ಸರ್ಕಾರಿ ಜಾಗ ದುರ್ಬಳಕೆ: ಕ್ರಮಕ್ಕೆ ಮುಂದಾದ ತಹಶೀಲ್ದಾರ್‌ರಿಗೆ ವಕೀಲನ ಆವಾಜ್‌..!

ನೆಲಮಂಗಲ ತಾಲ್ಲೂಕಿನ ಡಾಬಸ್ ಪೇಟೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಲಕ್ಷಾಂತರ ರೂ. ಪಡೆದು ಸರ್ಕಾರಿ ಭೂಮಿಯನ್ನೇ ಬಾಡಿಗೆಗೆ ನೀಡಿದ್ದ ಭೂಪ ವಸೀಂ, ಇದರ ತೆರೆವಿಗೆ ಮುಂದಾದಾಗ ನಡೆದ ಹೈಡ್ರಾಮ  

Talk War Between Tahashildar and Lawyer in Nelamangala grg

ವರದಿ: ಟಿ.ಮಂಜುನಾಥ, ಹೆಬ್ಬಗೋಡಿ

ನೆಲಮಂಗಲ(ಅ.08): ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಹೊಟೇಲ್ ನಿರ್ಮಿಸಿ ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದ ಮಾಲೀಕನ ವಿರುದ್ಧ ಕ್ರಮ ಮತ್ತು ಜಾಗ ತೆರೆವುಗೊಳಿಸಲು ಮುಂದಾದಾಗ ತಹಶೀಲ್ದಾರ್‌ರಿಗೆ ವಕೀಲರೊಬ್ಬರು ಏರು ಧ್ವನಿಯಲ್ಲಿ ಮಾತಾನಾಡಿದ ಘಟನೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಇಂದು(ಶನಿವಾರ) ನಡೆದಿದೆ. 

ನೆಲಮಂಗಲ ತಾಲ್ಲೂಕಿನ ಡಾಬಸ್ ಪೇಟೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಲಕ್ಷಾಂತರ ರೂಗಳನ್ನ ಪಡೆದು ಸರ್ಕಾರಿ ಭೂಮಿಯನ್ನೇ ಬಾಡಿಗೆಗೆ ನೀಡಿದ್ದ ಭೂಪ ವಸೀಂ, ಇದರ ತೆರೆವಿಗೆ ಮುಂದಾದಾಗ ಹೈಡ್ರಾಮವೇ ನಡೆದು ಹೋಯ್ತು, ಇನ್ನೂ ಈ ವಿವಾದಕ್ಕೆ ಸಂಬಂಧಿಸಿ ದಂಡಾಧಿಕಾರಿಗಳಾದ ಮಂಜುನಾಥ್ ಜಾಗವನ್ನು ಯಾರೇ ಒತ್ತುವರಿ ಮಾಡಿಕೊಂಡರು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಮತ್ತೆ ಅದನ್ನು ಸರ್ಕಾರಕ್ಕೆ ವಶಪಡಿಸಿಕೊಳ್ಳಲಾಗುತ್ತದೆ ಎಂದು ತಾಲ್ಲೂಕಿನ ಕೆ ಮಂಜುನಾಥ್ ತಿಳಿಸಿದರು. ಅವರು ಇಂದು ಡಾಬಾಸ್ ಪೇಟೆಯ ಸರ್ವೇ ನಂಬರ್ 91 ರಲ್ಲೀ  ವಸೀಮ್ ಎಂಬುವರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಹೋಟೆಲ್ ನಿರ್ಮಿಸಿ ಬಾಡಿಗೆ ನೀಡಿರುವ ಜಮೀನು ಮಾಲೀಕನಿಗೆ ಇನ್ನು ಎರಡು ದಿನದಲ್ಲಿ ಹೋಟೆಲ್ ತೆರವುಗೊಳಿಸುವ ಖಡಕ್ ಎಚ್ಚರಿಕೆ ನೀಡಿದರು.

