Asianet Suvarna News Asianet Suvarna News

ಸಂಸದೆ ಸುಮಲತಾರಿಂದ ಗ್ರಾಮಗಳಲ್ಲಿ ಸಾಮರಸ್ಯೆ ಹಾಳು; ಮಾಡರಹಳ್ಳಿ ಗ್ರಾಮಸ್ಥರು ಪ್ರತಿಭಟನೆ

ಜನಪ್ರತಿನಿಧಿಗಳ ಮೇಲೆ ಸುಳ್ಳು ಆರೋಪ ಮಾಡುತ್ತಾ ಸಂಸದೆ ಸುಮಲತಾ ಗ್ರಾಮಗಳಲ್ಲಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಮಾಡರಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Harmony in villages destroyed by MP Sumalatha; Modarahalli villagers protest rav
Author
First Published Feb 3, 2023, 8:49 AM IST

ಪಾಂಡವಪುರ (ಫೆ.3) : ಜನಪ್ರತಿನಿಧಿಗಳ ಮೇಲೆ ಸುಳ್ಳು ಆರೋಪ ಮಾಡುತ್ತಾ ಸಂಸದೆ ಸುಮಲತಾ ಗ್ರಾಮಗಳಲ್ಲಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಮಾಡರಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು, ಸುಮಲತಾ((MP Sumalata) ಸಂಸದರಾಗಿ ಮೂರುವರೆ ವರ್ಷದಲ್ಲಿ ಕ್ಷೇತ್ರಕ್ಕೆ ಎಷ್ಟುಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಮಾಡರಹಳ್ಳಿ ಗ್ರಾಮಕ್ಕೆ ಆಗಮಿಸಿದ ಸಂಸದರು ಗ್ರಾಮದ ಅಭಿವೃದ್ಧಿ ವಿಚಾರವಾಗಿ ಯಾವುದನ್ನು ಸಹ ಚರ್ಚಿಸಿದೆ ರಾಜ್ಯ ಸರ್ಕಾರದ ಅನುದಾನಕ್ಕೆ ಭೂಮಿ ಪೂಜೆ ಮಾಡಿ ತೆರಳಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರ್ತಾರಾ?: ಸಚಿವ ನಾರಾಯಣಗೌಡ ಹೇಳಿದ್ದಿಷ್ಟು

ಕ್ಷೇತ್ರಕ್ಕೆ ಹಾಗೂ ಮಾಡರಹಳ್ಳಿ ಶಾಸಕ ಪುಟ್ಟರಾಜು ಕೊಡುಗೆ ಶೂನ್ಯ ಎಂದು ಸುಳ್ಳು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ತಮ್ಮ ಸಂಸದರ ಅನುದಾನತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಬದಲು ಸುಳ್ಳು ಆರೋಪ ಮಾಡುವ ಮೂಲಕ ಗ್ರಾಮಗಳಲ್ಲಿ ಸ್ವಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು. ಮಾಡರಹಳ್ಳಿ ಗ್ರಾಮಕ್ಕೆ ಶಾಸಕ ಸಿ.ಎಸ್‌.ಪುಟ್ಟರಾಜು ಅವರು ಅಪಾರ ಕೊಡುಗೆ ನೀಡಿ ಗ್ರಾಮವನ್ನು ಅಭಿವೃದ್ಧಿ ಪಡಿಸಿದ್ದಾರೆ. ಆದರೆ, ಸಂಸದರ ಕೊಡುಗೆಯಾದರು ಏನು ಎಂದು ಪ್ರಶ್ನಿಸಿದರು.

