲುಪೇಟೆಯಲ್ಲಿ ಕಳೆದ ಗುರುವಾರ ಸಂತೆಯ ದಿನ ಬಿತ್ತನೆ ಈರುಳ್ಳಿಗೆ ಏಕಾಏಕಿ ದರ ಏರಿಸಿದ್ದಾರೆ ಎಂದು ರೈತಸಂಘ ಹಾಗೂ ಕೆಲ ರೈತರು ಬೀದಿಗೀಳಿದು ಪ್ರತಿಭಟನೆ ನಡೆಸಿ ಮಾರಾಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಪ್ರತಿಭಟನೆಯ ಹಿನ್ನೆಲೆ ತಹಸೀಲ್ದಾರ್‌ ಎಂ.ನಂಜುಂಡಯ್ಯ ಸ್ಥಳಕ್ಕಾಗಮಿಸಿದಾಗ ಬಿತ್ತನೆ ಈರುಳ್ಳಿ ದರ ದುಪ್ಪಟಗೊಂಡಿದೆ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದಾಗ ಬಿತ್ತನೆ ಈರುಳ್ಳಿ ತುಂಬಿದ ವಾಹನಗಳನ್ನು ತಹಸೀಲ್ದಾರ್‌ ಪೊಲೀಸರಿಗೆ ಒಪ್ಪಿಸಿದ್ದರು.

ಮಂಗಳೂರಿನಲ್ಲಿ ನೇಣು ಕಂಬಕ್ಕೇರಿದ ಈರುಳ್ಳಿ..!

ಬಿತ್ತನೆ ಈರುಳ್ಳಿಗೆ ದರ ಏರಿಕೆ ಸಹಜ ಕ್ರಿಯೆ ಆದರೂ ತಹಸೀಲ್ದಾರ್‌ ಅಧಿಕಾರ ಮೀರಿ ಬಿತ್ತನೆ ಈರುಳ್ಳಿ ತುಂಬಿದ ವಾಹನಗಳನ್ನು ಸೀಜ್‌ ಮಾಡಿಸಿ ಪೊಲೀಸರಿಗೆ ಒಪ್ಪಿಸಿದ್ದಕ್ಕೆ ಮಾರಾಟಗಾರರು ಡಿ.5 ರ (ಗುರುವಾರ)ಸಂತೆಗೆ ಬರಲೇ ಇಲ್ಲ.

ಬೆಳಗ್ಗೆ ರೈತರು ಹಾಜರು:

ಗುರುವಾರ ಬೆಳ್ಳಂ ಬೆಳಗ್ಗೆಯೇ ತೆರಕಣಾಂಬಿ ಸಂತೆಗೆ ಬಿತ್ತನೆ ಈರುಳ್ಳಿ ಖರೀದಿಗೆ ರೈತರು ಬಂದರು. ಗುರುವಾರ ಮಧ್ಯಾಹ್ನದವರವಿಗೂ ಮಾರಾಟಗಾರರ ಬರಲಿಲ್ಲ. ಈ ಸಮಯದಲ್ಲಿ ರೈತರೊಬ್ಬರು ಮಾತನಾಡಿ ದರ ಏರಿಕೆ ಖಂಡಿಸಿ ರೈತರು ಕಳೆದ ವಾರ ಪ್ರತಿಭಟನೆ ಮಾಡಿದ್ದು ಸರಿ. ಆದರೆ ಮಾರಾಟಗಾರರು ತಂದ ಈರುಳ್ಳಿ ತುಂಬಿದ ವಾಹನಗಳನ್ನು ಸೀಜ್‌ ಮಾಡಿದ್ದು ಸರಿಯಲ್ಲ ಎಂದಿದ್ದಾರೆ.

ಹೆಚ್ಚಿದ ಈರುಳ್ಳಿ ದರ: ಮುಚ್ಚುವ ಸ್ಥಿತಿಗೆ ಬಂದ ಹೋಟೆಲ್‌ಗಳು!

ಈ ಕಾರಣದಿಂದ ಈ ವಾರ ಮಾರಾಟಗಾರರು ಸಂತೆಗೆ ಬಂದಿಲ್ಲ. ಬಿತ್ತನೆ ಮಾಡಲು ಈಗ ಸುಸಮಯ ಇಂಥ ಸಮಯದಲ್ಲಿ ಬಿತ್ತನೆ ಈರುಳ್ಳಿ ಸಂತೆಗೆ ಬಂದಿಲ್ಲ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ.