Asianet Suvarna News Asianet Suvarna News

ನೂರಾರು ಜೀವ ಉಳಿಸಿದ್ದ ಸ್ಟಾಫ್ ನರ್ಸ್ ಆತ್ಮಹತ್ಯೆ; ಊರಿಗೆ ಊರೇ ಬಂದ್ ಮಾಡಿದ ಜನತೆ!

ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಹೋದ್ಯೋಗಿ ನಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ. 

Talikoti government hospital staff nurse death people shut down shop self sat
Author
First Published Aug 23, 2024, 1:24 PM IST | Last Updated Aug 23, 2024, 1:24 PM IST

ವಿಜಯಪುರ (ಆ.23): ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಹೋದ್ಯೋಗಿ ನಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ. 

ಈ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಮೃತರನ್ನು ಸ್ಟಾಪ್ ನರ್ಸ್ ಶಶಿಕಾಂತ ಬೆಣ್ಣೂರು (42) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದಾನೆ. ದಲಿತಪರ ಸಂಘಟನೆಗಳಿಂದ ತಾಳಿಕೋಟಿ ಪಟ್ಟಣ ಬಂದ್ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದು ಮಾಡಿದ ಸಾರ್ವಜನಿಕರು ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ಚಿಕಿತ್ಸೆಗೆ ತೆರಳುವ ಸಾರ್ವಜನಿಕರಿಗೂ ಸರಿಯಾಗಿ ಸೇವೆ ನೀಡದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.

ಹುಬ್ಬಳ್ಳಿ: ಶಾಲಾ ಮಕ್ಕಳನ್ನಿಟ್ಟುಕೊಂಡು ಮೀಟರ್‌ ಬಡ್ಡಿ ವ್ಯವಹಾರ..!

ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಶಶಿಕಾಂತ್ ಅವರ ನೂರಾರು ಜೀವಗಳನ್ನು ಉಳಿಸಿದ್ದರು. ಆದರೆ, ಅವರಿಗೆ ಇಲ್ಲಿನ ಮಹಿಳಾ ಸಹೋದ್ಯೋಗಿಗಳು ಸೇರಿದಂತೆ ಹಲವರು ಕೂಡಿಕೊಂಡು ತೀವ್ರ ಕಿರುಕುಳ ನೀಡಿದ್ದಾರೆ. ಆದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಶಿಕಾಂತ ಬೆಣ್ಣೂರು ಅವರು ಆತ್ಮಹತ್ಯೆಗೆ ಶರಣಾಗುವ ಮುನ್ನ ನನ್ನ ಸಾವಿಗೆ ನನ್ನ ಆಸ್ಪತ್ರೆಯ ಸಹೋದ್ಯೋಗಿ ನೌಕರರಾದ ಶ್ರೀದೇವಿ ಬಗಲಿ, ಈರಣ್ಣ ವಡವಡಗಿ, ಜ್ಯೋತಿ ನನ್ನ ಸಾವಿಗೆ ಕಾರಣ ಎಂದು ವಾಟ್ಸಪ್ ಸ್ಟೇಟಸ್ ಹಾಕಿದ್ದಾನೆ. ಇದರಿಂದ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದ ಶಶಿಕಾಂತ್ ಸಾವಿಗೆ ತಾಳಿಕೋಟೆ ಜನರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ನೋಟಿನ ಕಂತೆ ಆಕಾಶಕ್ಕೆಸದ ಯೂಟ್ಯೂಬರ್, ರಸ್ತೆಯಲ್ಲಿ ಬಿದ್ದ ದುಡ್ಡಿಗಾಗಿ ಮುಗಿಬಿದ್ದ ಜನ!

ಸರ್ಕಾರಿ ಆಸ್ಪತ್ರೆ ನೌಕರನ ಸಾವಿನಿಂದ ಮನನೊಂದ ಸಾರ್ವಜನಿಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಆಸ್ಪತ್ರೆಯಲ್ಲಿ ನೌಕರನ ಸಾವಿಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬಂದ್‌ಗೆ ಕರೆ ನೀಡಲಾಗಿದೆ. ತಾಳಿಕೋಟಿ ಪಟ್ಟಣ ಬಂದ್ ಹಿನ್ನೆಲೆಯಲ್ಲಿ ತಾಳಿಕೋಟೆಯ ರಸ್ತೆಗಳು ಬಿಕೋ ಎನ್ನುತ್ತಿವೆ. ಶಶಿಕಾಂತ ಬೆಣ್ಣೂರು ವಿಜಯಪುರದ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಅಂತ್ಯಕ್ರಿಯೆಯನ್ನೂ ನೆರವೇರಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿ ದುರಾಡಳಿತಕ್ಕೆ ಬೇಸತ್ತು ತಾಳಿಕೋಟಿ ಪಟ್ಟಣದಲ್ಲಿ ಇಂದು ಸಾಯಂಕಾಲ 5ಗಂಟೆಯವರೆಗೆ ಬಂದ್ ಮಾಡಲಾಗುತ್ತಿದೆ. 

Latest Videos
Follow Us:
Download App:
  • android
  • ios