Asianet Suvarna News Asianet Suvarna News

ಶಾಲೆ ರಿಓಪನ್, ಆದ್ರೆ ಬಸ್‌ಗಳೇ ಇಲ್ಲ: 5 ಕಿಮೀ ನಡೆದು ಹೋಗ್ತಿದ್ದಾರೆ ಮಕ್ಕಳು

5 ಕಿಮೀ ಕಾಲ್ನಡಿಗೆಯಲ್ಲಿ ಹೋಗ​ಬೇ​ಕು ಶಾಲೆಗೆ | ಮೋರನಾಳ ಗ್ರಾಮದ ವಿದ್ಯಾರ್ಥಿಗಳ ಪಜೀತಿ | ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ | ಕೋವಿಡ್‌ ಲಾಕ್‌ಡೌನ್‌ನಲ್ಲಿ ಬಂದ್‌ ಆಗಿರುವ ಬಸ್‌ಗಳು

Students in koppal walks 5 kilometre to reach school as there is no bus service dpl
Author
Bangalore, First Published Jan 6, 2021, 2:48 PM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜ.06): ನಿತ್ಯವೂ ಐದು ಕಿಮೀ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗಬೇಕು. ಅದರಲ್ಲೂ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರೇ ಇದ್ದರೂ ಬಸ್ಸಿಲ್ಲ. ಕೋವಿಡ್‌ ಲಾಕ್‌ಡೌನ್‌ ವೇಳೆಯಲ್ಲಿ ಬಂದಾದ ಬಸ್ಸುಗಳು ಮತ್ತೆ ಪ್ರಾರಂಭವಾಗಿಲ್ಲ.

ಇದು, ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಿಂದ ಅಳವಂಡಿ ಗ್ರಾಮಕ್ಕೆ ಹೈಸ್ಕೂಲ್‌ಗೆ ನಡೆದುಕೊಂಡು ಹೋಗುತ್ತಿರುವ ವಿದ್ಯಾರ್ಥಿಗಳ ಫಜೀತಿ. ಗ್ರಾಮದಲ್ಲಿ ಹೈಸ್ಕೂಲ್‌ ಇಲ್ಲದಿರುವುದರಿಂದ ಹೈಸ್ಕೂಲ್‌ ಕಲಿಯಲು ತಮ್ಮೂರಿಂದ ಸುಮಾರು 5 ಕಿಮೀ ದೂರ ಇರುವ ಅಳವಂಡಿ ಗ್ರಾಮಕ್ಕೆ ಹೋಗಬೇಕು. ಲಾಕ್‌ಡೌನ್‌ ಬಳಿಕ ಹತ್ತು ತಿಂಗಳ ತರುವಾಯ ಶಾಲೆಗಳು ಜ. 1ರಿಂದ ಪ್ರಾರಂಭವಾಗಿದ್ದು, ನಿತ್ಯವೂ ನಡೆದುಕೊಂಡೇ ಶಾಲೆ ಹೋಗಿ-ಬರು​ತ್ತಾ​ರೆ.

ಅಖಿಲೇಶ್‌ ವಿರುದ್ಧ ಸಂಸದ ತೇಜಸ್ಚಿ ಸೂಯ್ ಕಿಡಿ

ಹೈಸ್ಕೂಲ್‌ ಓದಬೇಕು ಎಂದರೆ ಈ ಗ್ರಾಮದ ವಿದ್ಯಾರ್ಥಿಗಳು ಈಗ ನಿತ್ಯವೂ ಹತ್ತು ಕಿಮೀ ನಡೆಯಲೇಬೇಕು. ಜಪಾನ್‌ನಲ್ಲಿ ಕೇವಲ ಓರ್ವ ವಿದ್ಯಾರ್ಥಿಗಳಿಗೆ ಒಂದು ರೈಲ್ವೆ ಓಡುತ್ತದೆಯಂತೆ. ಇಲ್ಲಿ ಒಂದು ಬಸ್‌ ಬಿಡುತ್ತಿಲ್ಲವಲ್ಲ ಎಂದು ವಿದ್ಯಾರ್ಥಿಗಳು ಗೋಳಿಡುತ್ತಿದ್ದಾರೆ.

ಲಾಕ್‌ಡೌನ್‌ ತೆರವಾಗಿ ತಿಂಗಳುಗಳೇ ಕಳೆ​ದಿ​ವೆ. ಆದರೂ ನಿಗದಿತ ಬಸ್ಸುಗಳು ಓಡಾಟ ಪ್ರಾರಂಭವಾಗಿಲ್ಲ. ಸರ್ಕಾರ ಕೇವಲ ಶಾಲೆ ತೆರೆಯುವುದಕ್ಕೆ ಮಾತ್ರ ಆದೇಶ ಮಾಡಿತೇ ಹೊರತು ಶಾಲೆ ಪ್ರಾರಂಭವಾದ ಮೇಲೆ ಹಳ್ಳಿಯಿಂದ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಸಂಚ​ರಿ​ಸುವ ಬಸ್‌ಗಳನ್ನು ಪ್ರಾರಂಭಿಸಲಿಲ್ಲ.