ಶಾಸಕ ಸಿ.ಎಸ್‌.ಪುಟ್ಟರಾಜು(MLA CS Putttaraju) ಗ್ರಾಮದಲ್ಲಿ 16 ಲಕ್ಷ ವೆಚ್ಚದಲ್ಲಿ ಮಾದರಿ ಅಂಗನವಾಡಿ ನಿರ್ಮಿಸಿದ್ದಾರೆ. 12 ಕೋಟಿ ವೆಚ್ಚದಲ್ಲಿ ಹಿರೇಮರಳಿಯಿಂದ ಗ್ರಾಮದ ಮೂಲಕ ಹಾದು ಹೋಗುವ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಕೆರೆ ಹೂಳು ತೆಗೆಯುವುದಕ್ಕೆ, ಸೋಪಾನ ಕಟ್ಟೆನಿರ್ಮಾಣಕ್ಕೆ 50 ಲಕ್ಷ ನೀಡಿದ್ದಾರೆ. ಗ್ರಾಮದಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣ, ದೇವಸ್ಥಾನ ನಿರ್ಮಾಣ ಸೇರಿದಂತೆ ಹಲವಾರು ಕೆಲಸ ಕಾರ್ಯಗಳನ್ನು ಮಾಡಿ ಅಭಿವೃದ್ಧಿ ಪಡಿಸಿದ್ದಾರೆ. ಇವುಗಳು ಶಾಸಕರ ಅಭಿವೃದ್ಧಿ ಕೆಲಸಗಳಲ್ಲವೇ ಎಂದು ಸಂಸದರಿಗೆ ತಿರುಗೇಟು ನೀಡಿದರು.

ಶಾಸಕರ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಸಂಸದರ ಸರ್ಟಿಪಿಕೆಚ್‌ ನೀಡುವ ಅವಶ್ಯಕತೆ ಇಲ್ಲ. ಸಿ.ಎಸ್‌.ಪುಟ್ಟರಾಜು ಸಚಿವರಾಗಿದ್ದ ವೇಳೆ ಸಾವಿರಾರು ಕೋಟಿ ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ನೀರಾವರಿ ಯೋಜನೆ ಮಂಜೂರು ಮಾಡಿಸಿದ್ದಾರೆ. ಸುಂಕಾತೊಣ್ಣೂರು ಗ್ರಾಪಂ ವ್ಯಾಪ್ತಿಯ ಕೆರೆಗಳಿಗೆ ಕಾವೇರಿ ನೀರು ತುಂಬಿಸಲು 30 ಕೋಟಿ ರು. ವೆಚ್ಚದಲ್ಲಿ ಸುಂಕಾತೊಣ್ಣೂರು ಏತನೀರಾವರಿ ಯೋಜನೆ ಮಂಜೂರಿ ಮಾಡಿಸಿದ್ದಾರೆ. ಹೊಸದಾಗಿ ವಿದ್ಯುತ್‌ ವಿತರಣಾ ಕೇಂದ್ರ ಮಂಜೂರು ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶಾಸಕ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸುವಂತೆ ಸುಮಲತಾ ವಿರುದ್ಧ ಆಕ್ರೋಶ ಹೊರಹಾಕಿದರು.

ಸುಮಲತಾ ರಾಜ್ಯಕಾರಣ ಪ್ರವೇಶಕ್ಕೆ ವೇದಿಕೆ ಸಿದ್ಧ?

ಪ್ರತಿಭಟನೆಯಲ್ಲಿ ಸುಂಕಾತೊಣ್ಣೂರು ಗ್ರಾಪಂ ಅಧ್ಯಕ್ಷ ಎಸ್‌.ಮಹೇಶ್‌, ಮಾಜಿ ಅಧ್ಯಕ್ಷ ಜೆ.ದೇವೆಗೌಡ, ಮುಂಖಡರಾದ ಎಂ.ಸಿ.ಶಂಕರೇಗೌಡ, ಎಂ.ಎಸ್‌.ಜವರೇಗೌಡ, ಎಸ್‌.ಕೋಡಗಳ್ಳಿ ಉಮೇಶ್‌, ಚೇತನ್‌, ರಾಮು, ನಾಗರಾಜು, ಮಾಯಿಗೌಡ, ಮಂಜುನಾಥ್‌, ಯೋಗರಾಜು ಸೇರಿದಂತೆ ಹಲವರು ಇದ್ದರು.

Follow Us:
Download App:
  • android
  • ios