ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು ಬೆಳ್ಳಿ ಖಡ್ಗ ಕಾಣಿಕೆ ನೀಡಿದ ಸಿಎಂ ವಿಜಯ್ ಬಳಿಕ ಸಿನಿಮಾ ಸ್ಟೈಲ್‌ನಲ್ಲಿ ದೇಗುಲದಿಂದ ಹೊರಟಿದ್ದಾರೆ. ತಾವೇ ಖುದ್ದಾಗಿ ಕಾರು ಡ್ರೈವಿಂಗ್ ಮಾಡಿ ತೆರಳಿದ್ದಾರೆ.
ಉಡುಪಿ (ಜೂ.12) ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದ ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ದೇವಿಗೆ ಬೆಳ್ಳಿ ಖಡ್ಗ ಕಾಣಿಕೆ ನೀಡಿದ್ದಾರೆ. ದೇಗುಲದಲ್ಲಿ ಸರಿಸುಮಾರು 30 ನಿಮಿಷಗಳ ಕಾಲ ಕಳೆದ ಜೊಸೆಫ್ ವಿಜಯ್ ಬಳಿಕ ಹೊರಬಂದು ಅಭಿಮಾನಿಗಳತ್ತ ಕೈಬೀಸಿ ತೆರಳಿದ್ದಾರೆ. ವಿಶೇಷ ಅಂದರೆ ಜೊಸೆಫ್ ವಿಜಯ್ ದೇಗುಲದಿಂದ ಸಿನಿಮಾ ಸ್ಟೈಲ್‌ನಲ್ಲಿ ಹೊರಟಿದ್ದಾರೆ. ಡ್ರೈವರ್ ಇಳಿಸಿ ಸ್ವತಃ ತಾನೇ ಡ್ರೈವಿಂಗ್ ಮಾಡಿಕೊಂಡು ತೆರಳಿದ್ದಾರೆ.
ದೇಗುಲದಿಂದ ಗೆಸ್ಟ್ ಹೌಸ್ ವರೆಗೂ ಜೊಸೆಫ್ ವಿಜಯ್ ತಾವೇ ಕಾರು ಡ್ರೈವಿಂಗ್ ಮಾಡಿಕೊಂಡು ತೆರಳಿದ್ದಾರೆ. ಅಭಿಮಾನಿಗಳಿಂಜದ ಕಿಕ್ಕಿರಿದು ತುಂಬಿದ್ದ ಭಕ್ತರ ನಡುವೆ ವಿಜಯ್ ಸಿನಿಮಾ ಶೈಲಿಯಲ್ಲಿ ಕಾರು ಹತ್ತಿ ತೆರಳಿದ್ದಾರೆ. ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ವಿಜಯ್, ಯಾವುದೇ ಸಂಕಲ್ಪ ಅರ್ಚಕರ ಬಳಿ ಹೇಳಿಲ್ಲ.
ಅರ್ಚಕ ರಾಮಚಂದ್ರ ಅಡಿಗ ಹೇಳಿದ್ದೇನು?
ಮುಖ್ಯಮಂತ್ರಿ ಜೊಸೆಫ್ ವಿಜಯ್ ಬಂದಾಗ ಪೂರ್ಣ ಕುಂಭ ಸ್ವಾಗತ ನೀಡಿದ್ದೇವೆ. ಸ್ತಂಭ ಗಣಪತಿಯಲ್ಲಿ ಪ್ರಾರ್ಥನೆ ಮಾಡಿಸಲಾಗಿದೆ. ಬಳಿಕ ಒಳಗೆ ಕರೆದುಕೊಂಡು ಬಂದು ದರ್ಶನ ಮಾಡಿಸಿದ್ದೇವೆ. ದೇವರ ಸನ್ನಿಧಾನದಲ್ಲಿ ಫಲ ಇಡಿಸಿ ಸಂಕಲ್ಪ ಮಾಡಿಸಲಾಯಿತು ಎಂದು ಅರ್ಚಕ ರಾಮಚಂದ್ರ ಅಡಿಗ ಹೇಳಿದ್ದಾರೆ. ಈ ವೇಶೆ ವಿಜಯ್ ವಿಶೇಷ ಸಂಕಲ್ಪ ಮಾಡಿಲ್ಲ. ಖಡ್ಗವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಅರ್ಚಕ ಹೇಳಿದ್ದಾರೆ.
ನಿತ್ಯ ಅರ್ಚನೆಯಲ್ಲಿ ಅಲಂಕಾರದಲ್ಲಿ ಖಡ್ಗ ಬಳಸುವಂತೆ ಕೋರಿದ್ದಾರೆ. ಖಡ್ಗವನ್ನ ದೇವರಿಗೆ ನಿತ್ಯ ಇಟ್ಟು ಭಕ್ತರಿಗೆ ತೋರಿಸ್ತೀರಾ ಎಂದಷ್ಟೇ ಕೇಳಿದ್ದಾರೆ. ಮೂಕಾಂಬಿಕೆ ದರ್ಶನ ಬಳಿಕ ವೀರಭದ್ರ ಸ್ವಾಮಿ ದರ್ಶನ ಮಾಡಿದ್ದಾರೆ. ಪ್ರಸಾದ ಸ್ವೀಕರಿಸಿ ಪ್ರದಕ್ಷಿಣೆ ಹಾಕಿ ದೇಗುಲದಿಂದ ತೆರಳಿದ್ದಾರೆ ಎಂಗು ರಾಮಚಂದ್ರ ಅಡಿಗ ಹೇಳಿದ್ದಾರೆ. ಎಂಜಿಆರ್ ನೀಡಿದ ಖಡ್ಗಗವನ್ನು ಅವರಿಗೆ ತೋರಿಸಿದ್ದೆವು. ಕೈಯಲ್ಲಿ ಹಿಡಿದು ತೋರಿಸಿದ್ದೇವೆ ಎಂದು ಅರ್ಚಕ ಹೇಳಿದ್ದಾರೆ.
1.6 ಕೆಜಿಯ ಬೆಳ್ಳಿ ಖಡ್ಗ
ಕೊಲ್ಲೂರು ಮೂಕಾಂಬಿಕೆ ದರ್ಶನದ ವೇಳೆ ಮುಖ್ಯಮಂತ್ರಿ ಜೊಸೆಫ್ ವಿಜಯ್ 1.6 ಕೆ.ಜಿ ತೂಕದ ಬೆಳ್ಳಿ ಖಡ್ಗವನ್ನು ಕಾಣಿಕೆಯಾಗಿ ನೀಡಿದ್ದಾರೆ. ಇದಕ್ಕೂ ಮೊದಲು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿಆರ್ ಚಿನ್ನದ ಖಡ್ಗ ನೀಡಿದ್ದರು. ದೇವಿ ದರ್ಶನ ಪಡೆದ ಎಂಜಿಆರ್ ತಮಿಳುನಾಡು ರಾಜಕೀಯದಲ್ಲಿ ಭಾರಿ ಪ್ರಭಾವ ಬೀರಿದ ನಾಯಕ. ಇದೀಗ ಜೊಸೆಫ್ ವಿಜಯ್ ಇದೇ ಸೂಚನೆ ನೀಡಿದ್ದಾರೆ.


