ವಸಂತನಾಯ್ಕ ಕೊ*ಲೆ ಪ್ರಕರಣದ ಆರೋಪಿ ಸುಚಿತ್ರಾ, ತನ್ನ ನಿಜವಾದ ಹೆಸರು ಸುರೇಖಾ ಎಂಬುದನ್ನು ಮುಚ್ಚಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಪಡ್ಡೆ ಹುಡುಗರಿಗೆ ಬಲೆ ಬೀಸುತ್ತಿದ್ದಳು. ತಾನು ಅವಿವಾಹಿತೆ ಎಂದು ನಂಬಿಸಿ, ಅವರ ಆರ್ಥಿಕ ಸ್ಥಿತಿಗತಿ ಅರಿತು ಹಣ ಮತ್ತು ಆಸ್ತಿ ಪೀಕುತ್ತಿದ್ದ ವಿಚಾರ ಬಯಲಾಗಿದೆ.

ಶಿವಮೊಗ್ಗ: ವಸಂತನಾಯ್ಕ ಎನ್ನುವವರ ಕೊ*ಲೆ ಆರೋಪಿ ಸುಚಿತ್ರಾ ಅವರ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಇದೀಗ ಸುಚಿತ್ರಾ ಆಂಟಿ ಪಡ್ಡೆ ಹುಡುಗರನ್ನು ಪಟಾಯಿಸಲು ಡಿಫರೆಂಟ್ ಆಗಿ ಗಾಳ ಹಾಕುತ್ತಿದ್ದಳು ಎನ್ನುವ ವಿಚಾರವೀಗ ಬಯಲಾಗಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ರಾತ್ರಿ ಮನೆಗೆ ನುಗ್ಗಿ ಮನೆಯವರ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ವಸಂತ್ ನಾಯ್ಕ ಅವರನ್ನು ಚಾಕುವಿನಿಂದ ಚುಚ್ಚಿ ಕೊ*ಲೆ ಮಾಡಿದ ಪ್ರಕರಣದಡಿ ಜ್ಯೋತಿಷಿ ಕಮಲಕರ ಭಟ್, ಆತನ ಪ್ರೇಯಸಿ ಸುಚಿತ್ರಾ ಸೇರಿದಂತೆ ಅವರ ಗ್ಯಾಂಗ್‌ನ ಏಳು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಆಂಟಿ ಸುಚಿತ್ರಾಳ ಬಂಡವಾಳ ಬಗೆದಷ್ಟು ಬಯಲಾಗುತ್ತಾ ಬರುತ್ತಿದೆ. ಈಗಾಗಲೇ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿರುವ ಸುಚಿತ್ರಾ, ಪಡ್ಡೆ ಹುಡಗರನ್ನು ತನ್ನ ಬಲೆಗೆ ಕೆಡವಲು ತನ್ನ ಹೆಸರನ್ನೇ ಬದಲಿಸಿಕೊಂಡಿದ್ದಳು ಎನ್ನುವ ವಿಚಾರ ಬಯಲಾಗಿದೆ. ಇದಷ್ಟೇ ಅಲ್ಲದೇ ಆ ಹುಡುಗರ ಜತೆ ಕಲರ್ ಕಲರ್ ಕಾಗೆ ಹಾರಿಸುತ್ತಿದ್ದಳು.

ಸುರೇಖಾ ಅಂತ ಇದ್ದ ಹೆಸರನ್ನು ಸಚಿತ್ರಾ ಅಂತ ಈ ಆಂಟಿ ಹೆಸರು ಬದಲಿಸಿಕೊಂಡಿದ್ದಾಳೆ. ಆಕೆಯ ಮದುವೆಯ ಸರ್ಟಿಫಿಕೇಟ್‌ನಲ್ಲಿ ಸುರೇಖಾ ಎಂದು ಹೆಸರಿರುವ ಮಾಹಿತಿಯಿದೆ. ಆದರೆ ಹೊಸದಾಗಿ ಪರಿಚಯವಾದ ಹುಡುಗರಿಗೆ ಆಕೆ ತನ್ನ ಅಕ್ಕ ಎಂದು ತನ್ನ ಫೋಟೋವನ್ನೇ ಸುಚಿತ್ರಾ ತೋರಿಸುತ್ತಿದ್ದಳಂತೆ.

ನಾವಿಬ್ರೂ ಟ್ವಿನ್ಸ್, ನೋಡೋಕೆ ನಾವಿಬ್ರೂ ಸೇಮ್‌ ಟು ಸೇಮ್ ಇದ್ದೀವಿ. ಸುರೇಖಾ ಸಾವನ್ನಪ್ಪಿದ ಬಳಿಕ ಆಕೆಯ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಆ ಮಕ್ಕಳಿಗೆ ಮಹೇಶ ಅಂತ ಅಪ್ಪನಿದ್ದಾನೆ, ಅತ ಯಾವಾಗಲೂ ಬೆಂಗಳೂರಿನಲ್ಲಿ ಇರುತ್ತಾನೆ ಎಂದು ಸುಚಿತ್ರಾ ಕಥೆ ಕಟ್ಟಿದ್ದಳು. ಸುರೇಖಾಳ ಇಬ್ಬರು ಮಕ್ಕಳನ್ನು ನಾನೇ ಸಾಕುತ್ತಿದ್ದೇನೆ. ನನಗಿನ್ನೂ ಮಕ್ಕಳಾಗಿಲ್ಲ ಎಂದು ಸುಚಿತ್ರಾ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಹುಡುಗರ ಜತೆ ಪುಂಗುತ್ತಿದ್ದಳಂತೆ.

