ಕೊಡವರಿಗೆ ವಿಶೇಷ ಸ್ಥಾನಮಾನಕ್ಕೆ ಆಯೋಗ ರಚನೆ: ಸಿಎಂಗೆ ಪತ್ರ ಬರೆದ ಸುಬ್ರಮಣ್ಯನ್‌ ಸ್ವಾಮಿ

ಕೊಡವ ನ್ಯಾಷನಲ್‌ ಕೌನ್ಸಿಲ್‌ ಸಂಘಟನೆಯ ಬೇಡಿಕೆಯಂತೆ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿರುವ ಕೊಡಗು ಜಿಲ್ಲೆಯ ಬುಡಕಟ್ಟು ಜನಾಂಗ ಕೊಡವರಿಗೆ ವಿಶೇಷ ಸ್ಥಾನಮಾನ ಕಲ್ಪಿಸಲು ಸರ್ಕಾರ ಆಯೋಗವೊಂದನ್ನು ರಚಿಸಬೇಕೆಂದು ಒತ್ತಾಯಿಸಿ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣ್ಯನ್‌ ಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

Subramanian Swamy wrote a letter CM siddaramaiah for to create a commission for special status for kodava rav

ಮಡಿಕೇರಿ (ಜೂ.10) ಕೊಡವ ನ್ಯಾಷನಲ್‌ ಕೌನ್ಸಿಲ್‌ ಸಂಘಟನೆಯ ಬೇಡಿಕೆಯಂತೆ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿರುವ ಕೊಡಗು ಜಿಲ್ಲೆಯ ಬುಡಕಟ್ಟು ಜನಾಂಗ ಕೊಡವರಿಗೆ ವಿಶೇಷ ಸ್ಥಾನಮಾನ ಕಲ್ಪಿಸಲು ಸರ್ಕಾರ ಆಯೋಗವೊಂದನ್ನು ರಚಿಸಬೇಕೆಂದು ಒತ್ತಾಯಿಸಿ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣ್ಯನ್‌ ಸ್ವಾಮಿ(Dr. Subramanian Swamy), ಮುಖ್ಯಮಂತ್ರಿ ಸಿದ್ದರಾಮಯ್ಯ (ಛಂ ಶಿದದಾರಾಮಾಇಅಹ)ಅವರಿಗೆ ಪತ್ರ ಬರೆದಿದ್ದಾರೆ.

ಕೊಡವ(Kodava) ಸ್ವಾಯತ್ತ ನಾಡಿನ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಈಗಾಗಲೇ ಹೈಕೋರ್ಚ್‌ನಲ್ಲಿ ಅರ್ಜಿ ಸಲ್ಲಿಸಿರುವ ಅವರು ಜೂನ್‌ 14ರಂದು ಅರ್ಜಿ ವಿಚಾರಣೆಯ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಸ್ವಾಯತ್ತ ಕೊಡಗಿಗೆ ಆಯೋಗ: ಏ.17ಕ್ಕೆ ಹೈಕೋರ್ಟ್‌ನಲ್ಲಿ ವಿಚಾರಣೆ

ಪತ್ರದಲ್ಲಿ ಕೊಡವರ ಬೇಡಿಕೆಗಳ ಕುರಿತು ಉಲ್ಲೇಖಿಸಿರುವ ಡಾ.ಸುಬ್ರಮಣ್ಯನ್‌ ಸ್ವಾಮಿ, ಕೊಡವರಿಗೆ ಕರ್ನಾಟಕ ರಾಜ್ಯದಲ್ಲಿ ವಿಶೇಷ ಸ್ಥಾನಮಾನ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಆಯೋಗವೊಂದನ್ನು ರಚಿಸುವ ತುರ್ತು ಅಗತ್ಯತೆ ಇದೆ ಎಂದು ತಿಳಿಸಿದ್ದಾರೆ.

