ಹಾಸನ (ಆ.22): ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ ಹಾಕಿ ನಷ್ಟಮಾಡಿದವನ ಬಳಿ ಹಣ ಇಲ್ಲದಿದ್ದರೆ, ಬೆಂಕಿ ಇಡು ಎಂದು ಹೇಳಿದವನ ಬಳಿ ವಸೂಲಿ ಮಾಡುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು. 

ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ‘ಈಗಾಗಲೇ ಪೊಲೀಸರು ಎಲ್ಲಾ ದೃಷ್ಟಿಕೋನದಿಂದಲೂ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಗಲಭೆ ಮಾಡಿ ಆಸ್ತಿಪಾಸಿ ನಷ್ಟಮಾಡಿದವರಿಂದಲೇ ನಷ್ಟವಸೂಲಿ ಮಾಡಿದರೋ ಹಾಗೆ ಇಲ್ಲಿಯೂ ನಷ್ಟವಸೂಲಿ ಮಾಡಲಾಗುವುದು. ಅವರಿಂದ ನಷ್ಟಭರಿಸಲಾಗದಿದ್ದರೆ ಆಸ್ತಿ ಜಪ್ತಿ ಮಾಡಲಾಗುವುದು. 

ಅಖಂಡ ಕಣ್ಣೀರು, ಮನೆ ಸುಟ್ಟಿದ್ದಕ್ಕಿಂತಲೂ ನೋವು ತಂದ ಬೇರೆ ವಿಚಾರ..

ಆಸ್ತಿ ಇಲ್ಲ ಎಂದರೆ, ಗಲಭೆಗೆ ಕುಮ್ಮಕ್ಕು ನೀಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು. ಸಂಘ​ಟನೆ ನಿಷೇಧ ವಿಚಾರದಲ್ಲಿ ಭಾವ​ನಾ​ತ್ಮಕವಾಗಿ ವರ್ತಿ​ಸಲು ಆಗಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದರು.

ಸುಟ್ಟಮನೆಯಲ್ಲಿ ಶಾಸಕ ಹೇಳಿದ ಗಲಭೆ ರಹಸ್ಯ; ಅಖಂಡ ಮನೆ ಹೇಗಿದೆ?

"