ಹೊಸಕೋಟೆ: ಆ್ಯಂಬುಲೆನ್ಸ್‌ ಸಿಗದೆ ಟ್ಯಾಂಕರ್‌ ಚಾಲಕ ಸಾವು, ಆಕ್ರೋಶ

ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಂದನಹೊಸಹಳ್ಳಿ ಹಾಗೂ ಸೋಂಪುರ ಗಡಿ ಭಾಗವಾಗಿರುವ ಜೊತೆಗೆ  ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಸರ್ವೆ ನಂಬರ್ 91 ರಲ್ಲಿ 34 ಗುಂಟೆ ಸರ್ಕಾರಿ ಗುಂಡು ತೋಪು ಇತ್ತು .ಅದರಲ್ಲಿ 7 ಗುಂಟೆ ರಾಷ್ಟ್ರೀಯ ಹೆದ್ದಾರಿಗೆ ಹಂಚಿಕೆಯಾಗಿದೆ 10 ಗುಂಟೆ ರೈತ ಸಂಪರ್ಕ ಕೇಂದ್ರಕ್ಕೆ ನೀಡಲಾಗಿದೆ.

5 ಗುಂಟೆ ಜಮೀನನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ BDCC ಬ್ಯಾಂಕಿಗೆ ಕಾಯ್ದಿರಿಸಲಾಗಿದೆ ಇನ್ನುಳಿದ ಸರ್ಕಾರಿ ಗುಂಡು ತೋಪಿನ ಜಾಗದಲ್ಲಿ 2.08 ಗುಂಟೆ ಒತ್ತುವರಿ  ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು .ಇಲ್ಲಿನ ಪಕ್ಕದ ಜಮೀನು ಮಾಲೀಕ ವಸಿಂ  ಎಂಬುವರು ಒತ್ತುವರಿ ಮಾಡಿ ಹೊಟೇಲ್ ನೆಡೆಸಲು ಬಾಡಿಗೆ ನೀಡಿದ್ದಾರೆ  ಒತ್ತುವರಿ ಮಾಡಿಕೊಂಡರುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಸೂಕ್ತ  ಕ್ರಮ ತೆಗೆದುಕೊಳ್ಳುವ ಮೂಲಕ ಒತ್ತುವರಿಯಾದ ಜಾಗವನ್ನು  ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ  ಇಂದೆ ಕಂಪ್ಯೂಟರ್ ಸರ್ವೇ ಮಾಡಿಸಿ ವತ್ತುವರಿಯಾದ ಜಾಗವನ್ನು ಹಾಗೂ ಕಟ್ಟಡವನ್ನು ನೆಲಸಮ ಮಾಡುತ್ತೇವೆ ಎಂದು ತಿಳಿಸಿದ್ರು.