ಸೋಷಿಯಲ್ ಮೀಡಿಯಾದಲ್ಲಿ ಸ್ಮಾರ್ಟ್ ಹುಡುಗರಿಗೆ ಬಲೆ ಬೀಸುತ್ತಿದ್ದ ಸುಚಿತ್ರಾ:

ಕಿಲಾಡಿ ಆಂಟಿ ಸುಚಿತ್ರಾ, ಪಡ್ಡೆ ಹುಡುಗರನ್ನು ಬುಟ್ಟಿಗೆ ಹಾಕಿಕೊಳ್ಳಲು ಖತರ್‌ನಾಕ್ ಐಡಿಯಾ ಮಾಡುತ್ತಿದ್ದಳಂತೆ. ಮೊದಲಿಗೆ ಹ್ಯಾಂಡ್ಸಮ್‌ ಹುಡುಗರ ಫೋಟೋಗಳಿಗೆ ಕಮೆಂಟ್ ಮಾಡುತ್ತಿದ್ದಳಂತೆ. ಇದಾದ ಬಳಿಕ ಮೆಸೆಂಜರ್‌ನಲ್ಲಿ ಪಡ್ಡೆ ಹುಡುಗರ ಜತೆ ಮೆಸೇಜ್ ಮಾಡುತ್ತಿದ್ದಳಂತೆ. ಸ್ವಲ್ಪ ಸಮಯದ ಬಳಿಕ ಮೆಸೇಜ್‌ನಲ್ಲಿಯೇ ಮದುವೆಯಾಗಬೇಕು, ಒಳ್ಳೆ ಹುಡುಗರೇ ಸಿಗುತ್ತಿಲ್ಲ ಎಂದು ರೀಲ್ಸ್ ರಾಣಿ ಸುಚಿತ್ರಾ ರೀಲ್ ಬಿಡುತ್ತಿದ್ದಳಂತೆ.

ಹೊಸ ಹುಡುಗರ ಜತೆ ಎರಡು ಮೂರು ತಿಂಗಳುಗಳ ಕಾಲ ಚಾಟಿಂಗ್ ಮಾಡುತ್ತಲೇ ಆತನ ಆರ್ಥಿಕ ಮೂಲದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಳಂತೆ ಈ ಸುಚಿತ್ರಾ ಆಂಟಿ. ಇನ್ನು ಭೇಟಿಯಾದವನು ಸುಚಿತ್ರಾಗೆ ಇಷ್ಟವಾದ್ರೆ ಮುಂದೆ ಆತನಿಂದ ಹಣ, ಆಸ್ತಿ ಹಾಗೂ ಮಜಾ ಮಾಡುತ್ತಿದ್ದಳಂತೆ. ಇದೇ ಮಾರ್ಗದಲ್ಲಿ ಗಳಿಸಿದ ಹಣವನ್ನು ಬೇರೆಯವರಿಗೆ ಬಡ್ಡಿ ನೀಡಿ ಭರ್ಜರಿಯಾಗಿ ಕಮಾಯಿ ಮಾಡುತ್ತಿದ್ದಳು ಎನ್ನುವ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ.

ಏನಿದು ಸುಚಿತ್ರಾ-ಕಮಲಾಕರ ಭಟ್ ಅನೈತಿಕ ಸಂಬಂಧ ಪ್ರಕರಣ?

ಅವರಗುಪ್ಪದ ಮಹೇಶ ನಾಯ್ಕ ಎಂಬುವರು ಹೊಸೂರಿನ ಸುಚಿತ್ರಾಳನ್ನು ವಿವಾಹವಾಗಿದ್ದು, ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕೆಲ ತಿಂಗಳ ಹಿಂದೆ ಸುಚಿತ್ರಾ ಗಂಡನನ್ನು ತೊರೆದು ಮಕ್ಕಳನ್ನು ಕರೆದುಕೊಂಡು ಶಿವಮೊಗ್ಗದ ಕಮಲಾಕರ ಭಟ್‌ ಮನೆಯಲ್ಲಿ ವಾಸವಾಗಿದ್ದಳು. ಈ ಹೆಣ್ಣುಮಕ್ಕಳು ಕಮಲಾಕರ-ಸುಚಿತ್ರಾ ನಡುವಿನ ಅನೈತಿಕ ಸಂಬಂಧ ಹಾಗೂ ಅವರು ನೀಡುತ್ತಿದ್ದ ಹಿಂಸೆ ಕುರಿತು ತಂದೆಗೆ ಮಾಹಿತಿ ನೀಡಿದ್ದಾರೆ. ಆಗ ಫೆ.1ರಂದು ಮಗಳು ಮನೆಗೆ ಬಂದಿದ್ದಳು. ಇದರಿಂದ ಕೋಪಗೊಂಡ ಸುಚಿತ್ರಾ, ಕಮಲಾಕರ, ಉಳಿದ ಆರೋಪಿಗಳೊಂದಿಗೆ ಗಂಡ ಮಹೇಶ ನಾಯ್ಕ ಮನೆಗೆ ನುಗ್ಗಿ ಮಗಳನ್ನು ಕರೆದೊಯ್ಯಲು ಯತ್ನಿಸಿದ್ದಾರೆ. ಆಗ ನಡೆದ ವಾಗ್ವಾದ, ತಳ್ಳಾಟದಲ್ಲಿ ವಸಂತಗೆ ಚಾಕು ಇರಿಯಲಾಗಿತ್ತು.