ನೋಟಿನ ಕಂತೆ ಆಕಾಶಕ್ಕೆಸದ ಯೂಟ್ಯೂಬರ್, ರಸ್ತೆಯಲ್ಲಿ ಬಿದ್ದ ದುಡ್ಡಿಗಾಗಿ ಮುಗಿಬಿದ್ದ ಜನ!
ಬೈಕ್‌ನಲ್ಲಿ ತೆರಳುತ್ತಾ ಯೂಟ್ಯೂಬರ್ ನೋಟಿನ ಕಂತೆ ಮೇಲಕ್ಕೆಸೆದಿದ್ದಾನೆ. ರಸ್ತೆ ಮೇಲೆ ಬಿದ್ದ ನೋಟುಗಳನ್ನು ಹೆಕ್ಕಲು ಜನ ಮುಗಿಬಿದ್ದಿದ್ದಾರೆ. ಇದೀಗ ಈ ಯೂಟ್ಯೂಬರ್ ಹಿಂದೆ ಜನ ಬ್ಯಾಗ್ ಹಿಡಿದು ತೆರಳುತ್ತಿದ್ದಾರೆ.
ಹೈದರಾಬಾದ್(ಆ.23) ಟ್ರಾಫಿಕ್ ರಸ್ತೆಯಲ್ಲಿ ಯೂಟ್ಯೂಬರ್ ಕಂತೆ ನೋಟು ಹಿಡಿದು ಆಕಾಶಕ್ಕೆ ಎಸೆದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬೈಕ್ ಮೇಲೆ ಸಾಗುತ್ತಾ ಜನಗಳು ತುಂಬಿರುವ ಮಾರುಕಟ್ಟೆ ರಸ್ತೆಯಲ್ಲಿ ನೋಟು ಎಸೆಯಲಾಗಿದೆ. ನೋಟುಗಳು ರಸ್ತೆ ಮೇಲೆ ಬೀಳುತ್ತಿದ್ದಂತೆ ಜನರು ಮುಗಿ ಬಿದ್ದಿದ್ದಾರೆ. ಬಿದ್ದಿರುವ ನೋಟು ಹೆಕ್ಕಿ ಜೇಬಿಗಿಳಿಸಿದ್ದಾರೆ. ನೋಟು ಎಸೆದ ಯೂಟ್ಯೂಬರ್ ಇದೀಗ ಎಲ್ಲಿಗೆ ತೆರಳಿದರೂ ಕೆಲವರು ಆತನ ಹಿಂದೆ ಬ್ಯಾಗ್ ಹಿಡಿದು ತೆರಳುತ್ತಿದ್ದಾರೆ. ನೋಟು ಎಸೆದು ವಿಡಿಯೋ ಮಾಡಿದ ಈ ಯೂಟ್ಯೂಬರ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಪವರ್ ಹರ್ಷಾ ಅಲಿಯಾ ಮಹದೇವ್ ಅನ್ನೋ ಯೂಟ್ಯೂಬರ್ ವಿಡಿಯೋಗಾಗಿ ಈ ರೀತಿ ಮಾಡಿದ್ದಾನೆ. ವಿಡಿಯೋ ವೈರಲ್ ಆಗಲು ಈತ ಕಂತೆ ನೋಟನ್ನು ಹಿಡಿದು ಹೈದರಾಬಾದ್ ಜನರು ತುಂಬಿದ ರಸ್ತೆಗೆ ತೆರಳಿದ್ದಾನೆ. ಗೆಳೆಯ ಬೈಕ್‌ನ ಹಿಂಭಾಗದಲ್ಲಿ ಕುಳಿತುಕೊಂಡ ಈ ಯೂಟ್ಯೂಬರ್ ಸವಾರಿ ಆರಂಭಿಸಿದ್ದಾನೆ. ಜನರಿರುವ ರಸ್ತೆಯಲ್ಲಿ ಈತ ಬೈಕ್‌ನ ಹಿಂಬದಿಯಲ್ಲಿ ಎದ್ದು ನಿಂತು ಕೈಯಲ್ಲಿರುವ ನೋಟನ್ನು ಆಕಾಶಕ್ಕೆ ಎಸೆದಿದ್ದಾನೆ.
