ಕುಕ್ಕೆಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಬ್ದುಲ್‌ ನಝೀರ್‌ ಭೇಟಿ   ಪವಿತ್ರ ಸೇವೆಗಳಲ್ಲಿ ಒಂದಾದ ಆಶ್ಲೇಷ ಬಲಿ ಪೂಜೆಯನ್ನು ನೆರವೇರಿಸಿದರು

ಸುಬ್ರಹ್ಮಣ್ಯ (ಡಿ.28): ಭಾರತದ (India) ಸರ್ವೋಚ್ಚ ನ್ಯಾಯಾಲಯದ (Supreme Court) ನ್ಯಾಯಮೂರ್ತಿ ಅಬ್ದುಲ್‌ ನಝೀರ್‌ (Abdul Nazeer) ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ (Temple) ಕುಟುಂಬ ಸಮೇತರಾಗಿ ಭಾನುವಾರ ರಾತ್ರಿ ಆಗಮಿಸಿ ವಾಸ್ತವ್ಯ ಹೂಡಿದರು. ಸೋಮವಾರ ಬೆಳಗ್ಗೆ ಶ್ರೀ ದೇವಳಕ್ಕೆ ಆಗಮಿಸಿದ ಅವರು, ಶ್ರೀ ದೇವರ ದರುಶನ ಪಡೆದರು. ಬಳಿಕ ಪವಿತ್ರ ಸೇವೆಗಳಲ್ಲಿ ಒಂದಾದ ಆಶ್ಲೇಷ ಬಲಿ ಪೂಜೆಯನ್ನು ನೆರವೇರಿಸಿದರು. ಬಳಿಕ ಪ್ರಸಾದ ಸ್ವೀಕರಿಸಿದರು. ಸೋಮವಾರ ಸುಬ್ರಹ್ಮಣ್ಯದಲ್ಲೇ ವಾಸ್ತವ್ಯವಾಗಿರುವ ನ್ಯಾಯಧೀಶರು ಇಂದು ಇಲ್ಲಿಂದ ನಿರ್ಗಮಿಸಲಿದ್ದು, ಬಳಿಕ ಜಿಲ್ಲೆಯ ವಿವಿಧೆಡೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕ್ಷೇತ್ರಕ್ಕೆ ಆಗಮಿಸಿದ ನ್ಯಾಯಮೂರ್ತಿಗಳನ್ನು ದೇವಸ್ಥಾನದ (Temple) ವ್ಯವಸ್ಥಾಪನಾ ಸಮಿತಿ ವತಿಯಿಂದ ಗೌರವ ನೀಡಿ, ಸ್ವಾಗತಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ ರಾಂ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ, ಹಿರಿಯ ನ್ಯಾಯಧೀಶ (Judge) ಸೋಮಶೇಖರ್‌, ಕಿರಿಯ ನ್ಯಾಯಧೀಶ ಯಶವಂತ ಕುಮಾರ್‌, ಅಧಿಕಾರಿಗಳು, ನ್ಯಾಯಧೀಶರು, ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಿಗಿ ಬಂದೋಬಸ್ತ್ : ನ್ಯಾಯಧೀಶರ ಭೇಟಿ ಹಿನ್ನೆಲೆಯಲ್ಲಿ ಕುಕ್ಕೆ ಕ್ಷೇತ್ರದ ಪರಿಸರದಲ್ಲಿ ಬಿಗಿ ಪೊಲೀಸ್‌ (Police) ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ನ್ಯಾಯಧೀಶರು ದೇವಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರ ಭೇಟಿ, ವಾಹನ ಓಡಾಟ ಕೆಲ ಕಾಲ ನಿರ್ಬಂಧಿಸಲಾಗಿತ್ತು. ಝಡ್‌ ಪ್ಲಸ್‌ ಸೆಕ್ಯುರಿಟಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಎಡೆ ಸ್ನಾನಕ್ಕಿಲ್ಲ ಅವಕಾಶ :  ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ (Kukke Subramanya) ದೇವಾಲದ ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ನಡೆಸುವ ಎಡೆಸ್ನಾನ(Ede Snana) ಸೇವೆಯನ್ನು ರದ್ದು ಮಾಡಲಾಗಿದೆ.

ಇದೇ ಡಿಸೆಂಬರ್ 09ರಂದು ಚಂಪಾಪುಷ್ಠಿ ಮಹಾರಥೋತ್ಸವ ನಡೆಯಲಿದೆ. ಆದ್ರೆ, ಕೋವಿಡ್ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ರದ್ದು ಮಾಡಿ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಜಿಲ್ಲಾಡಳಿತದ ಸೂಚನೆಯಂತೆ ನಿರ್ಣಯ ಕೈಗೊಂಡಿದೆ.

