Asianet Suvarna News Asianet Suvarna News

ಸಣ್ಣ ನೀರಾವರಿ ಖಾತೆಗೆ ಬೆಲೆ ತಂದುಕೊಟ್ಟವರು ಸಿಎಸ್‌ಪಿ: ಡಾ.ನಿರ್ಮಾಲಾನಂದನಾಥ ಸ್ವಾಮೀಜಿ

ಸಣ್ಣ ನೀರಾವರಿ ಸಚಿವರಾಗಿ ಉತ್ತಮ ಕೆಲಸ ಮಾಡುವ ಮೂಲಕ ಸಣ್ಣ ನೀರಾವರಿ ಖಾತೆಗೆ ಬೆಲೆ ತಂದುಕೊಟ್ಟಕೀರ್ತಿ ಶಾಸಕ ಸಿ.ಎಸ್‌.ಪುಟ್ಟರಾಜು ಅವರಿಗೆ ಸಲ್ಲುತ್ತದೆ ಎಂದು ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಾಲಾನಂದನಾಥ ಸ್ವಾಮೀಜಿ ಹೇಳಿದರು.

Swamiji praised the performance of MLA CS Puttraju at pandavarapur rav
Author
First Published Feb 3, 2023, 9:08 AM IST

ಪಾಂಡವಪುರ (ಫೆ.3) : ಸಣ್ಣ ನೀರಾವರಿ ಸಚಿವರಾಗಿ ಉತ್ತಮ ಕೆಲಸ ಮಾಡುವ ಮೂಲಕ ಸಣ್ಣ ನೀರಾವರಿ ಖಾತೆಗೆ ಬೆಲೆ ತಂದುಕೊಟ್ಟಕೀರ್ತಿ ಶಾಸಕ ಸಿ.ಎಸ್‌.ಪುಟ್ಟರಾಜು ಅವರಿಗೆ ಸಲ್ಲುತ್ತದೆ ಎಂದು ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಾಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದ ಶ್ರೀರಾಮೇಶ್ವರ, ಶ್ರೀಆಂಜನೇಯಸ್ವಾಮಿ ಮತ್ತು ಪರಿವಾರ ದೇವಸ್ಥಾನಗಳ, ಪಾರ್ಕ್ಗಳ ಲೋಕಾರ್ಪಣೆ ಹಾಗೂ ಶ್ರೀರಾಮೇಶ್ವರ ಸಮುದಾಯ ಭವನ ಉದ್ಘಾಟನೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಸಂಸದೆ ಸುಮಲತಾರಿಂದ ಗ್ರಾಮಗಳಲ್ಲಿ ಸಾಮರಸ್ಯೆ ಹಾಳು; ಮಾಡರಹಳ್ಳಿ ಗ್ರಾಮಸ್ಥರು ಪ್ರತಿಭಟನೆ

ಸಣ್ಣ ನೀರಾವರಿ ಖಾತೆ ಎಂದರೆ ಎಲ್ಲರು ನನಗೆ ಬೇಡ ಎಂದು ಮೂಗು ಮುರಿಯುತ್ತಿದ್ದರು. ಆದರೆ, ಸಿ.ಎಸ್‌.ಪುಟ್ಟರಾಜು ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿ ಕೆಲಸ ಮಾಡಲು ಸಿಕ್ಕ ಅಲ್ಪಾವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದರು ಎಂದರು.

ರೈತರಿಗೆ ಉತ್ತಮ ನೀರಾವರಿ ಸೌಲಭ್ಯ, ಕೆರೆಕಟ್ಟೆಗಳು, ಚೆಕ್‌ ಡ್ಯಾಂಗಳ ನಿರ್ಮಾಣ ಮಾಡಿಕೊಡುವ ಮೂಲಕ ಸಣ್ಣ ನೀರಾವರಿ ಖಾತೆಗೆ ಗೌರವ ಹೆಚ್ಚಿಸುವ ಕೆಲಸ ಮಾಡಿದರು ಎಂದು ಬಣ್ಣಿಸಿದರು.

