Anti Conversion Bill: ಮತಾಂತರ ನಿಷೇಧ ಕಾಯ್ದೆ ಜಾರಿಯಾದ್ರೆ ಕೋರ್ಟ್ ಮೊರೆ: ತಾಹೇರ್ ಹುಸೇನ್
* ಕಾಯ್ದೆ ಜಾರಿಗೊಳಿಸಿ ಅಲ್ಪಸಂಖ್ಯಾತರಲ್ಲಿ ಆತಂಕ ಮೂಡಿಸುವ ಹುನ್ನಾರ
* ಇದೊಂದು ಸಂವಿಧಾನ ವಿರೋಧಿ ಕಾಯ್ದೆ
* ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಸೇರಲು ಸ್ವಾತಂತ್ರ್ಯವಿದೆ
ಕೊಪ್ಪಳ(ಡಿ.24): ರಾಜ್ಯ ಸರ್ಕಾರ(Government of Karnataka) ಮತಾಂತರ ಕಾಯ್ದೆ(Anti Conversion Bill) ಜಾರಿಗೊಳಿಸಿದರೆ ಕೋರ್ಟ್ ಮೊರೆ ಹೋಗಲಾಗುವುದು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್(Taher Hussain) ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯ್ದೆ ಜಾರಿಗೊಳಿಸಿ ಅಲ್ಪಸಂಖ್ಯಾತರಲ್ಲಿ(Minorities) ಆತಂಕ ಮೂಡಿಸುವ ಹುನ್ನಾರ ಅಡಗಿದೆ. ಇದೊಂದು ಸಂವಿಧಾನ ವಿರೋಧಿ ಕಾಯ್ದೆಯಾಗಿದ್ದು ಈಗಾಗಲೇ ಸಂವಿಧಾನದಲ್ಲಿ ಈ ಕುರಿತು ಪ್ರಸ್ತಾಪ ಇದ್ದರೂ ಅನಗತ್ಯವಾಗಿ ಮತ್ತೊಂದು ಕಾಯ್ದೆ ಜಾರಿ ತರಲಾಗುತ್ತದೆ ಎಂದು ಕಿಡಿಕಾರಿದರು.
ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಸೇರಲು ಸ್ವಾತಂತ್ರ್ಯವಿದೆ. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಇಲ್ಲಿ ಅಲ್ಪಸಂಖ್ಯಾತರ, ಹಿಂದುಳಿದವರ ಮೇಲೆ ದೌರ್ಜನ್ಯ ಎಸಗಲು ಪರವಾನಗಿ ನೀಡುವ ಹುನ್ನಾರವನ್ನು ಸರ್ಕಾರ ನಡೆಸಿದೆ. ಇದೊಂದು ಧಾರ್ಮಿಕ ಸ್ವಾತಂತ್ರ್ಯ(Religious Freedom) ಕಸಿಯುವ ಕಾಯ್ದೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬಲವಂತದ, ಒತ್ತಾಯ ಪೂರ್ವಕ, ಆಮಿಷದ ಮೂಲಕ ಮತಾಂತರ(Conversion) ನಡೆದಿದ್ದರೆ ಅದಕ್ಕೆ ಸರ್ಕಾರ ಪರ್ಯಾಯ ಕ್ರಮಕೈಗೊಳ್ಳಲಿ. ಈಗಾಗಲೇ ಇದಕ್ಕೆ ಅವಕಾಶ ಇದೆ ಎಂದರು.
Religious Conversion: ಹುಬ್ಬಳ್ಳಿಯಲ್ಲಿ ಸಾಮೂಹಿಕ ಮತಾಂತರ?
ಬೆಳಗಾವಿಯಲ್ಲಿ(Belagavi) ಕನ್ನಡದ ಬಾವುಟ(Kannada Flag) ಸುಟ್ಟು ಪುಂಡತನ ತೋರಿದವರ ಮೇಲೆ ಸರ್ಕಾರ ಕ್ರಮಕೈಗೊಳ್ಳಬೇಕು. ಅಂತಹವರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿರುವ ಅವರು, ಬೆಳಗಾವಿಯ ಬಿಜೆಪಿ(BJP) ಸಂಸದರು ಎಂಇಎಸ್(MES) ಹಾಗೂ ಶಿವಸೇನೆಗೆ(Shiv Sena) ಕುಮ್ಮಕ್ಕು ನೀಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ(Maharashtra) ಕಾಂಗ್ರೆಸ್(Congress) ಕಾರ್ಯಕರ್ತರು ಕನ್ನಡ ಬಾವುಟ ಸುಟ್ಟು ಅವಮಾನಿಸಿದ್ದಾರೆ. ಕನ್ನಡ ನಾಡು ಹಾಗೂ ಕನ್ನಡಿಗರಿಗೆ(Kannadigas) ಅನ್ಯಾಯವಾದರೆ ಅವರ ವಿರುದ್ಧ ಹೋರಾಟ ಮಾಡಲು ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ, ಜಿಲ್ಲಾಧ್ಯಕ್ಷ ಆದಿಲ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹ್ಮದ್ ಅಲಿಮುದ್ದೀನ್ ಇದ್ದರು.
