10 ಕೋಟಿ ರು.ಪಾವತಿಸಿದ ಶಶಿಕಲಾ : ತಿಂಗಳ ಮೊದಲೇ ರಿಲೀಸ್..?
ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಆಪ್ತೆ ಶಶಿಕಲಾ ಶೀಘ್ರದಲ್ಲೇ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಬೆಂಗಳೂರು (ಡಿ.03): ಸನ್ನಡತೆ ಆಧಾರದ ಮೇರೆಗೆ ಅವಧಿಗೆ ಮುನ್ನ ಬಿಡುಗಡೆಗೊಳಿಸುವಂತೆ ರಾಜ್ಯ ಕಾರಾಗೃಹ ಇಲಾಖೆ ಮುಖ್ಯಸ್ಥರಿಗೆ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಮನವಿ ಮಾಡಿದ್ದಾರೆ.
2017ರಲ್ಲಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಶಿಕಲಾ ಅವರಿಗೆ ನ್ಯಾಯಾಲಯ 4 ವರ್ಷ ಸಜೆ ಮತ್ತು 10 ಕೋಟಿ ದಂಡ ವಿಧಿಸಿತ್ತು. ಈಗ 2021ರ ಜನವರಿಗೆ 27ಕ್ಕೆ ಅವರ ಶಿಕ್ಷಾವಧಿ ಮುಗಿಯಲಿದೆ. ಈಗಾಗಲೇ ನ್ಯಾಯಾಲಯಕ್ಕೆ ತಮಗೆ ವಿಧಿಸಿದ್ದ 10 ಕೋಟಿ ದಂಡವನ್ನು ಸಹ ಶಶಿಕಲಾ ಪಾವತಿಸಿದ್ದಾರೆ. ಹೀಗಾಗಿ ತಿಂಗಳ ಮುನ್ನವೇ ಬಿಡುಗಡೆ ಮಾಡುವಂತೆ ಕಾರಾಗೃಹ ಇಲಾಖೆಯ ಮುಖ್ಯಸ್ಥ ಅಲೋಕ್ ಮೋಹನ್ ಅವರಿಗೆ ಶಶಿಕಲಾ ಕೋರಿದ್ದಾರೆ ಎಂದು ತಿಳಿದುಬಂದಿದೆ.
10 ಕೋಟಿ ರು. ದಂಡ ಪಾವತಿ, ಜಯಾರ ಆಪ್ತೆ ಶಶಿಕಲಾ ಬಿಡುಗಡೆ ಸನ್ನಿಹಿತ? ...
ಶಶಿಕಲಾ ಅವರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಹಂತದಲ್ಲಿ ಸನ್ನಡತೆ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡುವ ಅಗತ್ಯವಿಲ್ಲ. ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.