ಮಂಗಳೂರು(ನ.25): ಲಕ್ಷ್ಮ ದೀಪೋತ್ಸವದ ನಿಮಿತ್ತ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ 87ನೇ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಲೋಕಸಭೆಯ ಮಾಜಿ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಚಾಲನೆ ನೀಡಲಿದ್ದಾರೆ.

ಇಸ್ಕಾನ್‌ನ ಇಂಡಿಯನ್‌ ಲೈಫ್‌ಸ್ಟೈಲ್‌ ಕೋಚ್‌ ಗೌರ್‌ ಗೋಪಾಲದಾಸ್‌ ಅಧ್ಯಕ್ಷತೆ ವಹಿಸಲಿದ್ದು, ಮೈಸೂರು ಫೋಕಸ್‌ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಡಿ.ಟಿ. ರಾಮಾನುಜಮ್‌, ಕದ್ರಿ ನವನೀತ ಶೆಟ್ಟಿ, ಸಾಹಿತಿ ಬೋಳುವಾರ್‌ ಮಹಮದ್‌ ಕುಂಞ ಉಪನ್ಯಾಸ ನೀಡಲಿದ್ದಾರೆ.

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಇಂದು ಜನ್ಮ ದಿನದ ಸಂಭ್ರಮ

ಕೆರೆಕಟ್ಟೆಉತ್ಸವ: ಲಕ್ಷ ದೀಪೋತ್ಸವದ ಅಂಗವಾಗಿ ಶ್ರೀಕ್ಷೇತ್ರದಲ್ಲಿ ಶನಿವಾರ ರಾತ್ರಿ ಕೆರೆಕಟ್ಟೆಉತ್ಸವ ಅತ್ಯಂತ ವೈಭವದಿಂದ ನೆರವೇರಿತು. ಮಂಗಳವಾರ ಅಮೃತ ವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್‌್ಥ ನಾರಾಯಣ್‌ ಚಾಲನೆ ನೀಡಲಿದ್ದಾರೆ. ಸಂಜೆ 7ರ ಬಳಿಕ ಮಂಜುನಾಥ ಸ್ವಾಮಿಯ ದೇಗುಲದಲ್ಲಿ ಲಕ್ಷ ದೀಪೋತ್ಸವ ಆರಂಭಗೊಳ್ಳಲಿದ್ದು, ಮಂಜುನಾಥೇಶ್ವರನ ಸನ್ನಿಧಾನ ದೀಪಗಳಿಂದ ಕಂಗೊಳಿಸಲಿದೆ.

ಲಕ್ಷ ದೀಪೋತ್ಸವದ ಸಂಭ್ರಮ:

ಕಾರ್ತಿಕ ಮಾಸದ ಕೊನೆಯ ಸೋಮವಾರದ ಅಂಗವಾಗಿ ಮಲೆ ಮಹದೇಶ್ವರಸ್ವಾಮಿ ಸೇರಿದಂತೆ ರಾಜ್ಯದ ವಿವಿಧ ದೇಗುಲಗಳಲ್ಲಿ ಲಕ್ಷ ದೀಪೋತ್ಸವ ವೈಭವದಿಂದ ನೆರವೇರಲಿದ್ದು, ಮಂಗಳವಾರ ಧರ್ಮಸ್ಥಳ, ಹುಬ್ಬಳ್ಳಿಯ ಸಿದ್ಧಾರೂಢ ಮಠ ಸೇರಿದಂತೆ ವಿವಿಧೆಡೆ ಲಕ್ಷ ದೀಪೋತ್ಸವದ ಸಂಭ್ರಮ ಮನೆ ಮಾಡಲಿದೆ.

ಮಂಗಳೂರು: 1 ದಿನದಲ್ಲಿ 750ಕ್ಕೂ ಅಧಿಕ ಆಧಾರ್‌ ತಿದ್ದುಪಡಿ..!