ಚಂಪಾ ಷಷ್ಠಿಯ ವಿಶೇಷತೆ : ಶಿವ , ಸುಬ್ರಮಣ್ಯರ ಆರಾಧಾನ ದಿನ

 ಚಂಪಾಷಷ್ಠಿ ಮಹೋತ್ಸವದ ಚೌತಿ, ಪಂಚಮಿ, ಷಷ್ಠಿ ದಿನಗಳಂದು ಶ್ರೀ ದೇವಳದ ಹೊರಾಂಗಣದಲ್ಲಿ ಭಕ್ತಾಧಿಗಳು ಸ್ವಯಂ ಆಗಿ ನಡೆಸುವ ಎಡೆಸ್ನಾನ ನಡೆಸಲು ಈ ಬಾರಿಯು ಅವಕಾಶ ನೀಡಲಾಗಿಲ್ಲ. ಕೋವಿಡ್ ಹಿನ್ನಲೆಯಲ್ಲಿ ಕಳೆದ ವರ್ಷವೂ ಎಡೆಸ್ನಾನ ಸೇವೆಯನ್ನು ರದ್ದು ಮಾಡಲಾಗಿತ್ತು. ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

2020ರಲ್ಲೂ ಸಹ ಕೊರೋನಾ ಕಾರಣದಿಂದ ಎಡೆಸ್ನಾನ ಸೇವೆಗೆ ಅವಕಾಶ ನೀಡಿರಲಿಲ್ಲ. ಇದೀಗ ಈ ಬಾರಿಯೂ ಕೊರೋನಾ ವೈರಸ್ ರೂಪಾಂತರಿ ಎಮಿಕ್ರಾನ್ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಡೆಸ್ನಾನಕ್ಕೆ ಅವಕಾಶ ಕೊಡದಂತೆ ದೇವಾಸ್ಥಾನ ಸಮಿತಿಗೆ ಸೂಚನೆ ನೀಡಿದೆ. ಅದರಂತೆ ದೇವಸ್ಥಾನ ಮಂಡಳಿ ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ನಡೆಸುವ ಎಡೆಸ್ನಾನವನ್ನು ರದ್ದು ಮಾಡುವ ತೀರ್ಮಾನ ತೆಗೆದುಕೊಂಡಿದೆ.

2019ರಲ್ಲಿ 314 ಮಂದಿ ಎಡೆಸ್ನಾನ 
ಪುಣ್ಯ ಕ್ಷೇತ್ರದ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಷಷ್ಠಿ ವೇಳೆ 314 ಮಂದಿ ಎಡೆಸ್ನಾನ ಸೇವೆಗೈದಿದ್ದರು.

ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಎಡೆಸ್ನಾನ ಹರಕೆ ಸಲ್ಲಿಸಿದ್ದರು. ಚೌತಿ ದಿನ 100 ಭಕ್ತರು, ಪಂಚಮಿ ದಿನ 399 ಮಂದಿ ಹಾಗೂ ಷಷ್ಠಿಯಂದು 314 ಭಕ್ತರು ಈ ಸೇವೆ ನೆರವೇರಿಸಿದ್ದರು.

ಎಡೆಸ್ನಾನ-ಮಡೆಸ್ನಾನದಲ್ಲಿ ಜಾತಿ ಪ್ರಸ್ತಾಪದಿಂದ ಈ ಹಿಂದೆ ಭಾರೀ ವಿರೋಧ ವ್ಯಕ್ತವಾಗಿದ್ದವು. ತಿನ್ನುವ ಅನ್ನದ ಮೇಲೆ ಉರುಳಾಡಿ ಅದನ್ನು ವ್ಯರ್ಥ ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದರಿಂದ ಉಡುಪಿ ಕೃಷ್ಣಮಠದಲ್ಲಿ ನಡೆಯುತ್ತಿದ್ದ ಎಡೆಸ್ನಾನ-ಮಡೆಸ್ನಾನವನ್ನು ನಿಷೇಧಿಸಲಾಗಿದೆ.

ಚಂಪಾ ಷಷ್ಠಿಯ ವಿಶೇಷತೆ : ಶಿವ , ಸುಬ್ರಮಣ್ಯರ ಆರಾಧಾನ ದಿನ
ಚಂಪಾ ಷಷ್ಠಿ ಇದು ಶಿವ ಹಾಗೂ ಸುಬ್ರಮಣ್ಯನನ್ನು ಪೂಜಿಸುವ ಉತ್ಸವ . ಈ ಉತ್ಸವ ಆರು ದಿನಗಳ ಕಾಲ ನಡೆಯುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಶಿವನು ಖಂಡೋಬ ರೂಪದಲ್ಲಿ ನೆಲೆಸಿದ್ದು ಚಂಪಾ ಷಷ್ಠಿಯಂದು ಈ ಭಾಗಗಳಲ್ಲಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಈ ಉತ್ಸವ ಮಾರ್ಗಶಿರ ಮಾಸದ ಶುಕ್ಲಪಕ್ಷದಂದು ನಡೆಯುತ್ತದೆ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಸುಬ್ರಮಣ್ಯನನ್ನು ಈ ದಿನ ಆರಾಧಿಸುತ್ತಾರೆ. ಈ ಹಬ್ಬದ ಆಚರಣೆಯ ಮುಖ್ಯ ಉದ್ದೇಶ ಸಂತೋಷ, ನೆಮ್ಮದಿ , ಸುಖ, ಶಾಂತಿ ಆರೋಗ್ಯ , ಧನ್ಯಾತ್ಮಕ ಭಾವನೆಗಳು ಮನದಲ್ಲಿ ಉಂಟುಮಾಡಲಿವೆ ಎಂದು ಹೇಳುತ್ತಾರೆ.