ಶಿವಮೊಗ್ಗ ಸಂಡೇ ಲಾಕ್‌ಡೌನ್ ಬಹುತೇಕ ಯಶಸ್ವಿ
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಕೆಲ ಸಮಯ ತರಕಾರಿ, ಹಾಲು, ದಿನಸಿ, ಮೀನು-ಮಾಂಸ ಕೊಳ್ಳುವ ಸಲುವಾಗಿ ಹಾಗೂ ಔಷಧಿ ಖರೀದಿಗಾಗಿ ಜನತೆ ಮನೆಯಿಂದ ಹೊರಬಂದಿದ್ದನ್ನು ಹೊರತು ಪಡಿಸಿದರೆ, ಬಹುತೇಕ ಮಂದಿ ಮನೆಯಿಂದ ಹೊರಬಾರದೆ ಭಾನುವಾರದ ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.27): ಕೊರೋನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಜಾರಿ ಮಾಡಿರುವ ಭಾನುವಾರದ ಲಾಕ್‌ಡೌನ್ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಅಗತ್ಯ ವಸ್ತು, ತುರ್ತು ಸೇವೆ ಹೊರತು ಪಡಿಸಿ ಮಿಕ್ಕೆಲ್ಲ ವ್ಯಾಪಾರ ವಹಿವಾಟು ಬಂದ್ ಆಗಿತ್ತು. ಆದರೆ ಕೆಲವು ಯುವಕರು ಎಂದಿನಂತೆ ಬೈಕ್‌ನಲ್ಲಿ ಅಡ್ಡಾಡುತ್ತಿರುವ ದೃಶ್ಯವೂ ಕಂಡು ಬಂದಿತು.
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಕೆಲ ಸಮಯ ತರಕಾರಿ, ಹಾಲು, ದಿನಸಿ, ಮೀನು-ಮಾಂಸ ಕೊಳ್ಳುವ ಸಲುವಾಗಿ ಹಾಗೂ ಔಷಧಿ ಖರೀದಿಗಾಗಿ ಜನತೆ ಮನೆಯಿಂದ ಹೊರಬಂದಿದ್ದನ್ನು ಹೊರತು ಪಡಿಸಿದರೆ, ಬಹುತೇಕ ಮಂದಿ ಮನೆಯಿಂದ ಹೊರಬಾರದೆ ಭಾನುವಾರದ ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿದರು.
ಬೆಳಗ್ಗೆ ಕೆಲ ಸಮಯ ವಾಹನ ಸಂಚಾರ ವಿರಳವಾಗಿ ಕಂಡುಬಂದಿದ್ದರೂ ನಂತರ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿದ್ದವು. ಲಾಕ್‌ಡೌನ್ ಹಿನ್ನಲೆಯಲ್ಲಿ ಶಿವಮೊಗ್ಗದ ಗಾಂಧಿ ಬಜಾರ್, ಬಿಹೆಚ್ ರಸ್ತೆ, ನೆಹರೂ ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಜೈಲ್ ರಸ್ತೆ, ಲಕ್ಷ್ಮೀ ಟಾಕೀಸ್ ವೃತ್ತ, ಪೊಲೀಸ್ ಚೌಕಿ, ವಿದ್ಯಾನಗರ ಸೇರಿದಂತೆ ವಿವಿಧೆಡೆ ವರ್ತಕರು ಸ್ವಯಂ ಪ್ರೇರಣೆಯಿಂದ ಮಳಿಗೆಗಳನ್ನು ಬಂದ್ ಮಾಡಿದ್ದರು.
ಕಾರು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದವರನ್ನು ತಡೆದು ವಿಚಾರಣೆ ನಡೆಸಿ, ಅನಗತ್ಯವಾಗಿ ಮನೆಯಿಂದ ಹೊರಬಂದವರ ವಿರುದ್ದ ಪ್ರಕರಣ ದಾಖಲಿಸಿದರು. ತರಕಾರಿ, ಹಾಲು, ಮೀನು-ಮಾಂಸ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ತರಕಾರಿ ಹಾಗೂ ಮಾಂಸ ಖರೀದಿಗೆಂದೆ ಜನರು ಹೊರಬರುತ್ತಿದ್ದದು ಸಾಮಾನ್ಯವಾಗಿತ್ತು.
ಬೆಂಗಳೂರು: ಕೊರೋನಾ ವಾರ್ ರೂಂ ಸಹಾಯವಾಣಿಗೆ ಚಾಲನೆ
ಕೆಎಸ್‌ಆರ್‌ಟಿಸಿ, ಸಾರಿಗೆ ಸಾರಿಗೆ ಹಾಗೂ ಖಾಸಗಿ ಬಸ್ ಸಂಚಾರ ರಸ್ತೆಗಿಳಿಯಲಿಲ್ಲ. ಇನ್ನು ಆಟೋ ರಿಕ್ಷಾಗಳು ಬೆಳಗ್ಗೆ ಕೆಲ ಹೊತ್ತು ವಿರಳವಾಗಿ ರಸ್ತೆಗಿಳಿದಿದ್ದವು. ಕೇಂದ್ರ ಬಸ್ ನಿಲ್ದಾಣ, ಎಎ ವೃತ್ತ, ಗೋಪಿ ವೃತ್ತ, ಶಿವಪ್ಪನಾಯಕ ಸರ್ಕಲ್, ಜೈಲ್ ವೃತ್ತ, ಮಹಾವೀರ ವೃತ್ತ ಮತ್ತಿತರೆ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು.
ಭಾನುವಾರದ ಲಾಕ್‌ಡೌನ್‌ಗೆ ತಾಲೂಕು ಕೇಂದ್ರಗಳಲ್ಲೂ ಉತ್ತಮ ಪ್ರತಿಕ್ರಿಯೆ ದೊರಕಿತು. ತೀರ್ಥಹಳ್ಳಿ, ಸೊರಬ, ಶಿಕಾರಿಪುರ, ಸಾಗರ, ಭದ್ರಾವತಿ, ಹೊಸನಗರ, ರಿಪ್ಪನ್‌ಪೇಟೆ, ಆನಂದಪುರಂ, ನಗರ, ಕೋಣಂದೂರು ಸೇರಿದಂತೆ ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲೂ ಲಾಕ್‌ಡೌನ್‌ಗೆ ಜನರಿಂದ ಉತ್ತಮ ಸ್ಪಂದನೆ ದೊರಕಿತು.