ಸಿ.ಎಸ್‌.ಪುಟ್ಟರಾಜು ಅವರು ಸೇವೆ ಕೇವಲ ಚಿನಕುರಳಿ, ಮೇಲುಕೋಟೆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಚಿನಕುರಳಿಯಿಂದ ಆದಿಚುಂಚಗಿರಿಯವರೆಗೂ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸಚಿವರಾಗಿ ಚುಂಚನಗಿರಿ ಕ್ಷೇತ್ರದಲ್ಲೂ ಹಲವು ಕೆರೆಗಳನ್ನು ಅಭಿವೃದ್ಧಿಸಿದ್ದಾರೆ. ನಾನು ಮಠಕ್ಕೆ ಬರುವುದಕ್ಕೂ ಮೊದಲಿಂದಲೂ ಪುಟ್ಟರಾಜು ಅವರಿಗೆ ಮಠದ ಸಂಪರ್ಕ ಹೊಂದಿದ್ದರು. ಪುಟ್ಟರಾಜು ಅವರದ್ದು ಮಠಕ್ಕೆ ಯಾವುದೇ ರಾಜಕೀಯ ಸಂಬಂಧವಿಲ್ಲ, ರಾಜಕೀಯ ಹೊರತಾದ ಮಠದ ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂದರು.

ಹಿರಿಯರನ್ನು ಗೌರವಿಸುವ ವಿನಯತೆ, ಸಹನಶೀಲತೆಯನ್ನು ಪುಟ್ಟರಾಜು ಅವರು ಚಿಕ್ಕಂದಿನಿಂದಲೂ ರೂಡಿಸಿಕೊಂಡಿದ್ದಾರೆ. ಹಿರಿಯರನ್ನು ಗೌರವಿಸಿ ನಡೆದುಕೊಳ್ಳುವ ಗುಣಗಳಿವೆಯೋ ಅವರ ಜೀವನದಲ್ಲಿ ನೆಮ್ಮದಿ, ಆರೋಗ್ಯ, ಆಯಸ್ಸು, ಅಧಿಕಾರ ದೊರೆಯುತ್ತದೆ. ಈ ಗುಣಗಳು ಪುಟ್ಟರಾಜು ಅವರಲ್ಲಿದ್ದು ಅದಕ್ಕಾಗಿಯೇ ಅವರಿಗೆ ಎಲ್ಲವೂ ದೊರೆತಿದೆ ಎಂದರು.

ಚಿನಕುರಳಿ ಗ್ರಾಮದಲ್ಲಿ ಶ್ರೀರಾಮೇಶ್ವರ ಸಮುದಾಯ ಭವನ, ಪರಿವಾರ ದೇವಸ್ಥಾನಗಳು, ಸುಂದರ ಪಾರ್ಕ್ಗಳು, ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ ಗ್ರಾಮದ ಯುವಕರು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಬೇಕು ಎಂದು ಸಲಹೆ ನೀಡಿದರು.

ಚಿನಕುರಳಿ ಆಗಮಿಸಿದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮಹಿಳೆಯರು ಪೂರ್ಣಕುಂಭ, ವಿವಿಧ ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಮಾಡಿಕೊಂಡು ವೇದಿಕೆಗೆ ಕರೆ ತರಲಾಯಿತು. ಇದೇ ವೇಳೆ ಹೊಸದಾಗಿ ನಿರ್ಮಿಸಿರುವ ರಾಷ್ಟ್ರಕವಿ ಕುವೆಂಪು ಹಾಗೂ ಭೈರವೈಕ್ಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೆಸರಿನ ಪಾರ್ಕ್ ಉದ್ಘಾಟನೆ ಮಾಡಲಾಯಿತು.

ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರ್ತಾರಾ?: ಸಚಿವ ನಾರಾಯಣಗೌಡ ಹೇಳಿದ್ದಿಷ್ಟು

ಸಮಾರಂಭದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಜಿಪಂ ಮಾಜಿ ಸದಸ್ಯ ಸಿ.ಅಶೋಕ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ವೈದ್ಯರಾದ ಡಾ.ಲಕ್ಷ್ಮೀಗೌಡ, ಡಾ.ಸೋಮಶೇಖರ್‌, ಡಾ.ತಿಬ್ಬೇಗೌಡ, ರಮೇಶ್‌ ಮಂಜೇಗೌಡ, ಶಾಂತರಾಮು, ಡಾ.ಎಚ್‌.ಆರ್‌.ತಿಮ್ಮೇಗೌಡ, ಜಯಕುಮಾರಿ, ಬೆಳ್ಳಾಳೆ ಮಲ್ಲೇಶ್‌, ಎಚ್‌.ಎಲ….ಶಿವಣ್ಣ, ರಮೇಶ್‌, ಮಾದಪ್ಪ, ನಾಗರಾಜು, ಯಜಮಾನರಾದ ತಮ್ಮಣ್ಣೇಗೌಡ, ಸುಬ್ಬೇಗೌಡ ಸೇರಿದಂತೆ ಹಲವರು ಹಾಜರಿದ್ದರು.

Follow Us:
Download App:
  • android
  • ios