Asianet Suvarna News Asianet Suvarna News

ನಿಟ್ಟೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾದಾಮಿಯ ವಿದ್ಯಾರ್ಥಿನಿಗೆ ಕೊರೋನಾ

ಕಾರ್ಕಳ ತಾಲೂಕಿನ ನಿಟ್ಟೆಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದ್ದು, ಇದು ಜಿಲ್ಲೆಯಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಆದರೆ, ಆಕೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ನಿವಾಸಿಯಾಗಿದ್ದು, ಆಕೆ ಮನೆಗೆ ಹೋದ ಮೇಲೆ ಆಕೆಗೆ ಕೊರೋನಾ ಸೊಂಕು ತಗುಲಿದೆ ಎಂದು ತಿಳಿದು ಬಂದಿದೆ.

 

Student from bagalkot studying in Udupi found corona positive
Author
Bangalore, First Published May 7, 2020, 7:46 AM IST

ಉಡುಪಿ(ಮೇ.07): ಕಾರ್ಕಳ ತಾಲೂಕಿನ ನಿಟ್ಟೆಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದ್ದು, ಇದು ಜಿಲ್ಲೆಯಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಆದರೆ, ಆಕೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ನಿವಾಸಿಯಾಗಿದ್ದು, ಆಕೆ ಮನೆಗೆ ಹೋದ ಮೇಲೆ ಆಕೆಗೆ ಕೊರೋನಾ ಸೊಂಕು ತಗುಲಿದೆ ಎಂದು ಬಾಗಲಕೋಟೆಯ ಜಿಲ್ಲಾಧಿಕಾರಿ ದೃಢಪಡಿಸಿದ್ದಾರೆ.

"

ಆದ್ದರಿಂದ ಉಡುಪಿ ಜಿಲ್ಲೆಯ ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದ್ದಾರೆ. ಆಕೆ ಮಾ.14 ರಂದು ಆಕೆ ಬಾದಾಮಿಗೆ ಹೋಗಿದ್ದರು, ಆಗ ಉಡುಪಿ ಜಿಲ್ಲೆಯಲ್ಲಿ ಅಥವಾ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಕೋವಿಡ್‌ ಪ್ರಕರಣ ಇರಲಿಲ್ಲ.

ಮಂಗಳೂರಲ್ಲಿ ಹೆಚ್ಚಿದ ಕೊರೋನಾತಂಕ: ಊರಿಗೆ ಕಳುಹಿಸುವಂತೆ ಕಾರ್ಮಿಕರ ಪ್ರತಿಭಟನೆ

ಆದ್ದರಿಂದ ಉಡುಪಿ ಜಿಲ್ಲೆಯಿಂದ ಯುವತಿಗೆ ಕೋರೊನಾ ಬಂದಿಲ್ಲ. ಆಕೆ ಬಾಗಲಕೋಟೆಗೆ ಹೋದ ಮೇಲೆ ಸ್ಥಳೀಯ ಸಂಪರ್ಕದಿಂದ ಕರೋನಾ ಬಂದಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ ಎಂದು ಉಡುಪಿ ಡಿಸಿ ಹೇಳಿದ್ದಾರೆ.

Follow Us:
Download App:
  • android
  • ios