ಇನ್ನೂ ಒತ್ತುವರಿಯಾದ ಜಾಗದಲ್ಲಿ ಅನಧಿಕೃತ ಕಟ್ಟಡಗಳಿದ್ದರೂ ಯಾವುದೇ ಮುಲಾಜಿಗೆ ಒಳಗಾಗದೆ ತೆರವುಗೊಳಿಸಲಾಗುವುದು ಸೂಕ್ತ ಭದ್ರತೆ ಮೇರೆಗೆ ಈ ಕಾರ್ಯ ನಡೆಯಲಿದೆ ಎಂದು ತಹಸೀಲ್ದಾರ್ ಕೆ ಮಂಜುನಾಥ್ ತಿಳಿಸಿದ್ದಾರೆ.
ಇನ್ನು ಒತ್ತೂವರಿ  ಜಾಗದಲ್ಲಿ ಜಮೀನು ಮಾಲೀಕನಿ 3ಲಕ್ಷ ಅಡ್ವಾನ್ಸ್  ತಿಂಗಳಿಗೆ ಬಾಡಿಗೆ ನೀಡಿ  ಜೈಹಿಂದ್ ಹೋಟೆಲ್ ನಡೆಸುತ್ತಿರುವ ಮಾಲೀಕ ಮಾತನಾಡಿ ರಸ್ತೆ ಪಕ್ಕದಲ್ಲಿ ವ್ಯವಹಾರ ನಡೆಸಲು ಇಂತಹ ಸ್ಥಳಗಳು ಅತ್ಯವಶ್ಯಕ ಸರ್ಕಾರದ ಅಧಿಕಾರಿಗಳು ಸಹ ಮುಂಚೆಯೇ ಅವರ ಆಸ್ತಿ ಪಾಸ್ತಿಗಳಿಗೆ ಸರಿಯಾದ ಸರ್ವೇ ಕಾರ್ಯ ನಡೆಸಿ ಬಂದು ಬಸ್ತ್ ಮಾಡಿದರೆ ನಮ್ಮಂತಹ ವ್ಯಾಪಾರಸ್ಥರು ಇಂತಹ ವಿವಾದಿತ ಜಾಗಗಳಿಗೆ  ಬರುವುದಿಲ್ಲ ಸದ್ಯದ ಪರಿಸ್ಥಿತಿಯಲ್ಲಿ ನಾವು ಜೈಹಿಂದ್ ಎನ್ನುವ ಹೋಟೆಲ್ ನಡೆಸುತ್ತಿದ್ದು ಜಮೀನು ಮಾಲೀಕನಿಗೆ ಅಡ್ವಾನ್ಸ್ ರೂಪದಲ್ಲಿ ಹಣ ನೀಡಿ ಹೋಟೆಲ್ ಉದ್ಯಮ ಸ್ಥಾಪಿಸಿದ್ದು ಸುತ್ತಮುತ್ತ ನಮ್ಮ ಜೈಹಿಂದ್ ಹೋಟೆಲ್ ಗೆ ಹೆಚ್ಚಿನ ಮಾನ್ಯತೆ ಇದೆ ಸದ್ಯ ಜಮೀನು ಹೋತ್ತುವರಿ ಎಂದು ಕಟ್ಟಡ ನೆಲಸಮ ಮಾಡಿದರೆ ನಮ್ಮ ಹೋಟೆಲ್ ಗೆ ಕೆಟ್ಟ ಹೆಸರು ಬರುವುದರ ಜೊತೆಗೆ ಸ್ಥಳೀಯರಲ್ಲಿ ವ್ಯವಹಾರವೇ ಕೆಡುತ್ತದೆ ಇಂತಹ ಜಾಗಗಳ ಬಗ್ಗೆ ಸರ್ಕಾರದ ಅಧಿಕಾರಿಗಳು ನಿವೇಶನ ಇದ್ದಾಗಲೇ ಸೂಕ್ತ ಕ್ರಮ ಕೈಗೊಂಡರೆ ನಮ್ಮಂತ ಉದ್ಯಮಿಗಳಿಗೆ ಸಹಕಾರ ನೀಡಿದಂತಾಗುತ್ತದೆ ಎಂದು ಜೈಹಿಂದ್ ಹೋಟೆಲ್ ಮಾಲೀಕ ವಸೀಂ ಹೇಳಿದರು.

ಏನೇ ಆಗಲಿ ಡಾಬಾಸ್ ಪೇಟೆ ಕೈಗಾರಿಕಾ ವಲಯವಾಗಿ ಬೆಳೆದಂತೆಲ್ಲಾ ಸುತ್ತಮುತ್ತಲ ಗುಂಡುತೋಪು. ಮುಜರಾಯಿ ಇಲಾಖೆಗೆ ಸೇರಿದ ಆಸ್ತಿ.ಗೋಮಾಳ .ಕೆರೆಕಟ್ಟೆಗಳು ನಶಿಸಿ ಹೋಗುತ್ತಿದ್ದು ಅಕ್ರಮ ಒತ್ತುವರಿ ಎಲ್ಲರಿಗೂ ತಿಳಿದ ವಿಷಯವಾಗಿದೆ ಈ ವರದಿ ನೋಡಿಯಾದರೂ ಇನ್ನು ಮುಂದೆ ಸಂಬಂಧಪಟ್ಟ ಕಂದಾಯ ಇಲಾಖೆ ಸರ್ಕಾರದ ಆಸ್ತಿಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವರೆ ಕಾದು ನೋಡಬೇಕಿದೆ.
 

Latest Videos
Follow Us:
Download App:
  • android
  • ios