ಇದು ಜಗತ್ತಿನ ಬಲು ಅಗ್ಗದ ದೇಶ, ನಿಮ್ ಕೈಯಲ್ಲಿ 1000 ರೂ. ಇದ್ರೂ ಕೋಟ್ಯಾಧಿಪತಿ ತರ ಜೀವಿಸಬಹುದು
ಇವರ ಹುಚ್ಚು ಸಾಹಸವನ್ನು ಇದೇ ರಸ್ತೆಯ ಕೆಲ ದೂರದಲ್ಲಿ ನಿಂತು ವಿಡಿಯೋ ರೆಕಾರ್ಡ್ ಮಾಡಲಾಗಿದೆ. ನೋಟುಗಳು ಅಕಾಶಕ್ಕೆ ಎಸೆದು ಮುಂದೆ ಸಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ನೋಟುಗಳು ರಸ್ತೆ ಮೇಲೆ ಬಿದ್ದಿದೆ. 50, ನೂರು, 200, ರೂಪಾಯಿ ನೋಟುಗಳನ್ನು ಎಸೆಯಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಸ್ತೆಯಲ್ಲಿ ನೋಟುಗಳನ್ನು ಹೆಕ್ಕಲು ಜನ ಮುಗಿಬಿದ್ದಿದ್ದಾರೆ. ಎಲ್ಲೆಡೆ ಚೆಲ್ಲಿದ ನೋಟುಗಳನ್ನು ಹೆಕ್ಕಿದ ಜನ ಜೇಬಿಗೆ ತುಂಬಿಸಿಕೊಂಡಿದ್ದಾರೆ.
ಇತ್ತ ವಿಡಿಯೋ ಮಾಡಿದ ಸಾರ್ಥಕತೆಯಲ್ಲಿ ಯೂಟ್ಯೂಬರ್ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಈ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಭಾರಿ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಯೂಟ್ಯೂಬರ್ ವಿರುದ್ದ ಹಲವರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಈತ ದುಡಿದು ಸಂಪಾದಿಸಿದ ಹಣ ಇದಲ್ಲ. ಹೀಗಾಗಿ ಎಸೆದಿದ್ದಾನೆ. ಈ ಹಣದ ಮೂಲ, ಈತನ ಆದಾಯದ ಮೂಲ ಸೇರಿದಂತೆ ಇತರ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಬೇಕು. ಮೋಸ ವಂಚನೆಗಳಿಂದ ಮಾಡಿರುವ ದುಡ್ಡಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮತ್ತೆ ಕೆಲವರು ಹಣ ಈ ರೀತಿ ಎಸೆಯುವುದು ತಪ್ಪು. ಇದು ನಿಯಮ ಉಲ್ಲಂಘನೆಯಾಗಿದೆ. ಜೊತೆಗೆ ಬೈಕ್ ಮೇಲೆ ಸ್ಟಂಟ್ ಮಾಡುತ್ತಾ ದುಡ್ಡು ಎಸೆದಿದ್ದಾರೆ. ಜನರು ತುಂಬಿದ ರಸ್ತೆಯಲ್ಲಿ ಈ ರೀತಿ ಹುಚ್ಚು ಸಾಹಸದಿಂದ ಅಪಘಾತ ಸಾಧ್ಯತೆ ಇದೆ. ಪೊಲೀಸರು ಈತನಿಗೆ ಬುದ್ದಿಕಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಯೂಟ್ಯೂಬ್‌ನಲ್ಲಿ ಟ್ರೇನಿಂಗ್, ಕೇರಳದಲ್ಲಿ ಪ್ರಿಂಟಿಂಗ್, ಕರ್ನಾಟಕದಲ್ಲಿ ಶಾಪಿಂಗ್! ಖೋಟಾ ನೋಟು ಗ್ಯಾಂಗ್ ಅರೆಸ್ಟ್