ಮತಾಂತರ ಬಿಲ್ ವಿಧಾನಸಭೆಯಲ್ಲಿ ಅಂಗೀಕಾರ
ಬೆಳಗಾವಿ: ಹಲವು ವಿರೋಧಗಳ ನಡುವೆ ಮತಾಂತರ ಬಿಲ್ (ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ) ಕರ್ನಾಟಕ (Karnataka) ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಬೆಳಗಾವಿ (Belagavi) ಸುವರ್ಣ ಸೌಧದಲ್ಲಿ ಗುರುವಾರ ಬೆಳಗ್ಗಿನಿಂದ ಮತಾಂತರ ಬಿಲ್ ಮೇಲೆ ಚರ್ಚೆ ನಡೆಯಿತು.
Anti Conversion Bill: ಮತಾಂತರ ನಿಷೇಧ ಕಾಯ್ದೆಗೆ ಕೂಡಲ ಶ್ರೀ ಬೆಂಬಲ?
ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿಕ ನೀಡಿ, ಮತಾಂತರ ನಿಷೇಧ ವಿಧೇಯಕ ವಿಧಾನ ಸಭೆಯಲ್ಲಿ ಅಂಗೀಕಾರ ಆಗಿದೆ. ಅನೇಕ ಟೀಕೆಗಳನ್ನ ಮಾಡಿದ್ದಾರೆ. ಹಿಡಿನ್ ಅಜೇಂಡಾ ಅಂದಿದ್ದಾರೆ. ಯಾವುದೇ ಹಿಡನ್ ಅಜೇಂಡಾದಿಂದ ಈ ವಿಧೇಯಕ ತಂದಿಲ್ಲ. ಮತಾಂತರ ಮಾಡುವ ಹಕ್ಕು ಯಾರಿಗು ಇಲ್ಲ. ಆಮಿಷದ ಮತಾಂತರಕ್ಕೆ ತಡೆಯುವ ಪ್ರಯತ್ನವನ್ನ ಈ ವಿಧೇಯಕದಲ್ಲಿ ತಂದಿದ್ದೇವೆ. ಮತಾಂತರ ಆದ್ರೆ, ದಲಿತರು ತಮಗೆ ಸಿಗುವ ಸೌಲಭ್ಯಗಳನ್ನ ಕಳೆದುಕೊಳ್ತಾರೆ.
ಎಸ್.ಸಿ ಮತ್ತು ಎಸ್.ಟಿ ವರ್ಗದವರಿಗೆ ಸರ್ಕಾರದಿಂದ ಮೊದಲು ಸಿಗ್ತಿದ್ದ ಸೌಲಭ್ಯಗಳು ಸಿಗೊದಿಲ್ಲ ಈ ರೀತಿಯ ಅಂಶ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಹಲವು ಕೋಲಾಹಲಗಳ ನಡುವೆ ಗೃಹ ಸಚಿವ ಆರಗ ಜ್ಞಾನೇಂದ್ರ ಬಿಲ್ ನ್ನು ಮಂಡನೆ ಮಾಡಿದ್ದರು. ಮಂಡನೆ ಆದ ತಕ್ಷಣವೇ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧ ವ್ಯಕ್ತಪಡಿಸಿಕೊಂಡೇ ಬಂದಿತ್ತು.
ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ನಾನು ಮಾತಾಡುವಾಗ ಕ್ರೈಸ್ತ ಧರ್ಮದ ಬಗ್ಗೆ ಮಾತಿಡಿದೆ. ಜಾರ್ಜ್ ಅವರಿಗೆ ನೋವಾಗಿದ್ರೆ ನಾನು ಕ್ಷಮೆ ಕೋರುತ್ತೇನೆ. ನಮ್ಮ ತಾಯಿಗೆ ಮತಾಂತರ ಎಂದ್ರೆ ಏನು ಎಂದೆ ಗೊತ್ತಿಲ್ಲ. ಈ ಹಿಂದೆ ಯಡಿಯೂರಪ್ಪರ ಗಮನಕ್ಕೆ ತಂದಿದ್ದೆ. ಬಲವಂತದ ಮತಾಂತರ ಆಗ್ತಿದೆ ಎನ್ನುವ ವಿಚಾರದ ಬಗ್ಗೆ ಗಮನ ಸೆಳೆದಿದ್ದೆ. ನಮ್ಮ ಕ್ಷೇತ್ರದಲ್ಲಿ ಏಳು ಚರ್ಚ್ ಇದೆ. ಅಲ್ಲಿ ಇರುವ ಪಾದ್ರಿಗಳು ಲಿಂಗಾಯತ, ಬೋವಿ ಸಮುದಾಯದವರು ಕನ್ವರ್ಟ್ ಆಗಿ ಪಾದ್ರಿಗಳಾಗಿದ್ದಾರೆ.! ಅಲ್ಲಿನ ಚರ್ಚೆಗೆ ಹೋಗುವವರು ಹಿಂದುಳಿದವರು. ಮೂಲ ಚರ್ಚ್ ಇರುವಲ್ಲಿ ದಾಳಿ ಆಗ್ತಿಲ್ಲ. ಆದ್ರೆ ಎಲ್ಲಿ ಕನ್ವರ್ಟ್ ಆದ ಪಾದ್ರಿಗಳು ಇದ್ದಾರೆ ಅಂತ ಚರ್ಚ್ ಮೇಲೆ ದಾಳಿ ಆಗ್ತಿದೆ ಈ ವಿಚಾರವನ್ನು ಗಮನಕ್ಕೆ ತಂದಿದೆ ಎಂದರು.