ಕೂಗ್‌ರ್‍ ಪ್ರದೇಶವು 1950 ಮತ್ತು 1956 ರ ನಡುವೆ ವಿಧಾನಸಭೆ, ಮುಖ್ಯಮಂತ್ರಿ, ಚುನಾಯಿತ ಲೋಕಸಭಾ ಸಂಸದ ಹಾಗೂ ರಾಜ್ಯಸಭಾ ಸಂಸದರನ್ನು ಹೊಂದಿರುವ ರಾಜ್ಯವಾಗಿತ್ತು. 1957ರಲ್ಲಿ ರಾಜ್ಯಗಳನ್ನು ಮರುಸಂಘಟಿಸಿದ ನಂತರ ಈ ಪ್ರದೇಶವನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಲಾಯಿತು. ಇದಾದ ನಂತರ ಕರ್ನಾಟದಲ್ಲಿ ಕೊಡವರ ಸ್ಥಿತಿ ಹೀನಾಯವಾಗಿದೆ. ಹೈದರಾಬಾದ್‌ ಕರ್ನಾಟಕ ಭಾಗದ ಕೆಲವು ಪ್ರದೇಶಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ತಾರತಮ್ಯವನ್ನು ಅನುಭವಿಸಿದ ಕೊಡವರಿಗೆ ಅಂತಹ ಯಾವುದೇ ಸ್ಥಾನಮಾನ ನೀಡಿಲ್ಲ. ಪಿಐಎಲ್‌ ಸ್ವರೂಪದ ನನ್ನ ರಿಟ್‌ ಅರ್ಜಿಯ ವಿಚಾರಣೆ ಜೂನ್‌ 14ರಂದು ನಡೆಯಲಿದೆ. ಈ ಸಂದರ್ಭ ನಾನು ಬೆಂಗಳೂರಿಗೆ ಆಗಮಿಸುತ್ತಿದ್ದು, ತಮ್ಮನ್ನು ಭೇಟಿಯಾಗಿ ಚರ್ಚಿಸಲು ಅವಕಾಶ ನೀಡಬೇಕೆಂದು ಡಾ.ಸುಬ್ರಮಣ್ಯನ್‌ ಸ್ವಾಮಿ, ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸ್ವಾಮಿ ಕ್ರಮ ಸ್ವಾಗತಾರ್ಹ

ಕೊಡವ ಲ್ಯಾಂಡ್‌ ಜಿಯೋ-ರಾಜಕೀಯ ಸ್ವಾಯತ್ತತೆ ಡಾ.ಸುಬ್ರಮಣಿಯನ್‌ ಸ್ವಾಮಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೊಡವಲ್ಯಾಂಡ್‌ ಭೌಗೋಳಿಕ-ರಾಜಕೀಯ ಸ್ವಾಯತ್ತತೆಗೆ ಸಂಬಂಧಿಸಿದಂತೆ ಗಮನ ಸೆಳೆದಿರುವುದು ಸ್ವಾಗತಾರ್ಹವೆಂದು ಕೊಡವ ನ್ಯಾಷನಲ್‌ ಕೌನ್ಸಿಲ್‌ ಸಂಘಟನೆ ಅಧ್ಯಕ್ಷ ಎನ್‌.ಯು.ನಾಚಪ್ಪ ತಿಳಿಸಿದ್ದಾರೆ.

ಕೊಡಗಿನಲ್ಲಿ ಕೋವಿ ಹಬ್ಬ: ಗತ್ತು, ಗಾಂಭೀರ್ಯ ಸಾರುವ ಈ ಹಬ್ಬದ ವಿಶೇಷತೆ ಏನು?

ಕೊಡವ ಜನಾಂಗದ ಅಭ್ಯುದಯಕ್ಕಾಗಿ ಸಿಎನ್‌ಸಿ ಪ್ರಸ್ತಾಪಿಸಿರುವ ಬೇಡಿಕೆಗಳ ಪರವಾಗಿ ಸ್ವಾಮಿ ಅವರು ಹೆಚ್ಚು ಕಾಳಜಿ ತೋರಿ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಮಾತ್ರವಲ್ಲದೆ ಇದೀಗ ಮುಖ್ಯಮಂತ್ರಿಗಳ ಮಟ್ಟದಲ್ಲಿ ವ್ಯವಹರಿಸಿ ಕೊಡವರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಿರುವುದು ಶ್ಲಾಘನೀಯವೆಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios