ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆಯಲ್ಲಿ ಆಧಾರ್‌ 2 ದಿನಗಳ ಆಧಾರ್‌ ತಿದ್ದುಪಡಿ ಅಭಿಯಾನದಲ್ಲಿ ಮೊದಲ ದಿನವೇ 750ಕ್ಕೂ ಅಧಿಕ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಲಾಗಿದ್ದು, ಇದು ರಾಜ್ಯದಲ್ಲಿ ದಾಖಲೆ ಸಾಧನೆಯಾಗಿದೆ. 

ಮಂಗಳೂರು(ನ.25): ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆಯಲ್ಲಿ ಆಧಾರ್‌ 2 ದಿನಗಳ ಆಧಾರ್‌ ತಿದ್ದುಪಡಿ ಅಭಿಯಾನದಲ್ಲಿ ಮೊದಲ ದಿನವೇ 750ಕ್ಕೂ ಅಧಿಕ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಲಾಗಿದ್ದು, ಇದು ರಾಜ್ಯದಲ್ಲಿ ದಾಖಲೆ ಸಾಧನೆಯಾಗಿದೆ.

ಆಧಾರ್‌ ಕಾರ್ಡ್‌ ತಿದ್ದುಪಡಿಗೆ ಬ್ಯಾಂಕ್‌, ನೆಮ್ಮದಿ ಕೇಂದ್ರ, ಅಂಚೆಕಚೇರಿಗಳಿಗೆ ತಮ್ಮ ಕೆಲಸವನ್ನು ಬಿಟ್ಟು ಅಲೆದಾಡುವ ಜನರಿಗೆ 2 ದಿನಗಳ ಆಧಾರ್‌ ಅಭಿಯಾನ ಬಹಳಷ್ಟುಉಪಯುಕ್ತವಾಗಿ ಪರಿಣಮಿಸಿದೆ.

ಮಂಗಳೂರು ಬಂದರಿಗೆ ಬಂತು ಐಷಾರಾಮಿ ಪ್ರವಾಸಿ ನೌಕೆ..!

ಬ್ಯಾಂಕ್‌, ಅಂಚೆ ಕಚೇರಿಗಳು ಹಾಗೂ ನೆಮ್ಮದಿ ಕೇಂದ್ರಗಳಲ್ಲಿ ದಿನಕ್ಕೆ ಗರಿಷ್ಠ 50 ಜನರಿಗೆ ಮಾತ್ರ ಆಧಾರ್‌ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಸಾವಿರಾರು ಜನರು ಆಧಾರ್‌ ತಿದ್ದುಪಡಿಗಾಗಿ ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡು,ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ನೇತೃತ್ವದಲ್ಲಿ, ಮರ್ಣೆ ಗ್ರಾಮ ಪಂಚಾಯಿತಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಎಣ್ಣೆಹೊಳೆ ಸಹಯೋಗದಲ್ಲಿ ಬೃಹತ್‌ ಆಧಾರ್‌ ತಿದ್ದುಪಡಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಸಾರ್ವಜನಿಕ ರಸ್ತೆಯ ಬದಿಯಲ್ಲೇ ನಡೆಯಿತು ಶವಸಂಸ್ಕಾರ..!

ಅದಕ್ಕಾಗಿ ವಾಟ್ಸ್ಯಾಪ್‌ನಲ್ಲಿ ಪ್ರಚಾರ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ತಮ್ಮ ಆಧಾರ್‌ ಕಾರ್ಡ್‌ನ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮುಂದಾಗಿದ್ದರು.

ಅದರಂತೆ ಸೋಮವಾರ ಟೋಕನ್‌ ವಿತರಿಸಿ ಬುಧವಾರ ಮತ್ತು ಗುರುವಾರ ತಿದ್ದುಪಡಿ ಕಾರ್ಯವನ್ನು ನಡೆಸಿದ್ದು, ಒಂದೇ ದಿನದಲ್ಲಿ 750ಕ್ಕೂ ಹೆಚ್ಚು ಆಧಾರ್‌ ಕಾರ್ಡ್‌ಗಳ ತಿದ್ದುಪಡಿ ಮತ್ತು ನೋಂದಣಿ ಮಾಡಿ ಕರ್ನಾಟಕದಲ್ಲೇ ಹೊಸ ಇತಿಹಾಸ ಸೃಷ್ಟಿಸಿದೆ.

ಬೆಳೆಹಾನಿ ಪರಿಹಾರ​: ಆಧಾರ್‌ ಮೂಲಕ ಸಂದಾಯ ವ್ಯವಸ್ಥೆ