ಮೋರನಾಳ ಗ್ರಾಮದಿಂದ ಅಳವಂಡಿ ಮಾರ್ಗವಾಗಿ ಮುಂಡರಗಿಗೆ ಚಲಿಸುವ ಬಸ್‌ಗ​ಳಿ​ವೆ. ಕೋವಿಡ್‌ನಿಂದಾಗ ಅವುಗಳು ಬಂದಾಗಿವೆ. ಅದರಲ್ಲೂ ಕೆಲವೊಂದು ಪ್ರಾರಂಭವಾಗಿದ್ದು, ಆಗೊಮ್ಮೆ, ಈಗೊಮ್ಮೆ ಬಂದು ಹೋಗುತ್ತಿವೆ. ಆದರೆ, ಶಾಲೆಯ ಸಮಯಕ್ಕೆ ಸಂಚ​ರಿ​ಸುತ್ತಿದ್ದ ಬಸ್‌ಗಳು ಇನ್ನೂ ಪ್ರಾರಂಭವಾಗಿಲ್ಲ. ಹೀಗಾಗಿ, ಅನಿವಾರ್ಯವಾಗಿ ಕಳೆದೈದು ದಿನಗಳಿಂದ ನಾವು ಶಾಲೆಗೆ ನಡೆದುಕೊಂಡು ಹೋಗುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳಿಗೆ ಸ್ಪಂದಿಸಿ, ಶಿಕ್ಷಣ ಸಚಿವರಿಗೆ ಸಿದ್ಧಗಂಗ ಶ್ರೀ ಮನವಿ

ಕೈಯಲ್ಲಿ ಬುತ್ತಿ, ಹೆಗಲ ಮೇಲೆ ಸ್ಕೂಲ್‌ ಬ್ಯಾಗ್‌ ಹೊತ್ತುಕೊಂಡು ಐದು ಕಿಮೀ ಉದ್ದಕ್ಕೂ ನಡೆದುಕೊಂಡು ಹೋಗುತ್ತಿವುದನ್ನು ನೋಡಿದರೆ ಎಂಥವರ ಕರುಳು ಚುರ್‌ ಎನ್ನುತ್ತಿದೆ. ಇದೆಲ್ಲವೂ ಗೊತ್ತಿದ್ದರೂ ಸಂಬಂಧಪಟ್ಟವರು ಗಮನ ಹರಿಸುತ್ತಲೇ ಇಲ್ಲ ಎನ್ನುವುದೇ ಬೇಸರದ ಸಂಗತಿ.

ಶಾಲೆ ಪ್ರಾರಂಭವಾಗಿದ್ದನ್ನೇ ದೊಡ್ಡ ಸಾಧನೆ ಎನ್ನುವಂತೆ ಸರ್ಕಾರ ಬೀಗುತ್ತಿದೆ. ಆದರೆ, ಅದರ ಸುತ್ತಮುತ್ತಲ ಸಮಸ್ಯೆಗಳ ಇತ್ಯರ್ಥಕ್ಕೂ ಮುಂದಾಗದಿದ್ದರೇ ಹೇಗೆ? ಸರ್ಕಾರ ಕೂಡಲೇ ರಾಜ್ಯಾದ್ಯಂತ ಶಾಲಾ ವಿದ್ಯಾರ್ಥಿಗಳ ಸುತ್ತಾಟಕ್ಕೆ ಕೂಡಲೇ ಬಂದಾಗಿರುವ ರೂಟ್‌ಗಳನ್ನು ಪ್ರಾರಂಭಿಸಬೇಕಾಗಿದೆ.

ನಾಲ್ಕಾರು ಕಿಮೀ ದೂರ ಶಾಲೆ ಇರುವ ವಿದ್ಯಾರ್ಥಿಗಳು ಹೇಗೋ ಶಾಲೆಗೆ ಕಾಲ್ನಡಿಗೆಯಲ್ಲಿ ಕ್ರಮಿಸಿ ಹೋಗುತ್ತಾರೆ. ಆದರೆ, ಹತ್ತಾರು ಕಿಮೀ ದೂರ ಇರುವ ಶಾಲೆಗಳಿಗೆ ವಿದ್ಯಾರ್ಥಿಗಳು ಹೋಗುವುದಾದರೂ ಹೇಗೆ? ಆದ್ದರಿಂದ ಸರ್ಕಾರ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿಸೆಯಲ್ಲಿ ಬಸ್‌ ರೂಟ್‌ಗಳನ್ನು ಪ್ರಾರಂಭಿಸುವ ಅಗತ್ಯವಿದೆ ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.

ಹಂತ ಹಂತವಾಗಿ ಬಿಡಿಎ ಪಾರ್ಕ್‌ಗಳು ಬಿಡಿಎಗೆ ಹಸ್ತಾಂತರ

ನಿತ್ಯ ಹತ್ತು ಕಿಮೀ ನಡೆದು ಶಾಲೆಗೆ ಹೋಗಿ ಬರುವುದು ದುಸ್ತರವಾಗುತ್ತದೆ. ಹೀಗಾಗಿ, ಅನೇಕ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ. ಕೆಲವೇ ಕೆಲವರು ಅನಿವಾರ್ಯವಾಗಿ ಹೋಗಿ ಬರುತ್ತೇವೆ. ಆದರೂ ನಮಗೂ ಸುಸ್ತಾಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.

Follow Us:
Download App:
  • android
  • ios